ಭಕ್ತಿಯಿಂದ ಮುನ್ನಡೆದರೇ ಮಾನವ ದೇವನಾಗಲು ಸಾಧ್ಯ

| Published : Apr 19 2025, 12:38 AM IST

ಸಾರಾಂಶ

ಭಕ್ತಿ ಎಂಬುವುದು ದೊಡ್ಡ ಸಂಪತ್ತು, ಮನುಷ್ಯನು ಸಂಪತ್ತನ್ನು ನಿರ್ಮಾಣ ಮಾಡಬೇಕಾದರೇ ಭಕ್ತಿ ಮುಖ್ಯ. ಅಂತಹ ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾನವ ದೇವನಾಗಲು ಸಾಧ್ಯ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಭಕ್ತಿ ಎಂಬುವುದು ದೊಡ್ಡ ಸಂಪತ್ತು, ಮನುಷ್ಯನು ಸಂಪತ್ತನ್ನು ನಿರ್ಮಾಣ ಮಾಡಬೇಕಾದರೇ ಭಕ್ತಿ ಮುಖ್ಯ. ಅಂತಹ ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾನವ ದೇವನಾಗಲು ಸಾಧ್ಯ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ನುಡಿದರು.

ಪಟ್ಟಣದ ಮುರಗೋಡ ರಸ್ತೆಯ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ 15ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಎರಡನೇ ದಿನದ ಧರ್ಮಸಭೆ ಹಾಗೂ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮದ ತಳಹದಿಯಲ್ಲಿ ಎಲ್ಲರೂ ಮುನ್ನಡೆಯಬೇಕು. ಮಹಾಂತೇಶ ಶಾಸ್ತ್ರಿ ಅವರು ಈ ಭಾಗದ ಜನರಿಗೆ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕತೆ ಉಣಬಡಿಸುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.ಗೋಕಾಕ ಲಕ್ಷ್ಮೀ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸರ್ವೋತ್ತಮ ಜಾರಕಿಹೋಳಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಧಾರ್ಮಿಕ, ಭಕ್ತಿ, ಭಾವ, ಗುರು ಹಿರಿಯರನ್ನು ಗೌರವಿಸುವುದು, ತಂದೆ-ತಾಯಿಯರನ್ನು ಪೂಜಿಸುವುದು, ನಯ-ವಿನಯದಿಂದ ನಡೆಯುವಂತೆ ಮಕ್ಕಳಲ್ಲಿ ಪ್ರೇರೆಪಿಸಬೇಕು ಎಂದರು.ಹುಕ್ಕೇರಿ ಹಿರೇಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುನವಳ್ಳಿ ಮುರಘರಾಜೇಂದ್ರ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಪ್ರಭು ನೀಲಕಂಠ ಸ್ವಾಮೀಜಿ, ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ, ವೀರೇಶ ಮಠಪತಿ, ಚಿತ್ರನಟ ಶಿವರಂಜನ ಬೋಳನ್ನವರ, ಉದ್ಯಮಿ ವಿಜಯ ಮೆಟಗುಡ್ಡ, ಮುರಗೇಶ ಗುಂಡ್ಲುರ, ಕಾರ್ತೀಕ ಪಾಟೀಲ, ಹಬೀಬ್‌ ಶಿಲೇದಾರ, ಡಾ.ಮಹಾಂತೇಶ ಕಳ್ಳಿಬಡ್ಡಿ, ಬಿ.ಬಿ.ಬೋಗೂರ, ಗಂಗಪ್ಪ ಗುಗ್ಗರಿ, ಬಿಗ್ ಬಾಸ್ ಖ್ಯಾತಿ ಮೋಕ್ಷಿತಾ ಪೈ, ಗೋಲ್ಡ್ ಸುರೇಶ ಇದ್ದರು.ಹಾಸ್ಯ ನಟ ಸಾಧು ಕೋಕಿಲ ಅವರು ಕಾಣದ ಕಡಲಿಗೆ ಹಂಬಲಿಸಿದೆ ಮನ, ರಕ್ತ ಕಣ್ಣೀರು ಚಿತ್ರದ ಡೇಂಜರ್ ಹಾಡಿಗೆ ಪ್ರೇಕ್ಷಕರಿಂದ ಚಪ್ಪಾಳೆ ತಟ್ಟಿ ಸಿಳ್ಳೆ ಕೇಕೆ ಹಾಕಿದರು. ಇದೇ ವೇಳೆ ಅವರಿಗೆ ದೇವಸ್ಥಾನ ವತಿಯಿಂದ ಗುರುರಕ್ಷೆ ನೀಡಿ ಗೌರವಿಸಲಾಯಿತು. ನ್ಯಾಯವಾದಿಗಳಿಗೆ ಸತ್ಕಾರ ಕಾರ್ಯಕ್ರಮ ಜರುಗಿತು. ಸರಿಗಮಪ ಬಾಳು ಬೆಳಗುಂದಿ, ಮಿಮಿಕ್ರಿ ಗೋಪಿ, ಹಾಡು ಹಾಗೂ ಹಾಸ್ಯಕ್ಕೆ ನೋಡುಗರು ಕುಣಿದು ಕುಪ್ಪಳಿಸಿದರು.ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತೇಶ ಶಾಸ್ತ್ರಿ ಆರಾದ್ರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮುತ್ತುರಾಜ ಮತ್ತಿಕೊಪ್ಪ ನಿರೂಪಿಸಿದರು.