ಸಾರಾಂಶ
ಸೇವೆಯ ಅಮೂಲ್ಯ ಕಾರ್ಯ, ಆದರ್ಶಗಳನ್ನು ಬೆಳೆಸಿ ಉತ್ತೇಜಿಸುವುದೇ ರೋಟರಿ ಸಂಸ್ಥೆಯ ಗುರಿಯಾಗಿದ್ದು, ಇದಕ್ಕೆ ಬದ್ಧರಾಗಿ ಎಲ್ಲಾ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದು ರೋಟರಿ ೩೧೮೧ರ ಕಾರ್ಯರ್ಶಿ ಎಚ್.ಎಂ. ಹರೀಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಯಳಂದೂರುಸೇವೆಯ ಅಮೂಲ್ಯ ಕಾರ್ಯ, ಆದರ್ಶಗಳನ್ನು ಬೆಳೆಸಿ ಉತ್ತೇಜಿಸುವುದೇ ರೋಟರಿ ಸಂಸ್ಥೆಯ ಗುರಿಯಾಗಿದ್ದು, ಇದಕ್ಕೆ ಬದ್ಧರಾಗಿ ಎಲ್ಲಾ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದು ರೋಟರಿ ೩೧೮೧ರ ಕಾರ್ಯರ್ಶಿ ಎಚ್.ಎಂ. ಹರೀಶ್ ಹೇಳಿದರು.ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಶ್ರೀ ಶಂಕರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಯಳಂದೂರು ರೋಟರಿ ಗ್ರೀನ್‌ವೇ ಸಂಸ್ಥೆಯ ಸದಸ್ಯರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕ್ಲಬ್ ಒಂದು ಕುಟುಂಬವಾಗಿದೆ. ಇಲ್ಲಿರುವ ಎಲ್ಲರೂ ನಮ್ಮ ಕುಟುಂಬದವರೇ ಆಗಿರುತ್ತಾರೆ. ಇಲ್ಲಿರುವ ಪ್ರತಿ ಸದಸ್ಯರೂ ಸೇವಾ ಮನೋಭಾವನೆಯಿಂದಲೇ ಕೆಲಸವನ್ನು ಮಾಡಬೇಕು. ನಮ್ಮ ಸಂಸ್ಥೆ ಇಡೀ ವಿಶ್ವದ ಅನೇಕ ದೇಶಗಳಲ್ಲಿದೆ. ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆ ಮಿಲಿಯನ್ ಗಟ್ಟಲೆ ಡಾಲರ್ ಹಣವನ್ನು ನೀಡುತ್ತಿದೆ. ನಾವು ಈ ಮಾರ್ಗದಲ್ಲೇ ಸಾಗಬೇಕು. ಸರ್ಕಾರಿ ಶಾಲೆ, ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ, ಪರಿಕರಗಳು, ಲೇಖನ, ಪಠ್ಯ ಸಾಮಾಗ್ರಿಗಳು ಸೇರಿದಂತೆ ಅವಶ್ಯಕತೆ ಇರುವ ವಸ್ತುಗಳನ್ನು ನಿಸ್ವಾರ್ಥ ಸೇವೆ ಎಂದು ಪರಿಗಣಿಸಿ ನೀಡಬೇಕು ಎಂದು ಸಲಹೆ ನೀಡಿದರು.ರೋಟರಿ ಗ್ರೀನ್ ವೇನ ತಾಲೂಕು ಅಧ್ಯಕ್ಷ ವೈ.ಜಿ. ನಿರಂಜನಸ್ವಾಮಿ ಕಾರ್ಯದರ್ಶಿ ಪುಟ್ಟರಾಜು ಸದಸ್ಯರಾದ ರುದ್ರಯ್ಯ, ಡಾ. ಸಾಗರ್, ಶಿವಕುಮಾರ್, ಗೌಡಹಳ್ಳಿ ರವಿ, ವೈ.ಕೆ.ಮೋಳೆ ನಾಗರಾಜು, ಬಂಗಾರಸ್ವಾಮಿ, ನಟರಾಜು, ರಿತೀಶ್, ಬಿ.ಟಿ. ಶ್ರೀನಿವಾಸ್ ಇದ್ದರು.