ಬಿರುಗಾಳಿಗೆ ವ್ಯಕ್ತಿ ಬಲಿ, ವಿದ್ಯುತ್‌ ಕಂಬಗಳು ಧರೆಗೆ

| Published : Apr 23 2025, 12:33 AM IST

ಸಾರಾಂಶ

ಅಮೀನಗಡ ಪಟ್ಟಣದಲ್ಲಿ ಮಂಗಳವಾರ ಗುಡುಗು, ಸಿಡಿಲಿನ ಅರ್ಭಟದೊಂದಿಗೆ ಸುರಿದ ಬಿರುಗಾಳಿ ಮಳೆಗೆ ಮರ ಉರುಳಿಬಿದ್ದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಕನ್ನಡಪ್ರಭ ವಾರ್ತೆ ಅಮೀನಗಡ

ಪಟ್ಟಣದಲ್ಲಿ ಮಂಗಳವಾರ ಗುಡುಗು, ಸಿಡಿಲಿನ ಅರ್ಭಟದೊಂದಿಗೆ ಸುರಿದ ಬಿರುಗಾಳಿ ಮಳೆಗೆ ಮರ ಉರುಳಿಬಿದ್ದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಪಟ್ಟಣದಲ್ಲಿ ಮಧ್ಯಾಹ್ನ ಒಂದು ಗಂಟೆ ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಗೆ ಬೀದಿ ವ್ಯಾಪಾರಸ್ಥರು, ಪಾದಚಾರಿಗಳು ಪರದಾಡಿದರು. ಪಟ್ಟಣದ ಲೋಕೋಪಯೋಗಿ ಇಲಾಖೆ ಬಳಿಯಿದ್ದ ನೀಲಗಿರಿ ಮರವೊಂದು ಉರುಳಿಬಿದ್ದು ಪಾದಚಾರಿ ಮಹಿಬೂಬಸಾಬ ಅಕಬರಸಾಬ ತಾಳಿಕೋಟಿ (35) ಅಸುನೀಗಿದ್ದಾರೆ. ರಾಯಚೂರು-ಬೆಳಗಾವಿ ಮುಖ್ಯ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಬಳಿ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಚರಂಡಿ ನೀರು ರಸ್ತೆಗೆ ಬಂದು ರಸ್ತೆ ಸಂಪೂರ್ಣ ರೊಜ್ಜಾಗಿ, ಪಾದಚಾರಿಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.