ಸಾರಾಂಶ
: ಕಾರು ಟೈರ್ ಸಿಡಿದು ಓರ್ವ ಸಾವನ್ನಪ್ಪಿದ್ದು ಮೂವರಿಗೆ ಗಾಯವಾದ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ರಾಜೇಂದ್ರಪುರ ಗೇಟ್ ಬಳಿ ನಡೆದ ಘಟನೆ
ಕುಣಿಗಲ್: ಕಾರು ಟೈರ್ ಸಿಡಿದು ಓರ್ವ ಸಾವನ್ನಪ್ಪಿದ್ದು ಮೂವರಿಗೆ ಗಾಯವಾದ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ರಾಜೇಂದ್ರಪುರ ಗೇಟ್ ಬಳಿ ನಡೆದ ಘಟನೆ. ಮಂಡ್ಯ ಮೂಲದ ಆಕರ್ಷ (28) ಕಾರು ಮರಕ್ಕೆ ಗುದ್ದಿದ ರಭಸಕ್ಕೆ ಮೃತಪಟ್ಟಿದ್ದಾನೆ. ಶಶಾಂಕ್ ಜ್ಞಾನೇಶ್ವರಿ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಮಂಡ್ಯ ಮೂಲದ ನಾಲ್ವರು, ತುಮಕೂರಿನಲ್ಲಿ ಮದುವೆ ಮುಗಿಸಿ ಮಂಡ್ಯ ಕಡೆಗೆ ವಾಪಸ್ ತೆರಳುವಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನ ಕುಣಿಗಲ್ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.