ಆನ್ ಲೈನ್ ಗೇಮ್ ನಿಷೇಧ: ಡಾ. ಸುಶ್ರುತ ಗೌಡ ಸ್ವಾಗತ

| Published : Sep 04 2025, 01:00 AM IST

ಸಾರಾಂಶ

ಹಣದ ಅಪಾಯ ಹೊಂದಿರುವ ಈ ಆನ್ ಲೈನ್ ಕ್ರೀಡೆಗಳು ಜನರನ್ನು ಅವುಗಳ ವ್ಯಸನಿಯನ್ನಾಗಿಸುತ್ತಿದ್ದವು. ಇದು ಆತ್ಮಹತ್ಯೆ, ಕೌಟುಂಬಿಕ ಕಲಹ, ಹೀಗೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. ಈ ಹಿನ್ನೆಲೆ ಕೇಂದ್ರ ಸರ್ಕಾರ ಅತ್ಯಂತ ಸಮಯೋಚಿತ ನಿರ್ಧಾರ ತೆಗೆದುಕೊಂಡಿದೆ .

ಮೈಸೂರು: ಆನ್ ಲೈನ್ ಗೇಮ್ ನಿಷೇಧ ಸಂಬಂಧ ದಿಟ್ಟ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವನ್ನು ನಗರದ ವೈದ್ಯ ಹಾಗೂ ಬಿಜೆಪಿ ಮುಖಂಡ ಡಾ. ಸುಶ್ರುತ್ ಗೌಡ ಅಭಿನಂದಿಸಿದ್ದಾರೆ. ಬೊಕ್ಕಸಕ್ಕೆ ಸುಮಾರು 20 ಸಾವಿರ ಕೋಟಿ ರು. ತೆರಿಗೆ ನಷ್ಟದ ಸಾಧ್ಯತೆಯ ಹೊರತಾಗಿಯೂ ದೇಶದ ಜನರ ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ತೆಗೆದುಕೊಂಡಿರುವ ಈ ನಿರ್ಧಾರ ಐತಿಹಾಸಿಕವಾದದ್ದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಣದ ಅಪಾಯ ಹೊಂದಿರುವ ಈ ಆನ್ ಲೈನ್ ಕ್ರೀಡೆಗಳು ಜನರನ್ನು ಅವುಗಳ ವ್ಯಸನಿಯನ್ನಾಗಿಸುತ್ತಿದ್ದವು. ಇದು ಆತ್ಮಹತ್ಯೆ, ಕೌಟುಂಬಿಕ ಕಲಹ, ಹೀಗೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು. ಈ ಹಿನ್ನೆಲೆ ಕೇಂದ್ರ ಸರ್ಕಾರ ಅತ್ಯಂತ ಸಮಯೋಚಿತ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ಉಭಯ ನಾಯಕರ ದೂರದೃಷ್ಟಿಯ, ಜನಪರ ಆಡಳಿತಕ್ಕೆ ಮತ್ತೊಂದು ಉದಾಹರಣೆ ಎಂದು ಅವರು ತಿಳಿಸಿದ್ದಾರೆ.