ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣ, ರಾಧೆಯ ವೇಷತೊಟ್ಟು ಗಮನ ಸೆಳೆದ ಮಕ್ಕಳು

| Published : Aug 27 2024, 01:32 AM IST

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣ, ರಾಧೆಯ ವೇಷತೊಟ್ಟು ಗಮನ ಸೆಳೆದ ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕೃಷ್ಣ ಹುಟ್ಟಿದ ದಿನವನ್ನು ನಾವು ಗೋಕುಲಾಷ್ಠಮಿ ಅಥವಾ ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಶ್ರೀಕೃಷ್ಣನು ಶ್ರಾವಣ ಮಾಸ ರೋಹಿಣಿ ನಕ್ಷತ್ರ ಕೃಷ್ಣ ಪಕ್ಷ ಅಷ್ಟಮಿಯ ದಿನದಿಂದು ಜನಿಸಿದರು. ಶಾಲೆಯಲ್ಲಿ ಪ್ರತಿ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾ ಬಂದಿದ್ದೇವೆ.

ಕನ್ನಡಪ್ರಭ ವಾರ್ತೆ ಹಲಗೂರು

ವಿದ್ಯಾಧಾರೆ ಪ್ರಿ ಸ್ಕೂಲ್‌ನಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿಯಲ್ಲಿ ಪುಟಾಣಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆ ವೇಷ ಧರಿಸಿ ಗಮನ ಸೆಳೆದರು.

ದಿ.ಲೀಲಾ ನಾಗರಾಜಪ್ಪನವರ ಪತ್ನಿ ನಾಗಸುಂದ್ರಮ್ಮ ದೇವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಪ್ರಾಂಶುಪಾಲೆ ಎಚ್.ವಿ.ಶ್ವೇತಕುಮಾರಿ ಮಾತನಾಡಿ, ಶ್ರೀಕೃಷ್ಣ ಹುಟ್ಟಿದ ದಿನವನ್ನು ನಾವು ಗೋಕುಲಾಷ್ಠಮಿ ಅಥವಾ ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತೇವೆ. ಶ್ರೀಕೃಷ್ಣನು ಶ್ರಾವಣ ಮಾಸ ರೋಹಿಣಿ ನಕ್ಷತ್ರ ಕೃಷ್ಣ ಪಕ್ಷ ಅಷ್ಟಮಿಯ ದಿನದಿಂದು ಜನಿಸಿದರು. ಶಾಲೆಯಲ್ಲಿ ಪ್ರತಿ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದರು.

ಶಾಲೆ ಮಕ್ಕಳಿಗೆ ಕೃಷ್ಣ ಮತ್ತು ರಾಧೆ ವೇಷ ಧರಿಸುವ ಮೂಲಕ ದೇಶದ ಸಂಸ್ಕೃತಿ, ಧರ್ಮ, ಹಬ್ಬಗಳ ಆಚರಣೆ ಬಗ್ಗೆ ಈಗಿನಿಂದಲೇ ತಿಳುವಳಿಕೆ ನೀಡುವುದು ಇದರ ಉದ್ದೇಶವಾಗಿದೆ ಎಂದರು.

ಇದೇ ವೇಳೆ ಸ್ಪರ್ಧೆಯಲ್ಲಿ ವಿಜೇತರಾದ ಫ್ರಿ ಕೆಜಿ ವಿಭಾಗದ ನಿಶ್ವಿಕ ಗೌಡ ಎಚ್.ಎ. ಪ್ರಥಮ, ದೃವಂತ್ ಬಿ.ಎಸ್. ದ್ವಿತೀಯ, ಎಲ್.ಕೆ.ಜಿ ವಿಭಾಗದ ಮನ್ವಿತ್ ಗೌಡ ಎ. ಪ್ರಥಮ, ರಿತು ಆರ್. ದ್ವಿತೀಯ, ಯು.ಕೆ.ಜಿ. ವಿಭಾಗದ ಹಂನ್ವಿಕ ಎಚ್.ಜಿ. ಪ್ರಥಮ, ನಮ್ರತಾ ಕೆ. ದ್ವಿತೀಯ ಸ್ಥಾನ ಪಡೆದುಕೊಂಡರು. ವಿಜೇತ ಮಕ್ಕಳಿಗೆ ನಾಗಸಂದ್ರಮ್ಮ ಬಹುಮಾನ ವಿತರಿಸಿದರು.

ಈ ವೇಳೆ ನಾಗಲಾಂಬ, ಮೇಲ್ವಿಚಾರಕಿ ಸರಸ್ವತಿ, ಶಿಕ್ಷಕಿಯರಾದ ಸೌಮ್ಯ, ಶ್ರುತಿ ಟಿ.ಎನ್., ಮಧುಶ್ರೀ ಎಂ, ಸಹಾಯಕಿಯರಾದ ಲಕ್ಷ್ಮಿ, ಮಾಲಾ ಸೇರಿದಂತೆ ಇತರರು ಇದ್ದರು.