ಮಕ್ಕಳು ತಮ್ಮ ಪ್ರತಿಭೆ ಅನಾವರಣ ಮಾಡಲು ಪಠ್ಯದ ಜೊತೆಗೆ ಚಿತ್ರಕಲೆ, ಕ್ರೀಡೆ ಮತ್ತು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದು ಪ್ರಾಚಾರ್ಯ ರಮೇಶ ಶಹಬಾದ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಮಕ್ಕಳು ತಮ್ಮ ಪ್ರತಿಭೆ ಅನಾವರಣ ಮಾಡಲು ಪಠ್ಯದ ಜೊತೆಗೆ ಚಿತ್ರಕಲೆ, ಕ್ರೀಡೆ ಮತ್ತು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸುವು ಅವಶ್ಯಕವಾಗಿದೆ. ಅನೇಕ ಮಹಾನ್ ಪುರುಷರು ಕಡುಬಡುತನದಲ್ಲಿ ಬೆಳೆದು ಚಿತ್ರಕಲೆ ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಅಂತಹವರಿಂದ ಪರಿವರ್ತನೆ ಹೊಂದಿ ವಿದ್ಯಾರ್ಥಿಗಳು ಚಿತ್ರಕಲೆಯನ್ನು ಹವ್ಯಾಸವಾಗಿ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬಹುದು ಎಂದು ಪ್ರಾಚಾರ್ಯ ರಮೇಶ ಶಹಬಾದ ಹೇಳಿದರು.

ಮಕ್ಕಳ ದಿನಾಚರಣೆ ನಿಮಿತ್ತ ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಚಿತ್ರಕಲಾ ಪರಿಷತ್, ಕನ್ನಡ ಪ್ರಭ ಹಾಗೂ ಏಷಿಯಾ ನೆಟ್ ಸುವರ್ಣ ನ್ಯೂಸ್ ಇವರ ಸಂಯೋಗದಲ್ಲಿ ಶ್ರೀ ಪ್ರಜ್ಞಾ ಎಜ್ಯುಕೇಷನ್ ಟ್ರಸ್ಟ್ ಹಾಗೂ ಶಾಕಾಂಬರಿ ಸಿಬಿಎಸ್‌ಸಿ ಸ್ಕೂಲ್ ಸಭಾಂಗಣದಲ್ಲಿ ಅರಣ್ಯ ಅಥವಾ ವನ್ಯ ಜೀವಿ ವಿಷಯದ ಮೇಲೆ ಪ್ರೌಢಶಾಲೆಯ ಮಕ್ಕಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ಪತ್ರಿಕೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಣ್ಯ, ವನ್ಯಜೀವಿ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಉತ್ತಮವಾದ ಕೆಲಸ. ವಿದ್ಯಾರ್ಥಿಗಳು ಶಾಲೆಯ ಆವರಣ, ಮನೆಯ ಸುತ್ತ ಮುತ್ತಲಿನ ಆವರಣದಲ್ಲಿ ಸಸಿ ನೆಡುವುದರ ಮೂಲಕ ಪರಿಸರ ಬೆಳೆಸಬೇಕು ಎಂದು ಹೇಳಿದರು.

ವರದಿಗಾರ ಶಂಕರ ಕುದರಿಮನಿ ಮಾತನಾಡಿ, ಜೀವನದಲ್ಲಿ ವಿದ್ಯಾರ್ಜನೆ ಮುಖ್ಯವಲ್ಲ ಎಲ್ಲಾ ರೀತಿಯ ವ್ಯಕ್ತಿತ್ವ ಪ್ರಮುಖವಾಗುತ್ತದೆ. ಅರಣ್ಯ ಇಲಾಖೆಯಿಂದ ದೇಶ್ಯಾದಂತ ಹುಲಿ ಗಣತಿ ಕೂಡಾ ಹಮ್ಮಿಕೊಂಡಿದ್ದಾರೆ. ಕಾಡು ಉಳಿದರೆ ಮಾತ್ರ ಮನಷ್ಯನ ಜೀವನ ಉಳಿಯಲು ಸಾಧ್ಯ. ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯನ್ನು ಮಿತವಾಗಿ ಬಳಸಬೇಕೆಂದು ಸಲಹೆ ನೀಡಿ ಸ್ವಾಭಾವಿಕವಾಗಿ ಅರಣ್ಯವನ್ನು ನಾವು ಹೆಚ್ಚಿಸಬೇಕಾಗಿದೆ ಎಂದರು.

ವೇದಿಕೆಯ ಮೇಲೆ ಚಿತ್ರಕಲಾ ಶಿಕ್ಷಕರಾದ ರವಿ ಬಡಿಗೇರ, ಮಹಾದೇವಿ ಪಡಿಯಪ್ಪನವರ ಹಾಗೂ ಶಿಕ್ಷಕರಾದ ಪೂರ್ಣಿಮಾ ಹೊಂಬರ, ರಾಘವೇಂದ್ರ, ನಾಗನೂರ ರಾಜೇಶ್ವರಿ ಎಚ್, ಸಲೀಂ ನದಾಫ ಉಪಸ್ಥಿತರಿದ್ದರು.ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ನಿಧಾ ನಾಗನೂರ ನಿರೂಪಿಸಿ ವಂದಿಸಿದರು.

ಬಹುಮಾನ ವಿಜೇತರು:

8ನೇ ತರಗತಿ ವಿಭಾಗದಲ್ಲಿ ಪ್ರಥಮ ಶಿವಾನಿ ಗೋಗೇರಿ, ದ್ವೀತಿಯ ಅನುಷ್ಕಾ ಕುಂಟೋಜಿ, ತೃತೀಯ ಆಜಾದಅಮನ್ ಬೇಪಾರಿ,

9ನೇ ತರಗತಿಯಲ್ಲಿ ಪ್ರಥಮ ರೇಖಾ ವ್ಹಿ.ಬಿ, ದ್ವೀತಿಯ ಖುಷಿ ಎಸ್. ತೃತೀಯ ಕಾವ್ಯ ಎಚ್.

10ನೇ ತರಗತಿಯಲ್ಲಿ ಪ್ರಥಮ ನಂದಿನಿ ಆರ್.ಡಿ., ದ್ವೀತಿಯ ರಶ್ಮಿ ಪಾಟೀಲ, ತೃತೀಯ ಸ್ನೇಹಾ ಶಾನಬಾದ