ಸಾರಾಂಶ
ನಗರಸಭಾ ಅಧ್ಯಕ್ಷ ಎಂ. ಸಮೀವುಲ್ಲಾ ಮತ್ತು ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಗರಸಭಾ ಸದಸ್ಯರು ಹಾಗೂ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ, ರಸ್ತೆಯಲ್ಲಿ ರೋಡ್ ಶೋ ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಅರಸೀಕೆರೆಯನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಬೇಕೆಂಬ ದೃಷ್ಟಿಕೋನದಲ್ಲಿ, ಕ್ಷೇತ್ರದ ಶಾಸಕ ಶಿವಲಿಂಗೇಗೌಡರ ಮಾರ್ಗದರ್ಶನದಡಿಯಲ್ಲಿ ನಾವು ಅಭಿವೃದ್ಧಿಯ ದಾರಿಯಲ್ಲಿ ಸ್ಥಿರವಾಗಿ ಸಾಗುತ್ತಿದ್ದೇವೆ. ಭವಿಷ್ಯದಲ್ಲೂ ಈ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರಸಭಾ ಅಧ್ಯಕ್ಷ ಎಂ. ಸಮೀವುಲ್ಲಾ ಮತ್ತು ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಗರಸಭಾ ಸದಸ್ಯರು ಹಾಗೂ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ, ರಸ್ತೆಯಲ್ಲಿ ರೋಡ್ ಶೋ ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ಎಂ. ಸಮೀವುಲ್ಲಾ ಮಾತನಾಡಿ, ನಮ್ಮ ನಡೆ ಅಭಿವೃದ್ಧಿಯ ಕಡೆ. ಕಳೆದ ಒಂದು ವರ್ಷದಲ್ಲಿ ಸಾಧ್ಯಕಿಂತ ಮೀರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ನಗರದ ಹೃದಯ ಭಾಗದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗಿದೆ. ವಿವಿಧ ವಾರ್ಡುಗಳಲ್ಲಿ ಪ್ರಜಾಹಿತದ ಯೋಜನೆಗಳು ಜಾರಿಗೆ ಬಂದಿವೆ. ದೇವರು ಎಷ್ಟು ದಿನ ಅಧಿಕಾರ ನೀಡುತ್ತಾನೋ, ಅಷ್ಟು ದಿನ ಅಭಿವೃದ್ಧಿಯ ಕೆಲಸ ಮುಂದುವರಿಯುತ್ತವೆ ಎಂದು ಹೇಳಿದರು.ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ ಮಾತನಾಡಿ, ಇದು ಕೇವಲ ನಮ್ಮ ಸಾಧನೆಯಲ್ಲ, ಎಲ್ಲಾ ವಾರ್ಡ್ ಸದಸ್ಯರ ಸಹಕಾರ ಹಾಗೂ ಜನತೆಯ ಸಹಭಾಗಿತ್ವದಿಂದ ಈ ಯಶಸ್ಸು ಸಾಧ್ಯವಾಗಿದೆ. ಅರಸೀಕೆರೆಯನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಬೇಕೆಂಬ ದೃಷ್ಟಿಕೋನದಲ್ಲಿ, ಕ್ಷೇತ್ರದ ಶಾಸಕ ಶಿವಲಿಂಗೇಗೌಡರ ಮಾರ್ಗದರ್ಶನದಡಿಯಲ್ಲಿ ನಾವು ಅಭಿವೃದ್ಧಿಯ ದಾರಿಯಲ್ಲಿ ಸ್ಥಿರವಾಗಿ ಸಾಗುತ್ತಿದ್ದೇವೆ. ಭವಿಷ್ಯದಲ್ಲೂ ಈ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.ಸಂಭ್ರಮಾಚರಣೆಯಲ್ಲಿ ನಗರಸಭಾ ಸದಸ್ಯರುಗಳಾದ ಗಣೇಶ್, ದರ್ಶನ್, ಹರೀಶ್, ಅವಿನಾಶ್, ಮಾರುತಿ, ಸಂತೋಷ್ ಮಠ ಮತ್ತು ಇತರರು ಭಾಗವಹಿಸಿದ್ದರು.