ಸರ್ಕಾರಿ ಕೆಪಿಎಸ್ ಶಾಲೆಗೆ ₹ ೧ ಕೋಟಿ ಅನುದಾನ

| Published : Jan 14 2024, 01:33 AM IST / Updated: Jan 14 2024, 01:34 AM IST

ಸಾರಾಂಶ

ಹಳೇಬೀಡು ಕೆಪಿಎಸ್ ಶಾಲೆ ಹಾಸನ ಜಿಲ್ಲೆಗೆ ಮಾದರಿ ಶಾಲೆಯಾಗಿದೆ. ಇಲ್ಲಿ ೧ ರಿಂದ ೧೨ನೇ ತರಗತಿವರೆಗೆ ೧೬೦೦ ಮಕ್ಕಳು ಓದುತ್ತಿರುವ ಶಾಲೆಯಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ಕೆಪಿಎಸ್ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ೧ ಕೋಟಿ ರು. ಶಾಲಾ ಅಭಿವೃದ್ಧಿಯ ಅನುದಾನದ ಅನುಮೋದನೆ ಸಿಕ್ಕಿದೆ ಎಂದು ಸರ್ಕಾರಿ ಕೆಪಿಎಸ್ ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ತಿಳಿಸಿದರು.

ಸಮಿತಿ ಸಭೆ । ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್‌ । ಶಾಲೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಆದ್ಯತೆ ಕನ್ನಡಪ್ರಭ ವಾರ್ತೆ ಹಳೇಬೀಡು

ಶಾಲಾ ಕಾಲೇಜುಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಹಳೇಬೀಡಿನ ಸರ್ಕಾರಿ ಕೆಪಿಎಸ್ ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ್ ತಿಳಿಸಿದರು.

ಕೆಪಿಎಸ್ ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಳೇಬೀಡು ಕೆಪಿಎಸ್ ಶಾಲೆ ಹಾಸನ ಜಿಲ್ಲೆಗೆ ಮಾದರಿ ಶಾಲೆಯಾಗಿದೆ. ಇಲ್ಲಿ ೧ ರಿಂದ ೧೨ನೇ ತರಗತಿವರೆಗೆ ೧೬೦೦ ಮಕ್ಕಳು ಓದುತ್ತಿರುವ ಶಾಲೆಯಾಗಿದ್ದು, ಪ್ರತಿ ವರ್ಷ ಒಳ್ಳೆಯ ಫಲಿತಾಂಶ ನೀಡುತ್ತ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವತಿಯಿಂದ ಕೆಪಿಎಸ್ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ೧ ಕೋಟಿ ರು. ಶಾಲಾ ಅಭಿವೃದ್ಧಿಯ ಅನುದಾನದ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.

ಶಾಲಾ ಅಭಿವೃದ್ಧಿ ಸದಸ್ಯ ಎಚ್. ಪರಮೇಶ ಮಾತನಾಡಿ, ಈ ಶಾಲೆಯನ್ನು ನೋಡಿಕೊಳ್ಳಲು ಭದ್ರತೆ ಬಗ್ಗೆ (ಸೆಕ್ಯೂರಿಟಿ) ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಶೌಚಾಲಯ ಬಗ್ಗೆ ತಕ್ಷಣವೇ ಸ್ವಚ್ಛತೆಗಾಗಿ ಶಾಲಾ ಸಮಿತಿಯಿಂದ ವೇತನವನ್ನು ನೀಡಲಾಗುವುದು. ಕುಡಿಯುವ ನೀರಿನ ಬಗ್ಗೆ ಪಂಚಾಯಿತಿಗೆ ಸೂಕ್ತ ಸಲಹೆ ನೀಡಿ ಅದರ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಶಾಲೆಯ ಆವರಣದ ಮುಂಭಾಗದಲ್ಲಿ ಮಳಿಗೆ ನಿರ್ಮಾಣದ ಬಗ್ಗೆ ಸಲಹೆ ಪಡೆದು ಅಡಿ ೧೦೦ ರುಪಾಯಿ ಹಣವನ್ನು ನಿಗದಿ ಮಾಡಿ ಒಂದೇ ತರದ ಮಳಿಗೆಯನ್ನು ಮಾಡಲಾಗುವುದು. ಎಲ್ಲಾ ವ್ಯಾಪಾರಗಳು ಅನುಕೂಲ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದರು.

ಉಪಪ್ರಾಂಶುಪಾಲ ಮುಳ್ಳಯ್ಯ ಮಾತನಾಡಿ, ಜ.೧೭ ರಂದು ದೇವಸ್ಥಾನ ಮುಖ್ಯ ರಸ್ತೆಯ ಪ್ರಾಥಮಿಕ ಶಾಲಾ ಆವರಣದಲ್ಲಿ ೧ ಎಕರೆ ೧ ಗುಂಟೆ ಇರುವ ಕಟ್ಟೆ ಸೋಮನಹಳ್ಳಿಯ ಜಮೀನು, ಬಿದರಿಕೆರೆ ಹತ್ತಿರ ಇರುವ ೨೦ ಗುಂಟೆ ಗದ್ದೆ ೨೧ ಗುಂಟೆ ಹೊಲ ಹಾಗೂ ೫೫*೧೧೨ ಅಡಿಯ ಖಾಲಿ ನಿವೇಶದ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಇದರಲ್ಲಿ ಭಾಗವಹಿಸುವ ಇಚ್ಛೆ ಉಳ್ಳವರು ಉಪ ಪ್ರಾಂಶುಪಾಲ ಅಥವಾ ಮುಖ್ಯ ಶಿಕ್ಷಕ ನಾಗರಾಜ್ ಭೇಟಿ ಮಾಡಬಹುದು. ಕೆಪಿಎಸ್ ಅನುದಾನಲ್ಲಿ ೩.೫ ಲಕ್ಷ ರು. ಹಣ ಬಿಡುಗಡೆಯಾಗಿದೆ. ಅದರಲ್ಲಿ ೨ ಲಕ್ಷ ಕಾಲೇಜ್ ಲ್ಯಾಬ್ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು. ಇನ್ನೂ ಉಳಿದ ೧.೫ ಲಕ್ಷ ರು. ಪ್ರಾಥಮಿಕ ಶಾಲೆಗೆ ೫೦ ಸಾವಿರ ರು., ಹೈಸ್ಕೂಲ್ ೫೦ ಸಾವಿರ ರು., ಕಾಲೇಜು ೫೦ ಸಾವಿರ ರು. ನೀಡಲಾಗುವುದು. ಅದರಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ತಕ್ಕಂತೆ ಹಣವನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ವಿನುತ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ, ಎಲ್ಲಾ ಉಪನ್ಯಾಸ ವರ್ಗದವರು, ಶಿಕ್ಷಕರು ಹಾಗೂ ಎಲ್ಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಜರಿದ್ದರು.

ಫೋಟೋ: ಹಳೇಬೀಡಲ್ಲಿ ನಡೆದ ಕೆಪಿಎಸ್ ಶಾಲಾ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ.