ಸಾರಾಂಶ
ದಾವಣಗೆರೆ: ದಲಿತ ಮುಖ್ಯಮಂತ್ರಿಯಾಗಲು ಇನ್ನೊಂದೇ ಮೆಟ್ಟಿಲಿದ್ದು, ಅದು ಈ ಬಾರಿಯಾದರೂ ನೆರವೇರಲಿ ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮತ್ತೆ ದಲಿತ ಮುಖ್ಯಮಂತ್ರಿ ಕೂಗನ್ನು ಮುನ್ನೆಲೆಗೆ ತಂದಿದ್ದಾರೆ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ ನಡುವಿನ ಸಿಎಂ ಕುರ್ಚಿ ಕಿತ್ತಾಟದ ಮಧ್ಯೆ ಈಗ ದಲಿತ ಸಿಎಂ ವಿಚಾರ ಮಧ್ಯ ತಂದುಬಿಟ್ಟು ಎಲ್ಲರ ಚಿತ್ತ ಸೆಳೆದಿದ್ದಾರೆ.
ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.ಸ್ವಾತಂತ್ರ್ಯಾ ನಂತರದಲ್ಲಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂಬ ಒಂದೇ ಕೂಗು ಇದೆ. ಅಂತಹ ಸುಸಂದರ್ಭ ಈಗ ಬಂದೊದಗಿದೆ ಎಂದರು. ಆ ಎನ್ನುವ ಮೂಲಕ ಶಾಸಕ ಬಿ.ದೇವೇಂದ್ರಪ್ಪ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಕಿತ್ತಾಟ ನಡೆದಿರುವಾಗಲೂ ಹೊಸ ಬಾಂಬ್ ಸಿಡಿಸಿದ್ದಾರೆ.
ಗೃಹ ಸಚಿವ ಡಾ. ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಮ್ಮುಖದಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಈ ಹೇಳಿಕೆ ನೀಡಿದ್ದಾರೆ.- - -
* ಸುರ್ಜೆವಾಲಾ ಅಧಿಕಾರಿಗಳ ಸಭೆಯನ್ನು ಎಲ್ಲಿಯೂ ಮಾಡಿಲ್ಲ: ಬಸವಂತಪ್ಪದಾವಣಗೆರೆ: ನಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲ, ಕಾರ್ಯಗಳ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸುರ್ಜೀವಾಲಾ ಕೇಳಿ, ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಮಾಡಿಕೊಡುವುದಾಗಿ ಸುರ್ಜೀವಾಲಾ ಭರವಸೆ ನೀಡಿದ್ದಾರೆ. ನಮ್ಮ ಕ್ಷೇತ್ರದ ಸಮಸ್ಯೆ, ಆಗಬೇಕಾದ ಕೆಲ, ಕಾರ್ಯದ ಬಗ್ಗೆ ಕೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಶಾಸಕರಿಗೂ ₹50 ಕೋಟಿ ಅನುದಾನ ಬಜೆಟ್‌ನಲ್ಲೇ ಘೋಷಿಸಿದ್ದಾರೆ. ಸದ್ಯ ನಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ, ಕಾರ್ಯ, ಕಾಮಗಾರಿಗಳ ಪಟ್ಟಿ ಮಾಡಿ, ಕೊಡುತ್ತಿದ್ದೇವೆ. ಕಾಮಗಾರಿಗಳ ಪಟ್ಟಿ ನೀಡಿದ ನಂತರ ₹50 ಕೋಟಿ ಅನುದಾನ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಧಿಕಾರಿಗಳ ಸಭೆಯನ್ನು ಎಲ್ಲಿಯೂ ಮಾಡಿಲ್ಲ. ನಾನು ಭಾಗಿಯಾಗಿದ್ದಂತಹ ಯಾವುದೇ ಸಭೆಯಲ್ಲಿ ಅಂತಹದ್ದೇನೂ ಆಗಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಸುರ್ಜೀವಾಲಾ ಕುಳಿತಿರಬಹುದು. ಅದನ್ನು ಬಿಟ್ಟರೆ ಸುರ್ಜೇವಾಲಾ ವೈಯಕ್ತಿಕವಾಗಿ ಸಭೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಮನವಿಗಳನ್ನು ಸ್ವೀಕರಿಸಿದ ಸುರ್ಜೇವಾಲಾ ಸಂಬಂಧಿಸಿದ ಸಚಿವರಿಗೆ ಹೇಳುತ್ತೇನೆ ಎಂಬುದಾಗಿ ಭರವಸೆ ನೀಡಿದ್ದಾರೆ. ನಾವು ನಮ್ಮ ಕ್ಷೇತ್ರದ ಕೆಲಸ, ಕಾರ್ಯಗಳ ಪಟ್ಟಿ ಮಾಡಿಕೊಟ್ಚ ನಂತರ ಸರ್ಕಾರದಿಂದ ಕ್ಷೇತ್ರಕ್ಕೆ ₹50 ಕೋಟಿ ಅನುದಾನ ಬಿಡುಗಡೆಯಾಗುತ್ತದೆ ಎಂದು ಹೇಳಿದ ಅವರು, ಬಿಜೆಪಿ ಅವಧಿಗಿಂತಲೂ ನಮ್ಮ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಬಸವಂತಪ್ಪ ಪ್ರತಿಕ್ರಿಯಿಸಿದರು.
- - -(ಸಾಂದರ್ಭಿಕ ಚಿತ್ರ)