ಆಪರೇಶನ್ ಸಿಂಧೂರ, ಜಿಲ್ಲಾ ಬಿಜೆಪಿಯಿಂದ ವಿಶೇಷ ಪೂಜೆ

| Published : May 10 2025, 01:10 AM IST

ಸಾರಾಂಶ

ಉಗ್ರರ ನೆಲೆಗಳ ಮೇಲೆ ಭಾರತೀಯ ಸೈನಿಕರು ನಡೆಸಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕಿಲ್ಲಾ ಓಣಿಯಲ್ಲಿರುವ ಜೋಡ ಮಾರುತಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸಲಾಯಿತು.

ಗದಗ: ಉಗ್ರರ ನೆಲೆಗಳ ಮೇಲೆ ಭಾರತೀಯ ಸೈನಿಕರು ನಡೆಸಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕಿಲ್ಲಾ ಓಣಿಯಲ್ಲಿರುವ ಜೋಡ ಮಾರುತಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸಲಾಯಿತು. ಆಪರೇಷನ್ ಸಿಂದೂರ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ದೇಶದಾದ್ಯಂತ ಅಭಿನಂದಿಸಲಾಗುತ್ತಿದೆ. ಪಹಲಗಾಂನಲ್ಲಿ ಅಮಾಯಕರ ಹತ್ಯೆ ಖಂಡಿಸಿ ಅದರ ಪ್ರತೀಕಾರಕ್ಕಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ಯಶಸ್ಸು ಕಂಡಿರುವ ನಮ್ಮ ಸೈನಿಕರಿಗೆ ಹಾಗೂ ದೇಶದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಯಶಸ್ಸು, ಆರೋಗ್ಯ, ಆಯುಷ್ಯ ಹೆಚ್ಚಿನ ರೀತಿಯಲ್ಲಿ ಲಭಿಸಲೆಂದು ಪೂಜೆ ಸಲ್ಲಿಸಿ, ಅಭಿಷೇಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳ ದೇಶ ಪ್ರೇಮ ಹಾಗೂ ದೇಶದ ನಾಗರಿಕರ ಕಾಪಾಡಿಕೊಳ್ಳುವ ಅವರ ದಿಟ್ಟ ಹೆಜ್ಜೆ ಹಾಗೂ ಅವರ ಧೈರ್ಯ ನೋಡಿದ ಪ್ರತಿಯೊಬ್ಬ ಪ್ರಜೆಗೂ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು. ಭಾರತೀಯ ಕಾರ್ಯ ಶ್ಲಾಘನೀಯ. ಇನ್ನೊಮ್ಮೆ ಭಾರತ ದೇಶದ ತಂಟೆಗೆ ಬಂದರೆ ಸೇನೆಯ ನಿರ್ಣಯ ಇದಕ್ಕಿಂತ ಕಠೋರ ವಾಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟ ಹಮ್ಮೆಯ ಸೈನಿಕರಿಗೆ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಸಂದರ್ಭೊಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಂ.ಎಸ್. ಕರೀಗೌಡ್ರ, ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ನಗರಸಭೆ ಸದಸ್ಯ ಅನೀಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಶಶಿಧರ ದಿಂಡೂರ, ನಾಗರಾಜ ತಳವಾರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಕೆ.ಪಿ. ಕೋಟಿಗೌಡ್ರ, ಸುಧೀರ ಕಾಟಿಗರ, ಸಂಗನಾಳ ವಕೀಲರು, ರಾಚಯ್ಯ ಹೊಸಮಠ, ಮಂಜುನಾಥ ಶಾಂತಗೇರಿ, ಪಂಚಾಕ್ಷರಿ ಅಂಗಡಿ, ರವಿ ಮಾನ್ವಿ, ರಮೇಶ ಹತ್ತಿಕಾಳ, ಬಸವರಾಜ ಮಡಿವಾಳರ, ಬಸವರಾಜ ನರೆಗಲ್, ವಿನಾಯಕ ಹೊರಕೇರಿ, ರವಿ ಚವ್ಹಾಣ, ರಾಜು ಕಾಟಿಗರ, ನಾರಾಯಣ ಸಿಖಾಂದರ, ಸುನೀಲ ಬೇವಿನಕಟ್ಟಿ ಹಾಗೂ ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.