ಗುರುಸ್ಪಂದನದಲ್ಲಿ ಶಿಕ್ಷಕರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

| Published : Aug 22 2025, 02:00 AM IST

ಗುರುಸ್ಪಂದನದಲ್ಲಿ ಶಿಕ್ಷಕರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಗುರುಸ್ಪಂದನಾ ಕಾರ್ಯಕ್ರಮ ಅಖಂಡ ತಾಲೂಕಿನಲ್ಲಿ ಏಳು ಹಂತಗಳಲ್ಲಿ ಆಯೋಜಿಸಿದೆ. ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಗುರುಸ್ಪಂದನಾ ಕಾರ್ಯಕ್ರಮ ಅಖಂಡ ತಾಲೂಕಿನಲ್ಲಿ ಏಳು ಹಂತಗಳಲ್ಲಿ ಆಯೋಜಿಸಿದೆ. ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.ಪಟ್ಟಣದ ಎಂಪಿಎಸ್ ಶಾಲೆಯಲ್ಲಿ ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರಸಮನ್ವಯಾಧಿಕಾರಿಗಳ ಕಚೇರಿ ಮತ್ತು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ನಡೆದ ಗುರುಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಕರ ವರ್ಷದ ಟೈಮ್ ಬಾಂಡ್‌ಗಳನ್ನು ಹಾಕುವದು, ಶಿಕ್ಷಕರ ಗಳಿಕೆ ರಜೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸುವುದು, ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸುವದು ಸೇರಿ ಶಿಕ್ಷಕರ ಸೇವೆಗೆ ಸಂಬಂಧಿಸಿದ ಕಾರ್ಯಗಳನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಗುವದು. ಅಖಂಡ ತಾಲೂಕಿನಲ್ಲಿ ೧೬೦೦ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಶೇ.೯೮ ರಷ್ಟು ಸೇವಾ ಪುಸ್ತಕಗಳಲ್ಲಿ ನಾಮಿನಿ ಪಾರ್ಮೆಟ್ ಇಲ್ಲ. ಇದರ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು. ಸೇವಾ ಪುಸ್ತಕ ಸರಿಪಡಿಸಲು ಮೂರು ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಸೇವಾ ಪುಸ್ತಕಗಳನ್ನು ಇ-ಸೇವಾ ಪುಸ್ತಕಕ್ಕೆ ಒಳಪಡಿಸಬೇಕಾಗಿದೆ. ಇದಕ್ಕೆ ಎಲ್ಲ ಶಿಕ್ಷಕರ ಸಹಕಾರ ನೀಡಬೇಕಿದ್ದು, ಇಂದು ಎನ್‌ಪಿಎಸ್, ಎಸ್‌ಎಸ್‌ಎ, ಎನ್‌ಪಿಎಸ್, ಬಿಆರ್‌ಪಿ, ಸಿಆರ್ಪಿ, ಟಿಜಿಟಿ ಮತ್ತು ಬಿಐಇಆರ್‌ಟಿ ಸೇರಿ ಒಟ್ಟು ೨೮೮ ಶಿಕ್ಷಕರ ಸೇವಾ ಪುಸ್ತಕ ಪರಿಶೀಲನೆ ಮಾಡಲಾಗುವದು ಎಂದು ತಿಳಿಸಿದರು.ಆದರ್ಶ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ಉಮೇಶ ಕವಲಗಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಒಟ್ಟಾಗಿ ತಮ್ಮ ಸಮಸ್ಯೆಗಳನ್ನು ಹೇಳಲು ಅವಕಾಶವಿದೆ. ಆ.೩೦ರಂದು ಬಸವನಬಾಗೇವಾಡಿಯ ಎಂಪಿಎಸ್ ಶಾಲೆಯಲ್ಲಿ ಬಸವನಬಾಗೇವಾಡಿ ವಲಯದ ಶಿಕ್ಷಕರಿಗೆ, ಸೆ.೬ರಂದು ಮನಗೂಳಿ ಎಂಪಿಎಸ್ ಶಾಲೆಯಲ್ಲಿ ಮನಗೂಳಿ ವಲಯದ ಶಿಕ್ಷಕರಿಗೆ, ಸೆ.೧೩ ರಂದು ನಿಡಗುಂದಿ ಎಂಪಿಎಸ್ ಶಾಲೆಯಲ್ಲಿ ನಿಡಗುಂದಿ ವಲಯದ ಶಿಕ್ಷಕರಿಗೆ, ಸೆ.೨೦ ರಂದು ಕೊಲ್ಹಾರ ಎಂಪಿಎಸ್ ಶಾಲೆಯಲ್ಲಿ ಕೊಲ್ಹಾರ ವಲಯದ ಶಿಕ್ಷಕರಿಗೆ, ಅ.೧೧ ರಂದು ಬಸವನಬಾಗೇವಾಡಿ ಎಂಪಿಎಸ್ ಶಾಲೆಯಲ್ಲಿ ಜಿಪಿಟಿ ಶಿಕ್ಷಕರಿಗೆ, ಅ.೧೮ ರಂದು ಹೂವಿನಹಿಪ್ಪರಗಿ ಕೆಜಿಎಸ್ ಶಾಲೆಯಲ್ಲಿ ಹೂವಿನಹಿಪ್ಪರಗಿ ವಲಯದ ಶಿಕ್ಷಕರಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಗುರುಸ್ಪಂದನಾ ಹಮ್ಮಿಕೊಂಡಿದ್ದಾರೆ. ಆಯಾ ವಲಯದ ಶಿಕ್ಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಚ್.ಬಿ.ಬಾರಿಕಾಯಿ ಮಾತನಾಡಿ, ಸರ್ಕಾರಿ ನೌಕರರಿಗೆ ಸೇವಾ ಪುಸ್ತಕ ಬೆನ್ನುಲುಬು. ಇದರಲ್ಲಿ ಲೋಪದೋಷವಿದ್ದರೆ ನೌಕರರು ಇಲಾಖೆಗೆ ಅಲೆದಾಡಬೇಕಾಗುತ್ತದೆ. ಅಖಂಡ ತಾಲೂಕಿನ ೧೬೦೦ ಶಿಕ್ಷಕರಿಗೆ ಅನುಕೂಲವಾಗಲು ಈ ಗುರುಸ್ಪಂದನಾ ಹಮ್ಮಿಕೊಂಡಿರುವದು ಶ್ಲಾಘನೀಯ. ಶಿಕ್ಷಕರ ಸಮಸ್ಯೆಗಳಿಗೆ ನಮ್ಮ ಸಂಘ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಗಿಡ್ಡಪ್ಪಗೋಳ, ಸಂಘಟನಾ ಕಾರ್ಯದರ್ಶಿ ಎಂ.ಎಂ.ಮುಲ್ಲಾ, ನಿಡಗುಂದಿ ತಾಲೂಕಾಧ್ಯಕ್ಷ ಸಲೀಂ ದಡೇದ ಮಾತನಾಡಿದರು. ಎಂ.ಎಸ್.ಮುಕಾರ್ತಿಹಾಳ, ಸುರೇಶ ಬಿರಾದಾರ, ರಮೇಶ ಬೆಳ್ಳುಬ್ಬಿ, ಹೊನ್ನಪ್ಪ ಗೊಳಸಂಗಿ, ಟಿ.ಪಿ.ದಳವಾಯಿ, ಕೃಷ್ಣಾ ರಜಪೂತ, ಬಸವರಾಜ ಚಿಂಚೋಳಿ, ಬಿ.ಪಿ.ನಾಗಾವಿ, ಎಂ.ಎನ್.ಯಾಳವಾರ, ಆನಂದ ಪವಾರ, ಆರ್‌.ಡಿ.ಕಾಳಗಿ, ಸಿ.ಟಿ.ಮಾದರ, ಆನಂದ ಲಮಾಣಿ, ಎ.ಎಚ್.ಬಾಗೇವಾಡಿ, ಅನುಜಾ ಗುಬ್ಬಾ ಇತರರು ಇದ್ದರು. ಸವಿತಾ ಚಿಕ್ಕೊಂಡ ಪ್ರಾರ್ಥಿಸಿದರು. ಎಂ.ವ್ಹಿ.ಗಬ್ಬೂರ ಪ್ರಾಸ್ತವಿಕ ಮಾತನಾಡಿದರು. ಎಸ್.ಪಿ.ಮಡಿಕೇಶ್ವರ ನಿರೂಪಿಸಿದರು. ಬಸವರಾಜ ಚಿಂಚೋಳಿ ವಂದಿಸಿದರು.