ಆಪರೇಷನ್ ಸಿಂದೂರ್: ದೊಡ್ಡಬಳ್ಳಾಪುರದಲ್ಲಿ ಲಾಡು ಹಂಚಿ ಸಂಭ್ರಮಾಚರಣೆ

| Published : May 08 2025, 12:36 AM IST

ಆಪರೇಷನ್ ಸಿಂದೂರ್: ದೊಡ್ಡಬಳ್ಳಾಪುರದಲ್ಲಿ ಲಾಡು ಹಂಚಿ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮ್ಮನ್ನು ಕೆಣಕಿದರೆ ಕೈಕಟ್ಟಿ ಕೂರುವುದಿಲ್ಲ, ಸೂಕ್ತವಾದ ಬುದ್ಧಿ ಕಲಿಸ್ತೀವಿ. ಭಾರತದ ಸಹನೆ ಕಳೆದುಕೊಂಡರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಕಳೆದ ರಾತ್ರಿ ನಡೆದ ಪ್ರತಿಕಾರದ ದಾಳಿ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡಿರುವ ಆಪರೇಷನ್ ಸಿಂದೂರ ಪ್ರತಿಕಾರದ ದಾಳಿಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಲಾಡು ಹಂಚಿ ಸಂಭ್ರಮಿಸಲಾಗಿದೆ.

ಈ ವೇಳೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಮಾತನಾಡಿ, ನಮ್ಮನ್ನು ಕೆಣಕಿದರೆ ಕೈಕಟ್ಟಿ ಕೂರುವುದಿಲ್ಲ, ಸೂಕ್ತವಾದ ಬುದ್ಧಿ ಕಲಿಸ್ತೀವಿ. ಭಾರತದ ಸಹನೆ ಕಳೆದುಕೊಂಡರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಕಳೆದ ರಾತ್ರಿ ನಡೆದ ಪ್ರತಿಕಾರದ ದಾಳಿ ಸಾಕ್ಷಿಯಾಗಿದೆ. ಪಹಲ್ಗಾಮ್ ದಾಳಿಗೆಯಲ್ಲಿ ಮಡಿದ ಅಮಾಯಕರ ಸಾವಿಗೆ ಆಪರೇಷನ್ ಸಿಂದೂರ್ ನೆಮ್ಮದಿ ತಂದಿದೆ. ಇದಕ್ಕೆ ನಮ್ಮ ದೇಶದ ವೀರ ಯೋಧರಿಗೆ ಸೆಲ್ಯೂಟ್ ಮಾಡಬೇಕಿದೆ. ಭಾರತದ ಪ್ರಜೆಗಳಾದ ನಮ್ಮ ಕರ್ತವ್ಯ ಮರೆಯಬಾರದು, ಜಾತಿ, ಧರ್ಮ ಬದಿಗೊತ್ತಿ ಪಾಪಿ ಪಾಕಿಸ್ತಾನದ ವಿರುದ್ಧ ಒಂದಾಗಿ ನಿಲ್ಲಬೇಕು ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.