ಸಿಂದಗಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ಪರಿಸರ ಉಳಿಸುವ ಜವಾಬ್ದಾರಿಯನ್ನು ಹೊಂದಬೇಕು. ನಿಸರ್ಗ ಉಳಿದರೆ ಮಾತ್ರ ನಾವು ಎಂದು ಎಚ್.ಜಿ.ಬಾಲಕರ ಪ್ರೌಢಶಾಲೆಯ ಎನ್‌ಸಿಸಿಯ ಕೇರ್ ಟೇಕರ್ ಸತೀಶ್ ಬಸರಕೋಡ ಹೇಳಿದರು.
ಸಿಂದಗಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ಪರಿಸರ ಉಳಿಸುವ ಜವಾಬ್ದಾರಿಯನ್ನು ಹೊಂದಬೇಕು. ನಿಸರ್ಗ ಉಳಿದರೆ ಮಾತ್ರ ನಾವು ಎಂದು ಎಚ್.ಜಿ.ಬಾಲಕರ ಪ್ರೌಢಶಾಲೆಯ ಎನ್‌ಸಿಸಿಯ ಕೇರ್ ಟೇಕರ್ ಸತೀಶ್ ಬಸರಕೋಡ ಹೇಳಿದರು.ಪಟ್ಟಣದ ಎಚ್.ಜಿ.ಬಾಲಕರ ಪ್ರೌಢಶಾಲೆಯ ಎನ್.ಸಿ.ಸಿ ಟ್ರೂಪ್ ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಒಂದು ಕೆಡೆಟ್ ಒಂದು ಟ್ರೀ ರ್‍ಯಾಲಿಯಲ್ಲಿ ಸಸಿ ನೆಟ್ಟು ಮಾತನಾಡಿದರು. ಒನ್ ಕೆಡೆಟ್ ಒಂದು ಟ್ರೀ ಅಭಿಯಾನವು ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿಯನ್ನ ಕೆಡೆಟ್ ಗಳಲ್ಲಿ ಬೆಳೆಸುವ ಉದ್ದೇಶ ಹೊಂದಿದೆ. ಎನ್‌ಸಿಸಿ ಕೇವಲ ಒಂದು ಸಂಘಟನೆ ಅಲ್ಲ, ಅದು ಒಂದು ಸಾಮಾಜಿಕ ಕಳಕಳಿ ಇರುವ ಮತ್ತು ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುವ ದೇಶದ ಅತಿ ದೊಡ್ಡ ಸಂಘಟನೆಯಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಈ ವೇಳೆ ಎನ್‌ಸಿಸಿಯ ನಿವೃತ್ತ ಅಧಿಕಾರಿಗಳಾದ ವ್ಹಿ.ಎಂ.ಪಾಟೀಲ ಮಾತನಾಡಿದರು. ರ‍್ಯಾಲಿಯಲ್ಲಿ ಶಾಲೆಯ ಮುಖ್ಯ ಗುರು ಬಿ.ಎ.ಕೂಗೆ ಹಾಗೂ ಶಿಕ್ಷಕರಾದ ರವಿ ಸಿಂದಗಿಕರ, ಎಂ.ಎಸ್.ಧೂಮುಕನಾಳ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.