ಸಾರಾಂಶ
ರೈತರ ಬಳಿ ಇದ್ದ ಕೃಷಿ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡ ಮೇಲೆ ಸಾಲ ತೆಗೆದುಕೊಳ್ಳಲು ರೈತರೇ ಇಲ್ಲವಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ. ವೆಂಕಟೇಶ್ ತಿಳಿಸಿದರು. ದಾಬಸ್‌ಪೇಟೆಯಲ್ಲಿ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ವಾರ್ಷಿಕ ಸಭೆಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ರೈತರ ಬಳಿ ಇದ್ದ ಕೃಷಿ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡ ಮೇಲೆ ಸಾಲ ತೆಗೆದುಕೊಳ್ಳಲು ರೈತರೇ ಇಲ್ಲವಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ. ವೆಂಕಟೇಶ್ ತಿಳಿಸಿದರು.ನಿಡವಂದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಸಂಘವು 2023-24ನೇ ಸಾಲಿನಲ್ಲಿ 542 ರೈತರಿಗೆ ಬಡ್ಡಿ ರಹಿತ ₹3.91 ಕೋಟಿ ಬೆಳೆ ಸಾಲ, ಸ್ವಂತ ಬಂಡವಾಳ ಸಾಲದ ರೂಪದಲ್ಲಿ 7 ಜನರಿಗೆ 4.58 ಲಕ್ಷ ರು. ಸಾಲ,3 ಸ್ತ್ರೀ ಶಕ್ತಿ ಸಂಘಗಳಿಗೆ ₹7 ಲಕ್ಷ ಸಾಲ ನೀಡಲಾಗಿದೆ. ಸಂಘವು 1.44 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಈ ಬಾರಿ ಸದಸ್ಯರ ಅಪೇಕ್ಷೆ ಮೇರೆಗೆ ಮೀಟಿಂಗ್ ಹಾಲ್ ಕಟ್ಟಲು ತೀರ್ಮಾನಿಸಲಾಗಿದೆ. ಸದಸ್ಯರಿಗೆ ಅನುಕೂಲವಾಗಲು ಒಡವೆ ಸಾಲ ನೀಡಲು ನಿರ್ಣಯಿಸಲಾಗಿದೆ ಎಂದರು.
ನಿರ್ದೇಶಕ ಹೊನ್ನಪ್ಪ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನರಸಿಂಹಮೂರ್ತಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬ್ಯಾಂಕ್‌ಗೆ ಭೇಟಿ ನೀಡುವ ರೈತರಿಗೆ ಸರಿಯಾದ ಮಾಹಿತಿ ನೀಡದೆ, ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೆ ಮತ್ತೊಂದು ಕಾನೂನು ಹೇಳುತ್ತಾರೆಂದು ಸಭೆಯಲ್ಲಿ ಹರಿಹಾಯ್ದರು. ಮೇಲ್ವಿಚಾರಕರಿಗೂ ಅವರಿಗೂ ಮಾತಿನ ಚಕಮಕಿ ನಡೆಯಿತು.ಲಕ್ಷ್ಮೀನಾರಾಯಣ್, ಎನ್.ಎಸ್.ಕೇಶವಮೂರ್ತಿ, ಕೆಂಪಣ್ಣ, ಹೊನ್ನಪ್ಪ, ಬಿ.ಕುಮಾರ್, ಲಕ್ಷ್ಮಣ್, ಸತೀಶ್,ಎನ್.ಟಿ ಜಗದೀಶ್, ಕೆಂಪಮ್ಮ, ಗೀತಾ, ರಂಗಮ್ಮ, ಶ್ರೀನಿವಾಸಯ್ಯ,ಪರಮೇಶ್, ಗಂಗಾಧರ್, ಯುವರಾಜ್, ಸಂತೋಷ್, ಭೋಜರಾಜು, ಚಿಕ್ಕೇಗೌಡ ಉಪಸ್ಥಿತರಿದ್ದರು.