ಆಪರೇಷನ್‌ ಸಿಂದೂರ ಸಕ್ಸಸ್‌, ವಿಜಯೋತ್ಸವ

| Published : May 10 2025, 01:16 AM IST

ಸಾರಾಂಶ

ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಉಗ್ರಗಾಮಿಗಳು ಪ್ರವಾಸಿಗರ ಧರ್ಮವನ್ನು ಕೇಳಿ ಮುಗ್ಧ ಜನರನ್ನು ಕೊಂದಿದ್ದರು. ದೇಶವಲ್ಲದೆ ಅಂತಾರಾಷ್ಠ್ರೀಯ ಮಟ್ಟದಲ್ಲೂ ಈ ಹೇಯ ಕೃತ್ಯವನ್ನು ಖಂಡಿಸಲಾಗಿತ್ತು. ನಮ್ಮ ಸೈನಿಕರು ಆಪರೇಷನ್‌ ಸಿಂದೂರು ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಸಿಂದೂರದ ಮಹತ್ವವನ್ನು ಪಾಕಿಸ್ತಾನಕ್ಕೆ ತಿಳಿಸುವ ಮೂಲಕ ತಕ್ಕ ಉತ್ತರ ನೀಡಿದೆ.

ಕಾರಟಗಿ:

ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರು ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾರಟಗಿ ಬಿಜೆಪಿ ಮಂಡಲ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪಟ್ಟಣದ ಹೈಟೆಕ್ ಬಸ್ ನಿಲ್ದಾಣದ ಬಳಿ ಸೇರಿದ್ದ ಬಿಜೆಪಿ ಮಂಡಳದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಉಗ್ರರು ಹಾಗೂ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಉಗ್ರಗಾಮಿಗಳು ಪ್ರವಾಸಿಗರ ಧರ್ಮವನ್ನು ಕೇಳಿ ಮುಗ್ಧ ಜನರನ್ನು ಕೊಂದಿದ್ದರು. ದೇಶವಲ್ಲದೆ ಅಂತಾರಾಷ್ಠ್ರೀಯ ಮಟ್ಟದಲ್ಲೂ ಈ ಹೇಯ ಕೃತ್ಯವನ್ನು ಖಂಡಿಸಲಾಗಿತ್ತು. ನಮ್ಮ ಸೈನಿಕರು ಆಪರೇಷನ್‌ ಸಿಂದೂರು ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಸಿಂದೂರದ ಮಹತ್ವವನ್ನು ಪಾಕಿಸ್ತಾನಕ್ಕೆ ತಿಳಿಸುವ ಮೂಲಕ ತಕ್ಕ ಉತ್ತರ ನೀಡಿದೆ ಎಂದರು.

ಉಗ್ರವಾದವನ್ನು ಬೇರು ಸಮೇತ ಕಿತ್ತೆಸೆಯಲು ಭಾರತ ಸನ್ನದ್ಧವಾಗಿದೆ ಎಂದು ಸಂದೇಶ ಸಾರಿದ ಸೈನಿಕರನ್ನು ನಾವು ಬೆಂಬಲಿಸಬೇಕು. ಭಾರತ ಕೆಣಕಿದರೆ ಯಾರನ್ನು ಬಿಡುವ ಮಾತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೈನಿಕರ ಮೂಲಕ ಜಗತ್ತಿಗೆ ತೋರಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಯುವಮೊರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗುರ ಮಾತನಾಡಿ, ಪಹಲ್ಗಾಮ್‌ನಲ್ಲಿ ಅಮಾಯಕರ ನರಮೇಧ ನಡೆಸಿದ ಉಗ್ರರ ಸಂಹರಿಸಲು ಭಾರತ ನಡೆಸಿರುವ ದಾಳಿ ಅತ್ಯಂತ ಸಮಯೋಚಿತವಾಗಿದೆ. ಮುಂಬರುವ ಯಾವುದೇ ಪರಿಣಾಮಗಳನ್ನು ಎದುರಿಸಲು ದೇಶ ಸಿದ್ಧವಾಗಿದ್ದು ಇನ್ನಾದರೂ ಪಾಕಿಸ್ತಾನ ಉಗ್ರರ ಪೋಷಣೆ ನಿಲ್ಲಿಸಬೇಕು ಎಂದರು.

ಈ ವೇಳೆ ಪುರಸಭೆ ಸದಸ್ಯ ಆನಂದ, ಪ್ರಮುಖರಾದ ಶರಣಪ್ಪ ದೇವರಮನಿ, ಧನಂಜಯ, ವಕೀಲ ರಾಘವೇಂದ್ರ ಕುಲಕರ್ಣಿ, ಸೋಮನಾಥ ಉಡಮಕಲ್, ಆನಂದ ಕುಲಕರ್ಣಿ, ಶಶಿ ಮ್ಯಾದಾರ, ರಾಯಪ್ಪ ವಾಲ್ಮೀಕಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.