ಸಾರಾಂಶ
ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ತಮ್ಮ ಮಗುವಿಗೆ ‘ಸಿಂದೂರಿ’ ಎಂದು ಹೆಸರಿಟ್ಟು ನಾಮಕರಣ ಮಾಡಿದ ದಂಪತಿ ‘ದೇಶ ಪ್ರೇಮ’ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದಲ್ಲಿ ತಮ್ಮ ಮಗುವಿಗೆ ‘ಸಿಂದೂರಿ’ ಎಂದು ಹೆಸರಿಟ್ಟು ನಾಮಕರಣ ಮಾಡಿದ ದಂಪತಿ ‘ದೇಶ ಪ್ರೇಮ’ ಮೆರೆದಿದ್ದಾರೆ.ಗ್ರಾಮದ ಸೋಮಶೇಖರ್ ಹಾಗೂ ಹರ್ಷಿತಾ ದಂಪತಿ ತಮ್ಮ ಮಗುವಿಗೆ ಸಿಂದೂರಿ ಎಂದು ನಾಮಕರಣ ಮಾಡಿ ದೇಶ ಪ್ರೇಮ ಮೆರದಿರುವ ಸುದ್ದಿ ತಿಳಿದು ಮಂಡ್ಯ ರಕ್ಷಣಾ ವೇದಿಕೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ದೇಶ ಪ್ರೇಮಿ ದಂಪತಿಗೆ ಸನ್ಮಾನಿಸಿದರು. ಮಗುವಿಗೆ ಭವಿಷ್ಯದಲ್ಲಿ ವಿದ್ಯಾಭ್ಯಾಸದ ನೆರವಿಗಾಗಿ 10 ಸಾವಿರ ರು. ಅನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಆರ್ಥಿಕ ನೆರವು ನೀಡಿ ಮನೆಯವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಸಂಘಟನೆ ಅಧ್ಯಕ್ಷ ಶಂಕರ್ ಬಾಬು ಮಾತನಾಡಿ, ಹರ್ಷಿತಾ, ಸೋಮಶೇಖರ್ ಅವರು ತಮ್ಮ ಪುತ್ರಿಗೆ ಪ್ರಧಾನಿ ಮೋದಿ ಅವರು ಪಾಕಿಸ್ತಾನದ ಉಗ್ರರ ವಿರುದ್ಧ ಯುದ್ಧ ಮಾಡಿ ಆಪರೇಷನ್ ಸಿಂದೂರ ಎಂಬ ಹೆಸರಿಟ್ಟ ಹಿನ್ನೆಲೆಯಲ್ಲಿ ಮಗುವಿಗೆ ಸಿಂದೂರಿ ಎಂಬ ನಾಮಕರಣ ಮಾಡಿರುವುದು. ಈ ದಂಪತಿಯ ದೇಶ ಪ್ರೇಮ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ. ಈ ಮಗುವಿನ ಭವಿಷ್ಯ ಉಜ್ವಲವಾಗಿರಲಿ, ಕಿತ್ತೂರು ರಾಣಿ ಚೆನ್ಮಮ್ಮ, ಒನಕೆ ಓಬ್ಬವ್ವ ರೀತಿ ದೇಶ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.ಈ ವೇಳೆ ಮಂಡ್ಯ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಗದೀಶ್, ಛಾಯಾ, ರವಿ, ಸುರೇಂದ್ರ ಸೇರಿದಂತೆ ಪೋಷಕರು ಹಾಗೂ ಸಂಬಂಧಿಕರು ಭಾಗವಹಿಸಿದ್ದರು.