ವಿಧಾನಸೌಧ ಎದುರಿನ ಫುಟ್ಪಾತಲ್ಲಿ ಸಿನಿಮಾ ಹಾಡು ಪ್ರಮೋಷನ್‌: ದಂಡ

| Published : Sep 15 2025, 01:00 AM IST

ವಿಧಾನಸೌಧ ಎದುರಿನ ಫುಟ್ಪಾತಲ್ಲಿ ಸಿನಿಮಾ ಹಾಡು ಪ್ರಮೋಷನ್‌: ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸೌಧ ಎದುರಿನ ಪಾದಚಾರಿ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ‘ಕಂಗ್ರಾಜುಲೇಷನ್‌ ಬ್ರದರ್‌’ ಸಿನಿಮಾ ತಂಡದಿಂದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು 5 ಸಾವಿರ ರು. ದಂಡ ವಸೂಲಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸೌಧ ಎದುರಿನ ಪಾದಚಾರಿ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ‘ಕಂಗ್ರಾಜುಲೇಷನ್‌ ಬ್ರದರ್‌’ ಸಿನಿಮಾದ ‘ಹಳೇ ಸನ್ಯಾಸಿ...’ ಹಾಡಿನ ಪ್ರಚಾರ ಮಾಡಿದ ಸಿನಿಮಾ ತಂಡದಿಂದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು 5 ಸಾವಿರ ರು. ದಂಡ ವಸೂಲಿ ಮಾಡಿದ್ದಾರೆ.

ವಿಧಾನಸೌಧ ಠಾಣೆ ಹೆಡ್‌ಕಾನ್ಸ್‌ಟೇಬಲ್‌ ಶಿವಕುಮಾರ್‌ ಅವರು ನೀಡಿದ ದೂರಿನ ಮೇರೆಗೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಆರೋಪದಡಿ ಎಫ್‌ಐಆರ್‌ ದಾಖಲಾಗಿತ್ತು.

ಏನಿದು ಪ್ರಕರಣ?:

ಸಿನಿಮಾ ತಂಡದ ಸದಸ್ಯರು ಆ.30ರಂದು ಸಂಜೆ ವಿಧಾನಸೌಧದ ಎದುರಿನ ಅಂಬೇಡ್ಕರ್‌ ವೀದಿಯ ಪಾದಚಾರಿ ಮಾರ್ಗದಲ್ಲಿ ಫೋಮ್‌ನಿಂದ ತಯಾರಿಸಿದ ಕೆಂಪು ಮತ್ತು ಕಪ್ಪು ಬಣ್ಣದ ಮದ್ಯದ ಬಾಟಲಿ ಮಾದರಿಯಲ್ಲಿ ಹಳೆ ಸನ್ಯಾಸಿ ಕಂಗ್ರಾಜುಲೇಷನ್‌ ಬ್ರದರ್‌ ಎಂದು ಬರೆದು ಸಿನಿಮಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಹೆಡ್‌ ಕಾನ್ಸ್‌ಟೇಬಲ್‌ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಆರೋಪದಡಿ ಸಿನಿಮಾ ತಂಡದ ವಿರುದ್ಧ ದೂರು ನೀಡಿದ್ದರು.