ವಿವಿ ತೆರೆದು ದೊಡ್ಡಸ್ತಿಕೆ ತೋರಿಸುವುದಲ್ಲ: ಬಿಜೆಪಿಗೆ ಸಚಿವ ಚಲುವರಾಯಸ್ವಾಮಿ ಟಾಂಗ್

| Published : Mar 02 2025, 01:17 AM IST

ವಿವಿ ತೆರೆದು ದೊಡ್ಡಸ್ತಿಕೆ ತೋರಿಸುವುದಲ್ಲ: ಬಿಜೆಪಿಗೆ ಸಚಿವ ಚಲುವರಾಯಸ್ವಾಮಿ ಟಾಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ವಿವಿ ಮುಚ್ಚುತ್ತಿರುವುದಕ್ಕೆ ಬಿಜೆಪಿ-ಜೆಡಿಎಸ್ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರದಲ್ಲಿ ಕೇವಲ ವಿವಿ ತೆರೆದಿದ್ದೆಷು ಅಷ್ಟೇ. ಉಪನ್ಯಾಸಕರಿಗೆ, ಸಿಬ್ಬಂದಿಗೆ ಕನಿಷ್ಠ ಸಂಬಳ ಕೊಡಲಿಲ್ಲ. ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಿಸುವ ಯೋಗ್ಯತೆ ಪ್ರದರ್ಶಿಸಲಿಲ್ಲ. ಸೌಲಭ್ಯಗಳನ್ನು ದೊರಕಿಸಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದೊಡ್ಡಸ್ತಿಕೆ ಪ್ರದರ್ಶನ ಮಾಡಿಕೊಳ್ಳುವುದಕ್ಕಾಗಿ ವಿಶ್ವವಿದ್ಯಾಲಯಗಳನ್ನು ತೆರೆಯಿತೇ ವಿನಃ ಯಾವುದೇ ದೂರದೃಷ್ಟಿ ಇರಲಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ಮಂಡ್ಯ ವಿವಿ ಮುಚ್ಚುತ್ತಿರುವುದಕ್ಕೆ ಬಿಜೆಪಿ-ಜೆಡಿಎಸ್ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರದಲ್ಲಿ ಕೇವಲ ವಿವಿ ತೆರೆದಿದ್ದೆಷು ಅಷ್ಟೇ. ಉಪನ್ಯಾಸಕರಿಗೆ, ಸಿಬ್ಬಂದಿಗೆ ಕನಿಷ್ಠ ಸಂಬಳ ಕೊಡಲಿಲ್ಲ. ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಿಸುವ ಯೋಗ್ಯತೆ ಪ್ರದರ್ಶಿಸಲಿಲ್ಲ. ಸೌಲಭ್ಯಗಳನ್ನು ದೊರಕಿಸಲಿಲ್ಲ. ಈಗ ಬಂದು ಗುಣಾತ್ಮಕ ಶಿಕ್ಷಣ, ವಿದ್ಯಾರ್ಥಿಗಳ ಭವಿಷ್ಯ ಎಂದೆಲ್ಲಾ ಬೊಗಳೆ ಹೊಡೆಯುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಅವರಿಗೆ ಇದರ ಅರಿವಿರಲಿಲ್ಲವೇ ಎಂದು ಪ್ರಶ್ನಿಸಿದರು.

ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಉತ್ತರ ಹೇಳುತ್ತೇವೆ ಎಂದು ಉತ್ತರಿಸಿದರು.

ಕಾಂಗ್ರೆಸ್ ಸಂಪರ್ಕದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ ಎಂಬ ವಿಚಾರ ಕುರಿತು, ಅವರಾಗಿಯೇ ಬಂದ್ರೆ ಬೇಜಾರಿಲ್ಲ. ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅಭ್ಯಂತರವಿಲ್ಲ. ಸ್ವಯಂ ಪ್ರೇರಿತರಾಗಿ ಬರುವುದಾದರೆ ಸೇರಿಸಿಕೊಳ್ಳುತ್ತೇವೆ ಎಂದು ಸಿಎಂ ಹಾಗೂ ಪಕ್ಷದ ಅಧ್ಯಕ್ಷರೂ ಹೇಳಿದ್ದಾರೆ ಎಂದರು.

ಪಿಡಬ್ಲ್ಯುಡಿ ಇಲಾಖೆಯಲ್ಲಿ ಗುತ್ತಿಗೆ ಪಡೆಯಲು ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿ.ಆರ್.ರಾಮಚಂದ್ರ ರಾಜಕಾರಣ ಮಾಡುತ್ತಿದ್ದಾರೋ, ಗುತ್ತಿಗೆ ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ಎರಡೂ ಮಾಡಲು ಹೋಗಿ ಹೀಗಾಗಿರಬಹುದು ಪಿಡಬ್ಲ್ಯುಡಿ

ಕಾರ್ಯದರ್ಶಿಯಿಂದ ತನಿಖೆ ಮಾಡಿಸೋಣ ಎಂದಷ್ಟೇ ಹೇಳಿದರು.