ಸಾರಾಂಶ
ಹುಟ್ಟಿದ್ದು ಯಾಕೆ ಎಂದು ಅರ್ಥ ಮಾಡಿಕೊಳ್ಳದಿದ್ದರೇ ಈ ಜೀವನವೇ ವ್ಯರ್ಥ. ಹುಟ್ಟು-ಸಾವುಗಳ ಮಧ್ಯೆ ಬರುವುದು ಸಂಸಾರ. ಬೇಕು-ಬೇಕು ಎನ್ನುವ ಬಯಕೆಗಳು ಈ ಮಧ್ಯ ಬರುತ್ತವೆ.
ಹುಬ್ಬಳ್ಳಿ:
ಮನುಷ್ಯನಿಗೆ ಅಹಂ ಎನ್ನುವುದು ಎಂದಿಗೂ ಬರಬಾರದು, ಅದು ಬಂದರೆ ನಾನು ಎನ್ನುವುದು ಉದ್ಭವವಾಗುತ್ತದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.ಇಲ್ಲಿನ ಮಂಗಳವಾರಪೇಟೆ ರುದ್ರಾಕ್ಷಿಮಠದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ನಿಜಗುಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಧಾರ್ಮಿಕ ಆಚರಣೆಗಳ ಮೂಲಕ ಶರಣರ ಚಿಂತನೆ, ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥ ಮಾಡಿಕೊಳ್ಳಬೇಕು ಎಂದ ಅವರು, ಬಸವಣ್ಣನವರ ವಚನಗಳು ಆಂಗ್ಲ ಭಾಷೆಗೆ ತರ್ಜುಮೆಗೊಂಡಿದ್ದು, ಎಲ್ಲರೂ ಓದುವಂತಾಗಿದೆ ಎಂದರು.
ಇದಕ್ಕೊ ಮೊದಲು ಬೆಳಗಾವಿ ಕಾರಂಜಿ ಮಠದ ಡಾ. ಶಿವಯೋಗಿ ದೇವರು, ಅನುಭಾವಿಗಳ ತತ್ವಾಮೃತದ ಕುರಿತು ಪ್ರವಚನ ನೀಡಿ, ಹುಟ್ಟಿದ್ದು ಯಾಕೆ ಎಂದು ಅರ್ಥ ಮಾಡಿಕೊಳ್ಳದಿದ್ದರೇ ಈ ಜೀವನವೇ ವ್ಯರ್ಥ. ಹುಟ್ಟು-ಸಾವುಗಳ ಮಧ್ಯೆ ಬರುವುದು ಸಂಸಾರ. ಬೇಕು-ಬೇಕು ಎನ್ನುವ ಬಯಕೆಗಳು ಈ ಮಧ್ಯ ಬರುತ್ತವೆ. ಇದರ ಮಧ್ಯದಲ್ಲಿ ಮುಕ್ತಿ, ಮೋಕ್ಷ. ಅದನ್ನು ಇಟ್ಟಿರುವುದನ್ನು ನಾವು ಕಾಣಬೇಕು ಎಂದರು.ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ವಿಶ್ವನಾಥ ತ್ರಿಮಲ್ಲೆ, ಮಹಾಂತೇಶ ಗಿರಿಮಠ ಸೇರಿದಂತೆ ಹಲವರಿದ್ದರು. ಮಲ್ಲಿಕಾರ್ಜುನ ಸಾವುಕಾರ ಸ್ವಾಗತಿಸಿದರು. ಶೋಭಾ ಜಾಬಿನ್ ಪ್ರಾರ್ಥಿಸಿದರು. ಹೇಮಾ ಗಿರಣಶೆಟ್ಟಿ ನಿರೂಪಿಸಿದರು.