ಗುಂಡ್ಲುಪೇಟೆಯಲ್ಲಿ ಕೆಫೆ ಮೂ ಆರಂಭ

| Published : Jun 20 2024, 01:05 AM IST

ಸಾರಾಂಶ

ಜಿಲ್ಲೆಯಲ್ಲಿ ಕೆಫೆ ಮೂವನ್ನು ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಉದ್ಘಾಟನೆಗೊಳಿಸಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಜನ ಸಂದಣಿ ಹಾಗೂ ಪ್ರವಾಸಿಗರು ಬಂದು ಹೋಗುವ ಸ್ಥಳಗಳಲ್ಲಿ ನಂದಿನಿ ಕೆಫೆ ಮೂ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಹೇಳಿದರು.

ಪಟ್ಟಣದಲ್ಲಿ ಕೆಎಂಎಫ್‌ ಹಾಗೂ ಚಾಮುಲ್‌ ಸಹಯೋಗದಲ್ಲಿ ನಂದಿನಿ ಕೆಫೆ ಮೂ ಉದ್ಘಾಟಿಸಿದ ಬಳಿಕ ಮಾತನಾಡಿ, ಕೆಎಂಎಫ್‌ ಹಾಗೂ ಚಾಮುಲ್‌ ನಂದಿನಿ ಕೆಫೆ ಮೂ ಆರಂಭಿಸಿದೆ, ನಂದಿನಿ ಕೆಫೆ ಮೂನಲ್ಲಿ ನಂದಿನಿ ಸಿಹಿ ಉತ್ಪನ್ನಗಳು ಹಾಗೂ ನಂದಿನಿ ಹಾಲಿನಿಂದ ತಯಾರಾಗುವ ಫೀಜಾ, ಬರ್ಗರ್‌, ಸ್ಯಾಂಡ್‌ ಜೀಚ್‌, ಮಿಲ್ಕ್‌ ಶೇಕ್‌ಗಳು ರಾಸಾಯನಿಕ ಮುಕ್ತವಾಗಿವೆ ಪ್ರವಾಸಿಗರು ಹಾಗೂ ಸ್ಥಳೀಯರು ಸೇವಿಸಿ ಎಂದು ತಿಳಿಸಿದರು.

ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌, ಸಂಸದ ಸುನೀಲ್‌ ಬೋಸ್‌, ಮಾಜಿ ಸಚಿವೆ ಡಾ. ಗೀತಾ ಮಹದೇವಪ್ರಸಾದ್‌, ಮಾಜಿ ಸಂಸದ ಎ. ಸಿದ್ದರಾಜು, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ,ಚಾಮುಲ್‌ ಅಧ್ಯಕ್ಷ ವೈ.ಸಿ. ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ಕೆಎಂಎಫ್‌ ನಿರ್ದೇಶಕ ಎಂ. ನಂಜುಂಡಸ್ವಾಮಿ, ಕಾಡಾಧ್ಯಕ್ಷ ಪಿ. ಮರಿಸ್ವಾಮಿ, ಚಾಮುಲ್‌ ನಿರ್ದೇಶಕರಾದ ಎಚ್.ಎಸ್. ನಂಜುಂಡ ಪ್ರಸಾದ್‌,ಎಚ್.ಎಸ್. ಬಸವರಾಜು, ಎಸ್. ಮಹದೇವಸ್ವಾಮಿ, ಎಂಪಿ. ಸುನೀಲ್‌, ಸದಾಶಿವ ಮೂರ್ತಿ, ಶಾಹುಲ್‌ ಅಹಮದ್‌, ಶೀಲಾ ಪುಟ್ಟರಂಗಶೆಟ್ಟಿ, ಕೆ.ಕೆ. ರೇವಣ್ಣ, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ. ರಾಜಕುಮಾರ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ್‌, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎನ್. ನಂದಕುಮಾರ್‌, ಮೈಸೂರು, ಚಾಮರಾಜನಗರ ಜಿಲ್ಲಾ ಕ್ವಾರಿ ಮತ್ತು ಕ್ರಸರ್‌ ಮಾಲೀಕರ ಸಂಘದ ಅಧ್ಯಕ್ಷ ಆರ್. ಮಧುಕುಮಾರ್‌, ನಂದಿನಿ ಕೆಫೆ ಮೂನ ಡಾ.ಚಂದ್ರಚೂಡ, ಮಹದೇವಪ್ರಸಾದ್‌ ಕುಟುಂಬಸ್ಥರಾದ ವಿದ್ಯಾ ಗಣೇಶ್‌, ರೂಪ ನಂಜುಂಡಪ್ರಸಾದ್‌, ಪ್ರೇಮ ಚಂದ್ರಚೂಡ, ಎಚ್.ಎನ್.ಚೆನ್ನಪ್ಪ, ಎಚ್.ಎನ್.ಮಹದೇವನ್‌, ಕಾಂಗ್ರೆಸ್‌ ಮುಖಂಡರು ಇದ್ದರು.

ಚಾಮುಲ್‌ ಅಭಿವೃದ್ಧಿಗೆ ಕ್ರಮ

ಗುಂಡ್ಲುಪೇಟೆ: ಚಾಮುಲ್‌ ೨.೬೦ ಕೋಟಿ ಲಾಭದಲ್ಲಿದ್ದು, ಚಾಮುಲ್‌ನ ಮತ್ತಷ್ಟು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಹೇಳಿದರು. ನಂದಿನಿ ಕೆಫೆ ಮೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಚಾಮುಲ್‌ ಅಭಿವೃದ್ಧಿಗೆ ಬಗ್ಗೆ ಆಡಳಿತ ಮಂಡಳಿಯ ಮನವಿ ಮಾಡಿದೆ. ಈ ಸಂಬಂಧ ಸರ್ಕಾರದೊಂದಿಗೆ ಮಾತನಾಡಿ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದರು.