ಸಾರಾಂಶ
ಪೊರಾಡ್ ಗ್ರಾಮದ ಪುತ್ತರಿ ಊರೋರ್ಮೆ ಹಾಗೂ 68ನೇ ಮಹಾಸಭೆ ನಡೆಯಿತು. ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾ. ಪಂ. ವ್ಯಾಪ್ತಿಯ ಪೊರಾಡ್ ಗ್ರಾಮದ ಪುತ್ತರಿ ಊರೋರ್ಮೆ ಹಾಗೂ 68ನೇ ಮಹಾಸಭೆ ಗುರುವಾರ ನಡೆಯಿತು.ಪೊರಾಡ್ ಊರು ಪಂಚಾಯಿತಿಯ ಲೆಕ್ಕಪರಿಶೋಧನೆಯನ್ನು ಕಳೆದ 55 ವರ್ಷಗಳಿಂದ ನಿರಂತರವಾಗಿ ನಡೆಸಿದ ಮಲ್ಲೇಗಡ ಪಿ.ಧನಂಜಯ ಅವರನ್ನು ಪುತ್ತರಿ ಊರೋರ್ಮೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಊರೋರ್ಮೆ ಕಾರ್ಯಕ್ರಮದಲ್ಲಿ ಊರು ಪಂಚಾಯಿತಿ ಆಡಳಿತ ಮಂಡಳಿಗೆ ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬದ ಮಹಾಸಭೆಯಲ್ಲಿ ಆಯ್ಕೆ ಮಾಡಿ ಕಳುಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.ಊರಿನ ಮರಣನಿಧಿ, ದೇವಸ್ಥಾನ ತೆರಿಗೆಗಳನ್ನು ಒಂದೇ ಮೊತ್ತದಲ್ಲಿ 2000 ರು. ದಂತೆ ಪಾವತಿಸಲು ಹಾಗೂ ಮರಣ ನಿಧಿಯನ್ನು 25 ಸಾವಿರ ರು. ಕೊಡಲು ನಿಗದಿಪಡಿಸಲು ನಿರ್ಧರಿಸಲಾಯಿತು. ಊರು ಪಂಚಾಯಿತಿ ಅಧ್ಯಕ್ಷ ಬಲ್ಯಮೀದೇರಿರ ಪ್ರಕಾಶ್, ಉಪಾಧ್ಯಕ್ಷ ಅಣ್ಣೀರ ಲವ ಅಯ್ಯಪ್ಪ, ಕಾರ್ಯದರ್ಶಿ ಮೀದೇರಿರ ಹರೀಶ್, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.