ಕನ್ನಡಪ್ರಭ ವಾರ್ತೆ ಮುನವಳ್ಳಿ

ಮನುಷ್ಯನ ಜೀವನ ರೂಪಿಸುವಲ್ಲಿ ಮಹತ್ವವಾದ ಪಾತ್ರ ವಹಿಸುವುದು ಒಂದು ಶಿಕ್ಷಣ, ಇನ್ನೂಂದು ದೇವಸ್ಥಾನಗಳು. ಅಕ್ಷರ ಜ್ಞಾನ ಕಲಿಸಲು ಶಾಲಾ ಶಿಕ್ಷಕರು ಹಂತ ಹಂತವಾಗಿ ಜ್ಞಾನದ ಬುತ್ತಿ ಎಲ್ಲ ಮಕ್ಕಳಿಗೂ ಬೇದಭಾವ ವಿಲ್ಲದೆ ಕಲಿಸಿದರೆ, ಮನೆಯ ಮೂದಲ ಪಾಠ ಶಾಲೆ ಎಂಬಂತೆ ಮಠ ಮಂದಿರಗಳು ಉತ್ತಮ ಸಂಸ್ಕಾರ ನೀಡುತ್ತಿದ್ದು, ಅವುಗಳನ್ನು ಮರೆಯಬಾರದು ಶ್ರೀ ಕುಮಾರೇಶ್ವರ ವಿರಕ್ತಮಠದ ಶ್ರೀ ಪಂಚಾಕ್ಷರಿ ಸ್ವಾಮಿಗಳು ಎಂದು ಹೇಳಿದರು.

ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2005 ಮತ್ತು 2006ರ ಎಸ್ಎಸ್ಎಲ್ಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಂಗಳವಾರ ಗುರುವಂದನಾ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಶಿವಪ್ರಸಾದ ದೇವರು ಮಾತನಾಡಿ, ಸಾಮಾಜಿಕ ಜೀವನದಲ್ಲಿ ಒಳ್ಳೆಯ ಕಾರ್ಯ ಮಾಡುವಂತೆ ಹೇಳಿದರು.

ಯಕ್ಕುಂಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಮೇಶ ಮುರುಂಕರ ಮಾತನಾಡಿ, ಗುರುವಂದನಾ ಕಾರ್ಯಕ್ರಮ ಗುರು ಮತ್ತು ಶಿಷ್ಯರನ್ನು ನೆನೆಪಿಸುವ ದೂಡ್ಡ ಶಕ್ತಿ. ಆಧ್ಯಾತ್ಮಿಕವಾಗಿ ಶಿಕ್ಷಣ ಮತ್ತು ಗುರುವಿನ ಶಕ್ತಿಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುತ್ತದೆ. ವಿದ್ಯಾರ್ಥಿ ಸಂಘಟನೆಯಿಂದ ಮನೆ ಮನೆ ಸಂಸ್ಕಾರ ನೀಡುವ ಕೆಲಸವಾಗಬೇಕು ಎಂದರು.ಉಪನ್ಯಾಸಕ ಎ.ಬಿ.ಅಡಕಿ, ಜೋಸಪ್ ಗೊನ್ಸಾಲ್ವಿಸ್ ಮಾತನಾಡಿ, ಹಳೆ ವಿದ್ಯಾರ್ಥಿಗಳಿಂದ ಮುಂದಿನ ಪೀಳಿಗೆಗೆ ಈ ಕಾರ್ಯಕ್ರಮ ಮಾದರಿಯಾಗಬೇಕು ಶಿಕ್ಷಣ ಮತ್ತು ಸಂಸ್ಕಾರ ಎಲ್ಲರಲ್ಲಿ ಮೂಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಬಸವರಾಜ ಹೊಂಗಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಬಿ.ದ್ಯಾಮನಗೌಡರ ಆಗಮಿಸಿದ್ದರು. ಶಂಕರಗೌಡ ಪಾಟೀಲ, ಜೈಲಾನಿ ಬಾರಿಗಿಡದ, ಬಸನಗೌಡ ಪಾಟೀಲ, ಪ್ರಾಚಾರ್ಯರು ಎ.ಬಿ.ಮಿರಜಕರ, ಡಿ.ಎಸ್.ಗಾಣಿಗೇರ, ಕೆ.ಕೆ.ಲಮಾಣಿ, ಜೆ.ಜೆ.ಕಾಮಕರ, ಮುಖೋಪಾದ್ಯಯ ಕೆ.ವೈ.ಯರಪಲ್ಲಿ, ಎಸ್.ವಿ.ಹೊಂಡೆದ, ಎಂ.ಎಸ್.ಬಂಕಾಪೂರ, ಪ್ರವೀಣಕುಮಾರ ನಿಶಾನಮಠ, ಎಸ್.ಎಸ್.ಕಡಕೋಳ, ಉದಯ ನೆಲವಡಕರ, ಕಾಣಪ್ಪ ತಳವಾರ, ಮಹಾಂತೇಶ ಕಾರಿಮನಿ, ಮುಕ್ತಾರ ಮುಲ್ಲಾ, ಮಕ್ಕುಂಮ ಬಡೆಖಾನ್, ಶಂಕರ ಪಾಶ್ಚಾಪೂರ, ಚಂದ್ರಕಾಂತ ಸಂಗಟಿ, ಶಿರಾಜ ಬಾರಿಗಿಡದ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಪ್ರವೀಣ ಸಂಗಟಿ, ಇಮಾಮ ಹುಸೇನ ಇಮ್ಮನ್ನವರ, ನಿರ್ಮಲಾ ಕುಂಬಾರ, ಶಾಲೆಯ ಹಳೆ ನೆನಪು ಗುರುವಿನ ಸದಾ ಜ್ಞಾನ ನಮ್ಮ ಜೀವನದಲ್ಲಿ ಸ್ಮರಣಿಯವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಿಕೆಪಿಎಸ್ ಶಾಲೆಗೆ 2005-06ನೇ ಸಾಲಿನ ವಿದ್ಯಾರ್ಥಿಗಳಿಂದ ನೂತನ ಸರಸ್ವತಿ ದೇವಿ ಮೂರ್ತಿ ಕಾಣಿಕೆಯಾಗಿ ನೀಡಲಾಯಿತು. ರೋಹಿಣಿ ಹಿರೇಮಠ ಸ್ವಾಗತಿಸಿದರು, ದೀಪಾಶ್ರೀ ಬೊಸಲೆ, ಪ್ರಕಾಶ ಹಟ್ಟಿ, ನಿರೂಪಿಸಿದರು, ಶಮ್ಮಸಾದಬೇಗಮ ಗೋರಿನಾಯ್ಕ ವಂದಿಸಿದರು.