ಜನತೆಯ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ ದರ

| Published : Nov 11 2024, 12:51 AM IST

ಸಾರಾಂಶ

ಚಿಕ್ಕಬಳ್ಳಾಪುರ ಜಿಲ್ಲೆಗೆ ನಾಗಪುರ, ನಾಸಿಕ್‌, ಪೂನಾ ಸೇರಿದಂತೆ ನಾನಾ ಭಾಗದಿಂದ 500ಕ್ಕೂ ಹೆಚ್ಚು ಟ್ರಕ್‌ಗಳಿಂದ ರಾಜ್ಯಕ್ಕೆ ಪೂರೈಕೆ ಆಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ 50 ರೂ. ಹೋಲ್‌ಸೇಲ್‌ ದರದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಒಂದೊಂದು ರೀತಿಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೀಪಾವಳಿ ಹಬ್ಬ ಕಳೆದರೂ ಈರುಳ್ಳಿ ದರ ತಗ್ಗದೆ ಏರು ಮುಖವಾಗಿ ಜನತೆಯ ಕಣ್ಣಲ್ಲಿ ನೀರು ತರಿಸುತ್ತಿದೆ. ದೀಪಾವಳಿ ಹಬ್ಬದಲ್ಲೂ ಈರುಳ್ಳಿ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುಲಿಲ್ಲ. ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಕಳೆದ ಹಲವು ದಿನಗಳಿಂದ ಈರುಳ್ಳಿ ಬೆಲೆ ಕೆಳಗಿಳಿಯದೇ ಮೇಲೆರುತ್ತಿದೆ. ಆದರೆ ಗದಗದಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದೆ ಎಂದು ರೈತರು ಪ್ರತಿಭಟಿಸುತ್ತಿದ್ದಾರೆ, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಉತ್ತಮ ಈರುಳ್ಳಿ 50 ರಿಂದ 65ರೂ ಆಗಿದೆ. ಜತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ 70 ರಿಂದ 80 ರೂ.ವರೆಗೂ ಮಾರಾಟವಾಗುತ್ತಿದೆ. ಎಪಿಎಂಸಿಯಲ್ಲಿ ಮಹಾರಾಷ್ಟ್ರದ ನಾಗಪುರ, ನಾಸಿಕ್‌, ಪೂನಾ ಭಾಗದ ಹಳೆ ದಾಸ್ತಾನು ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5000 ರೂ.ನಿಂದ 7 ಸಾವಿರ ರೂ. ವರೆಗೂ ಖರೀದಿಯಾಯಿತು. ಜತೆಗೆ ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕೆ.ಜಿಗೆ 4,400 ರಿಂದ 4,600 ರೂ.ವರೆಗೂ ಮಾರಾಟವಾಯಿತು. ಸಾಧಾರಣ ಗಾತ್ರದ ಈರುಳ್ಳಿ 3,800 ರಿಂದ 4 ಸಾವಿರ ರೂ. ವರೆಗೂ, ಸ್ಥಳೀಯ ಹೊಸ ಈರುಳ್ಳಿ 1200 ರಿಂದ 1000 ಸಾವಿರ ರೂ. ವರೆಗೂ ಖರೀದಿಯಾಯಿತು. ಹೊಸ ಈರುಳ್ಳಿ ಕ್ವಿಂಟಲ್‌ಗೆ ₹5 ಸಾವಿರ

ಎಪಿಎಂಸಿ ಮಾರುಕಟ್ಟೆಯಲ್ಲಿ ಹೊಸ ಈರುಳ್ಳಿಗೂ ಬೇಡಿಕೆ ಕಂಡು ಬಂದಿದೆ.ಹೊರ ರಾಜ್ಯಗಳಿಂದ 30ಕ್ಕೂ ಅಧಿಕ ಟ್ರಕ್‌ಗಳಲ್ಲಿ ಹೊಸ ಈರುಳ್ಳಿ ಬೆಳೆ ಮಾರು ಕಟ್ಟೆಗೆ ಪೂರೈಕೆ ಆಗಿದೆ. ಶ್ರೇಷ್ಠ ಗುಣಮಟ್ಟದ ಹೊಸ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 4,700 ರೂ.ನಿಂದ5 ಸಾವಿರ ರೂ. ವರೆಗೆ ಖರೀದಿಯಾಯಿತು ಎಂದು ಎಪಿಎಂಸಿಯ ಹೋಲ್‌ಸೇಲ್‌ ಈರುಳ್ಳಿ ವ್ಯಾಪಾರಿ ವೆಂಕಟೇಶ್‌ ಮಾಹಿತಿ ನೀಡಿದರು.

ಜಿಲ್ಲೆಗೆ ನಾಗಪುರ, ನಾಸಿಕ್‌, ಪೂನಾ ಸೇರಿದಂತೆ ನಾನಾ ಭಾಗದಿಂದ 500ಕ್ಕೂ ಹೆಚ್ಚು ಟ್ರಕ್‌ಗಳಿಂದ ರಾಜ್ಯಕ್ಕೆ ಪೂರೈಕೆ ಆಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ 50 ರೂ. ಹೋಲ್‌ಸೇಲ್‌ ದರದಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಒಂದೊಂದು ರೀತಿಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಪೂರೈಕೆ ಕೊರತೆ

ಬರ ಬಂದು ನಮ್ಮ ಭಾಗದಲ್ಲಿ ಈರುಳ್ಳಿ ಬೆಳೆದಿಲ್ಲ. ಬರ ಸೇರಿ ಮತ್ತಿತರ ಕಾರಣಗಳಿಂದ ಈಗ ಬೇಡಿಕೆಯಿದ್ದಷ್ಟು ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಪಿಎಂಸಿ ಸೇರಿ ಹಲವು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾರಾಕಿಗಳು.