ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಆದೇಶ- ಸ್ವಾಗತಿಸಿ ಸಿಹಿ ಹಂಚಿಕೆ

| Published : Jan 17 2024, 01:48 AM IST

ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಆದೇಶ- ಸ್ವಾಗತಿಸಿ ಸಿಹಿ ಹಂಚಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ದೇವಾಲಯಗಳಿಗೆ ಸಾಂಸ್ಕೃತಿಕ ಉಡುಗೆ- ತೊಡುಗೆ ಕಡ್ಡಾಯಗೊಳಿಸಿ ಆದೇಶಿಸಿರುವುದು ನಮ್ಮ ಹೋರಾಟಕ್ಕೆ ಸಂದ ಜಯ.
ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರವು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸರ್ವ ಅರ್ಜತೆ ಫೌಂಡೇಷನ್ ವತಿಯಿಂದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಫೌಂಡೇಷನ್ ಅಧ್ಯಕ್ಷೆ ಪದ್ಮ ಆರ್. ಗೌಡ ಮಾತನಾಡಿ, ದೇವಸ್ಥಾನದಂತ ಪವಿತ್ರ ಸ್ಥಳಗಳಿಗೆ ಮನಸ್ಸಿಗೆ ಬಂದಂತೆ ಬರಲು ಆಗುವುದಿಲ್ಲ. ನಾವು ಉಡುಗೆ ತೊಡುಗೆ ಉತ್ತಮವಾಗಿರಬೇಕು. ಈ ಕಾರಣಕ್ಕೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಬೇಕು ಎಂದು 2022ರ ಡಿ. 22 ರಿಂದ 27 ರವರೆಗೆ ಚಾಮುಂಡಿಬೆಟ್ಟದ ಅಭಿಯಾನ ನಡೆಸಿ ಅರಿವು ಮೂಡಿಸಲಾಗಿತ್ತು. ದೇವಾಲಯಕ್ಕೆ ಆಗಮಿಸುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಬೇಕು. ನಮ್ಮ ಸಂಸ್ಕೃತಿಯ ಉಡುಗೆ ತೊಟ್ಟು ದೇವರ ದರ್ಶನ ಬರಬೇಕು ಎಂದು ಅರಿವು ಮೂಡಿಸಲಾಗಿತ್ತು. ಈ ಸಂಬಂಧ ಸರ್ಕಾರಕ್ಕೂ ಮನವಿ ಸಲ್ಲಿಸಿರುವುದಾಗಿ ಅವರು ಹೇಳಿದರು.

ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ದೇವಾಲಯಗಳಿಗೆ ಸಾಂಸ್ಕೃತಿಕ ಉಡುಗೆ- ತೊಡುಗೆ ಕಡ್ಡಾಯಗೊಳಿಸಿ ಆದೇಶಿಸಿರುವುದು ನಮ್ಮ ಹೋರಾಟಕ್ಕೆ ಸಂದ ಜಯ. ಈ ವೇಳೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸುವುದಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸರ್ವ ಅರ್ಜತೆ ಫೌಂಡೇಷನ್ ಸದಸ್ಯರು ಇದ್ದರು.