ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಮತ್ತು ತಾಲೂಕಿನಲ್ಲಿ ಚುನಾವಣೆ ನಡೆಸುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಏರ್ಪಡಿಸಾಯಿತು.ನಗರದ ಚಾಮರಾಜ ಜೋಡಿ ರಸ್ತೆಯ ಸಹಕಾರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿದ್ದ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ವೈ.ಬೈರಪ್ಪ ಉದ್ಘಾಟಿಸಿದರು.
ಪ್ರತಿ ವರ್ಷವು ಕೂಡ ಸಹಕಾರ ಸಂಸ್ಥೆಗಳ ಚುನಾವಣೆ ಸಿದ್ಧತೆಗೆ ತಕ್ಕಂತೆ ತರಬೇತಿ ನೀಡಲಾಗುತ್ತಿದೆ. ಇದರಿಂದ ಸಾಕಷ್ಟು ಅನುಕೂಲಗಳಾಗಿವೆ. 2025ರಲ್ಲಿ ಮುಂಬರುವ ಸಾಕಷ್ಟು ಸಹಕಾರ ಚುನಾವಣೆ ನಡೆಯಲಿವೆ. ಕಾಯ್ದೆ ಜಾರಿಯಲ್ಲಿದ್ದರೂ ಕೆಲವು ವರ್ಷಗಳ ಹಿಂದೆ ಸಹಕಾರ ಚುನಾವಣೆ ಮುಂಚಿತವಾಗಿ 195 ದಿನದ ಉಚಿತ ನೋಟೀಸ್ ನೀಡದೇ ಚುನಾವಣೆ ನಡೆಸಲಾಗುತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಹಕಾರ ಚುನಾವಣೆ ಕಾಯ್ದೆ ಸಾಕಷ್ಟು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ನಡೆಸುವವರಿಗಿಂತ ಹೆಚ್ಚಿನ ಜವಬ್ದಾರಿ ಚುನಾವಣೆ ನಡೆಸುವವರ ಮೇಲಿರುತ್ತದೆ ಎಂದರು.ಬಳಿಕ ಹಾಸನ ಸಹಕಾರ ಇಲಾಖಾ ಅಧಿಕಾರಿ ಜಗದೀಶ್ ಅವರು ಆಡಳಿತ ಮಂಡಳಿ ಮತ್ತು ಪದಾದಿಕಾರಿಗಳ ಚುನಾವಣಾ ಪ್ರಕ್ರಿಯೆ ಬಗ್ಗೆ ತರಬೇತಿ ನೀಡಿದರು.
ಮೈಸೂರು ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಚ್. ಮನೋಜ್ ಕುಮಾರ್, ಕೆಐಸಿಎಂ ಮೈಸೂರು ಪ್ರಾಂಶುಪಾಲ ಪುಟ್ಟಸ್ವಾಮಿ, ಮಹದೇವಪ್ಪ ಇದ್ದರು.18 ರಂದು ಪ್ರಶಸ್ತಿ ಪ್ರದಾನ, ಸಂಗೀತ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮೈಸೂರುರವಿಸಂತು ಬಳಗದಿಂದ 50 ಸರ್ಕಾರಿ ಶಾಲೆಗಳಿಗೆ ಸೇವೆ ಮಾಡಿರುವ ಸಂಭ್ರಮಾಚರಣೆ ಪ್ರಯುಕ್ತ ನಗರದ ಗೋವರ್ಧನ ಹೊಟೇಲ್ ಗೋಪಿಕಾ ಸಭಾಂಗಣದಲ್ಲಿ ಫೆ.18ರ ಮಧ್ಯಾಹ್ನ 1ಕ್ಕೆ ಮೀನಾಕ್ಷಮ್ಮ ಹಾಗೂ ನಟ ಡಾ. ವಿಷ್ಣುವರ್ಧನ್ ಸ್ಮರಣಾರ್ಥ ಬಂಡೀಪುರ ಅರಣ್ಯ ಪ್ರದೇಶಕ್ಕೆ 5 ಸಾವಿರ ಮರಗಳಿಗಾಗಿ ಗೊಬ್ಬರದ ಬೀಜ ನೀಡುವುದು, ಕಲಾವಿದರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯೋಜಕ ರವಿಸಂತು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಟಿ ಭವ್ಯಾ, ಗಾಯಕಿ ಮಾನಸ ಹೊಳ್ಳ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಅನಿಲ್ ಕುಮಾರ್ ಅತಿಥಿಯಾಗುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಸಮಾಜ ಸೇವೆ ಉದ್ದೇಶದಿಂದ ಬಳಗ ರೂಪಗೊಂಡಿದ್ದು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸದಲ್ಲಿ ಪ್ರಮುಖವಾಗಿ ನಿರತರಾಗಿದ್ದೇವೆ. ಹಲವು ಸ್ನೇಹಿತರು ಸಹಕಾರ ನೀಡುತ್ತಿದ್ದಾರೆ ಎಂದರು.
ಬಳಗದ ಸದಸ್ಯರಾದ ಕಿರಣ್, ಸುರೇಶ್ ಗೌಡ, ರವಿ, ಸಿಂಚನಾ, ಲೋಕೇಶ್, ಶ್ರೀಕಂಠ, ಶ್ವೇತಾ, ಶ್ರೀನಿವಾಸ್, ಅನುಭವ್ಯ ಪದ್ಮಾ, ನಾಗಶ್ರೀ ಇದ್ದರು.