ಸಾರಾಂಶ
ತರೀಕೆರೆ: ದೇವರ ಹೆಸರಿನಲ್ಲಿ ನಡೆಸುತ್ತಿದ್ದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಿಂದ ಹೊರ ಹಾಕಿರುವ ವಿಚಾರಕ್ಕೆ ನಡೆದ ಗಲಾಟೆ ವ್ಯಕ್ತಿ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಆರೋಪಿಯನ್ನು ಘಟನೆ ನಡೆದ 2 ಗಂಟೆಯೊಳಗೆ ಬಂಧಿಸಲಾಗಿದೆ.
ಅಮೃತಾಪುರ ಗ್ರಾಮದ ಸಂಜುನಾಯ್ಕ(26) ಕೊಲೆಯಾದ ವ್ಯಕ್ತಿ, ರುದ್ರೇಶ್ ನಾಯ್ಕ ಬಂಧಿತ ಆರೋಪಿ.ರುದ್ರೇಶ್ ನಾಯ್ಕ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ, ವ್ಯವಹಾರ ಸರಿಯಾಗಿ ನಡೆಸದ ಕಾರಣಕ್ಕೆ ತಾಂಡ್ಯದ ಸಂಜುನಾಯ್ಕನನ್ನು ಚೀಟಿಯಿಂದ ಹೊರಹಾಕಿದ್ದು, ಅಮೃತಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಜುನಾಯ್ಕನನ್ನು ಏಕಾಏಕಿ ಕೆಟ್ಟದಾಗಿ ಬಯ್ಯುತ್ತಾ ದೊಣ್ಣೆಯಿಂದ ತಲೆಯ ಬಲಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಈತನ ಜತೆಇದ್ದ ದೂರುದಾರ ಯಶವಂತನಾಯ್ಕನಿಗೆ ಎದೆಯ ಬಲ ಭಾಗಕ್ಕೆ ಹಲ್ಲಿನಿಂದ ಕಚ್ಚಿ ಕೆಳಗೆ ಬೀಳಿಸಿದ್ದಾಗಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಕೇವಲ 2 ಗಂಟೆಯೊಳಗೆ ಕೊಲೆ ಆರೋಪಿ ರುದ್ರೇಶ್ ನಾಯ್ಕನನ್ನು ಬಂಧಿಸಿದ್ದಾರೆ.ಪ್ರಕರಣದಲ್ಲಿ ಆರೋಪಿಯನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವಿಕ್ರಂ ಅಮಟೆ, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್, ತರೀಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಹಾಲಮೂರ್ತಿ ರಾವ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್ ನೇತೃತ್ವದಲ್ಲಿ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಎಸ್.ಒ.ಸಿ.ಒ.ವೈಜ್ಞಾನಿಕ ಅಧಿಕಾರಿಗಳ ತಂಡ ಭೇಟಿ ನೀಡಿದ್ದರು.21ಕೆಟಿಆರ್.ಕೆ.10ಃ ಸಂಜುನಾಯ್ಕ -