ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಅರಣ್ಯ ಇಲಾಖೆ ವತಿಯಿಂದ ಹಿರಿಯ ಅರಣ್ಯ ಅಧಿಕಾರಿ ಕೀರ್ತಿ ಚಕ್ರ ಡಿಸಿಎಫ್ ಶ್ರೀನಿವಾಸನ್, ಗೋಪಿನಾಥಂ ಅವರ ಹುತಾತ್ಮ ಸ್ಥಳ ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಎರಕೆ ಹಳ್ಳ ಅರಣ್ಯ ಪ್ರದೇಶದಲ್ಲಿ ಹುತಾತ್ಮರ ದಿನಾಚರಣೆಯನ್ನು ಸೆ.11ರಂದು ಹಮ್ಮಿಕೊಳ್ಳಲಾಗಿದೆ.1991ರ ನ.9ರಂದು ಕುಖ್ಯಾತ ನರಹಂತಕ ವೀರಪ್ಪನ್ ಶರಣಾಗುವುದಾಗಿ ಮಾಹಿತಿ ರವಾನಿಸಿದ ತಕ್ಷಣ ಹುತಾತ್ಮ ಡಿಸಿಎಫ್ ಶ್ರೀನಿವಾಸನ್ ನಂಬಿಕೆಯಿಂದ ಗೋಪಿನಾಥಂ ದೂರದಲ್ಲಿರುವ ಎರಕೆಹಳ್ಳ ಅರಣ್ಯ ಪ್ರದೇಶಕ್ಕೆ ಒಬ್ಬರೇ ತೆರಳಿದಾಗ ಅವರನ್ನು ಅಪಹರಿಸಿ ವೀರಪ್ಪನ್ ಮರುದಿನ ತಲೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಅರಣ್ಯ ಇಲಾಖೆಯ ದಿಟ್ಟ ದಕ್ಷ ಅಧಿಕಾರಿಯಾಗಿ ಅಮರರಾಗಿ ಹೋದ ಡಿಸಿಎಫ್ ಶ್ರೀನಿವಾಸನ್ ಅವರ ನೆನಪಿನಲ್ಲಿ ಉಳಿಯುವಂತೆ ಅರಣ್ಯ ಇಲಾಖೆ ಹುತಾತ್ಮ ದಿನಾಚರಣೆಯನ್ನು ಪ್ರತಿ ವರ್ಷ ನ.11ರಂದು ನಡೆಸಲಾಗುತ್ತಿದೆ. ಜೊತೆಗೆ ಪ್ರತಿವರ್ಷದಂತೆ ಸೆ.11ರಂದು ಸಹ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಇಲಾಖೆ ಕಾವೇರಿ ವನ್ಯಧಾಮ ವಿಭಾಗದ ಮಲೆಮಾದೇಶ್ವರ ವನ್ಯಜೀವಿ ವಿಭಾಗಗಳು ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹುತಾತ್ಮ ಶ್ರೀನಿವಾಸನ್ ಅವರ ಸ್ಮಾರಕ ಇರುವ ಸ್ಥಳದಲ್ಲಿ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ.ಗಡಿಗ್ರಾಮ ಗೋಪಿನಾಥನಲ್ಲೂ ದಿನಾಚರಣೆ:ತಾಲೂಕಿನ ಗಡಿಯಂಚಿನ ವೀರಪ್ಪನ್ ಹುಟ್ಟೂರು ಗೋಪಿನಾಥಂ ಗ್ರಾಮದ ಗ್ರಾಮದೇವತೆ ದೇವಾಲಯದ ಮುಂಭಾಗ ಹುತಾತ್ಮರಾದ ದಕ್ಷ ಅರಣ್ಯ ಇಲಾಖೆ ಅಧಿಕಾರಿ ಡಿಸಿಎಫ್ ಶ್ರೀನಿವಾಸನ್ ನಿರ್ಮಾಣ ಮಾಡಿರುವ ಮಾರಿಯಮ್ಮ ದೇವಾಲಯದ ಮುಂಭಾಗ ಸಹ ಶ್ರೀನಿವಾಸನ್ ಪುತ್ಥಳಿ ನಿರ್ಮಾಣಗೊಂಡಿದೆ. ಮೊದಲಿಗೆ ಗ್ರಾಮದ ಜನತೆ ಸೇರಿದಂತೆ ಅರಣ್ಯ ಇಲಾಖೆ ಜನಪ್ರತಿನಿಧಿಗಳು ಸ್ಥಳದಲ್ಲಿ ಹುತಾತ್ಮ ಅಧಿಕಾರಿಯ ಬಗ್ಗೆ ನೆನೆಯುತ್ತಾ ಶ್ರೀನಿವಾಸನ್ ಗುಣಗಾನ ಮಾಡಲಿದ್ದಾರೆ.ಮಿಸ್ಟ್ರಿ ಕ್ಯಾಂಪ್‌ನಲ್ಲೂ ಶ್ರೀನಿವಾಸನ್ ಪುತ್ಥಳಿ
ಅರಣ್ಯ ಇಲಾಖೆ ಹುತಾತ್ಮ ಡಿಸಿಎಫ್ ಶ್ರೀನಿವಾಸನ್ ತಿಟ್ಟ ಅಧಿಕಾರಿಯ ಬಗ್ಗೆ ಗೋಪಿನಾಥ ಮಿಸ್ಟ್ರಿ ಕ್ಯಾಂಪ್‌ನಲ್ಲೂ ಪುತ್ಥಳಿ ಇಡಲಾಗಿದೆ. ಅಲ್ಲಿಯೂ ಹುತಾತ್ಮ ದಿನಾಚರಣೆ ಅಂಗವಾಗಿ ಗೌರವ ಸಮರ್ಪಣೆ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಲಿದೆ. ಹೀಗಾಗಿ ಸೆ.11ರಂದು ಗಡಿ ಗ್ರಾಮ ಗೋಪಿನಾಥಂ ಮತ್ತು ಮಿಸ್ಟರಿ ಕ್ಯಾಂಪ್ ಎರಕೆ ಹಳ್ಳ ಕಡೆಗಳಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಶಾಲೆ ಕಾಲೇಜಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹುತಾತ್ಮ ಅರಣ್ಯಾಧಿಕಾರಿಯ ಸ್ಮರಣೆಯ ದಿನಾಚರಣೆ ಅಂಗವಾಗಿ ಸಕಲ ಸಿದ್ಧತೆಗೆ ಕ್ರಮ ಕೈಗೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಹಿರಿಯ ಅರಣ್ಯಾಧಿಕಾರಿಗಳು ನಿವೃತ್ತ ಅರಣ್ಯ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿ ವರ್ಗ ಮತ್ತು ಗೋಪಿನಾಥ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.