ಒನಕೆ ಓಬವ್ವ ಸ್ತ್ರೀ ಸಮಾಜಕ್ಕೆ ಮಾದರಿ

| Published : Nov 13 2024, 12:04 AM IST

ಸಾರಾಂಶ

ದೈಹಿಕ ಮತ್ತು ಮಾನಸಿಕವಾಗಿ ತನ್ನನ್ನು ತಾನು ಪುರುಷರಿಗಿಂತ ಯಾವುದೇ ವಿಷಯದಲ್ಲಿ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ ವೀರ ವನಿತೆ ಒನಕೆ ಓಬವ್ವನ ಜಯಂತಿ ಆಚರಿಸುವುದು ನಮ್ಮ ನಾಡಿಗೆ ಹೆಮ್ಮೆ.

ಹುಬ್ಬಳ್ಳಿ:

ಒನಕೆ ಓಬವ್ವ ಸ್ತ್ರೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕೆಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವೀರರಾಣಿ ಒನಕೆ ಓಬವ್ವ ಜಯಂತಿಯಲ್ಲಿ ಓಬವ್ವನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈಹಿಕ ಮತ್ತು ಮಾನಸಿಕವಾಗಿ ತನ್ನನ್ನು ತಾನು ಪುರುಷರಿಗಿಂತ ಯಾವುದೇ ವಿಷಯದಲ್ಲಿ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ ವೀರ ವನಿತೆ ಒನಕೆ ಓಬವ್ವನ ಜಯಂತಿ ಆಚರಿಸುವುದು ನಮ್ಮ ನಾಡಿಗೆ ಹೆಮ್ಮೆ ತರುತ್ತದೆ ಎಂದರು.

ಹುಬ್ಬಳ್ಳಿ ಶಹರ ತಹಸೀಲ್ದಾರ್‌ ಕಲಗೌಡ ಪಾಟೀಲ ಮಾತನಾಡಿ, ಒನಕೆ ಓಬವ್ವ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ವೀರವನಿತೆ ಒನಕೆ ಓಬವ್ವನ ವೀರತನ ಎಲ್ಲರಿಗೂ ಮಾದರಿಯಾಗಿದೆ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಓಬವ್ವನ ಧೈರ್ಯ ಮತ್ತು ಸಾಹಸ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಪಿ.ಸಿ. ಜಾಬಿನ್ ಕಾಲೇಜಿನ ಪ್ರಾಧ್ಯಾಪಕಿ ಮಲ್ಲಮ್ಮ ಯಾಟಗಲ್ಲ ಉಪನ್ಯಾಸ ನೀಡಿದರು.

ಹುಬ್ಬಳ್ಳಿ ಗ್ರಾಮೀಣ ಗ್ರೇಡ್‌-2 ತಹಸೀಲ್ದಾರ್‌ ಶಿವಾನಂದ ಹೆಬ್ಬಳ್ಳಿ, ಮುಖಂಡರಾದ ಮಾರುತಿ ದೊಡ್ಡಮನಿ, ಶಂಕರ ಅಜಮನಿ, ಅನಿಲಕುಮಾರ ಪಾಟೀಲ, ಯಶವಂತ, ಬಸಪ್ಪ ಭೀರಣ್ಣವರ, ರವೀಂದ್ರ ಕಲ್ಯಾಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರಿದ್ದರು.