ಸಾರಾಂಶ
ಮೈಸೂರು : ಅರಮನೆ ಆವರಣದಲ್ಲಿನ ಎಲ್ಲಾ ಎಂಟು ದೇವಾಲಯಗಳ ಉತ್ಸವ ಮೂರ್ತಿಗಳನ್ನು ಒಟ್ಟಿಗೆ ಇಟ್ಟು, ಅರಮನೆ ಆಡಳಿತ ಮಂಡಳಿ, ಚಾಮುಂಡೇಶ್ವರಿ ಪ್ರಾಧಿಕಾರ ಹಾಗೂ ಸರ್ಕಾರದ ವತಿಯಿಂದ ರಥಸಪ್ತಮಿ ಆಚರಿಸಲಾಯಿತು.ರಥಸಪ್ತಮಿ ದಿನದ ಪ್ರಯುಕ್ತ ಅರಮನೆ ಆವರಣದ 8 ದೇವಾಲಯಗಳಾದ ಶ್ರೀ ಭುವನೇಶ್ವರಿ, ಶ್ರೀ ತ್ರಿನೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀರಮಣಸ್ವಾಮಿ, ಶ್ರೀ ಮಹಾಲಕ್ಷ್ಮೀದೇವಿ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ವೇದ ವರಹಾಸ್ವಾಮಿ, ಶ್ರೀ ಖಿಲ್ಲೇ ವೆಂಕರಟರಮಣ ಸ್ವಾಮಿ ಹಾಗೂ ಗಾಯತ್ರಿ ದೇವಿ ಸೇರಿದಂತೆ ಅರಮನೆ ಆವರಣದ ಎಂಟು ದೇವಾಲಯಗಳ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಎಲ್ಲಾ ದೇವರ ಉತ್ಸವಮೂರ್ತಿಗಳನ್ನ ಅರಮನೆ ಆವರಣಕ್ಕೆ ತಂದು ಬೆಳಗ್ಗೆ 6 ಗಂಟೆಯಿಂದ ಮಧಯಾಹ್ನ 12 ಗಂಟೆವರೆಗೆ ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನ ತೆಗೆದುಕೊಂಡು ಹೋಗಲಾಯಿತು. ಭಕ್ತರಿಗೆ ವರ್ಷದಲ್ಲಿ ಒಂದು ಬಾರಿ ಅರಮನೆ ಆವರಣದ ಉತ್ಸವ ಮೂರ್ತಿಗಳನ್ನು ಒಟ್ಟಿಗೆ ದರ್ಶಿಸಲು ಅವಕಾಶ ಮಾಡಿಕೊಡಲಾಯಿತು.
ರಥಸಪ್ತಮಿ ದಿನ ಎಲ್ಲಾ ದೇವರುಗಳನ್ನು ಕಣ್ತುಂಬಿಕೊಂಡು ಪುನೀತರಾದರು ಪ್ರತಿ ವರ್ಷದಂತೆ ಈ ವರ್ಷವು ರಥಸಪ್ತಮಿ ಪ್ರಯುಕ್ತ ಚಾಮುಂಡೇಶ್ವರಿ ಪ್ರಾಧಿಕಾರ ಹಾಗೂ ಸರ್ಕಾರದ ವತಿಯಿಂದ ವಿಶೇಷ ಪೂಜೆ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಲೋಕಕಲ್ಯಾಣಕ್ಕಾಗಿ ಮಾಡಲಾಗುತ್ತದೆ, ಬಂದಂತ ಭಕ್ತಾಧಿಗಳು ಎಲ್ಲಾ ದೇವತೆಗಳನ್ನು ಒಂದೇ ಜಾಗದಲ್ಲಿ ನೋಡಬಹುದಾಗಿದೆ ಎಂದರು.
ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಪ್ರತೀತಿ. ಆಗಿನ ಕಾಲದಲ್ಲಿ ರಾಜರು ನಡೆಸುತ್ತಿದ್ದರು. ಈಗ ಸರ್ಕಾರವೇ ನಡೆಸಿಕೊಂಡು ಹೋಗುತ್ತಿದೆ ಎಂದು ಅವರು ಹೇಳಿದರು.ಸಂಕ್ರಾಂತಿ ಹಬ್ಬದಂದು ದಕ್ಷಿಣಾಯಾಣದಿಂದ ಉತ್ತರಾಯಣಕ್ಕೆ ಬಂದ ಸೂರ್ಯನು, ಮತ್ತೇ ಉತ್ತರಾಯಣದಿಂದ ಸೂರ್ಯನು ದಕ್ಷಿಣಯಾಣಕ್ಕೆ ತನ್ನ ಪಂಚ ಸಂಚಲನ ಮಾಡುತ್ತಾನೆ. ಅಂದಿನ ದಿನವನ್ನು ರಥಸಪ್ತಮಿಯಾಗಿ ಆಚರಿಸಲಾಗುತ್ತದೆ.