ಸಾರಾಂಶ
ಪ್ರಪಂಚದ ಭೂ ಪಟದಲ್ಲಿ ಪಾಕಿಸ್ತಾನ ಇಲ್ಲದಂತೆ ಮಾಡುವ ಶಕ್ತಿ ನಮ್ಮ ಭಾರತದ ಸೈನಿಕರಿಗೆ ಇದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರಪಂಚದ ಭೂ ಪಟದಲ್ಲಿ ಪಾಕಿಸ್ತಾನ ಇಲ್ಲದಂತೆ ಮಾಡುವ ಶಕ್ತಿ ನಮ್ಮ ಭಾರತದ ಸೈನಿಕರಿಗೆ ಇದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾಜಿ ನಿವೃತ್ತ ಸೈನಿಕರ ಸಂಘ ರೈತ ಸಂಘ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ ಪಹಲ್ಗಾಮ್ ನಲ್ಲಿ ನಡೆದ ಅಮಾಯಕ ಭಾರತೀಯ ನಾಗರಿಕರ ಮೇಲೆ ನಡೆದ ಉಗ್ರರ ಕೃತ್ಯಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ನಡೆಸುತ್ತಿರುವ ಆಪರೇಷನ್ ಸಿಂಧೂರ್ ಕಾರ್ಯಚಾರಣೆಯನ್ನು ಸಂಭ್ರಮಿಸಲಾಗುತ್ತಿದೆ ಎಂದು ತಿಳಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ಆಪರೇಷನ್ ಸಿಂಧೂರ್ ಗೆ ನಮ್ಮ ರೈತ ಸಂಘದ ಪೂರ್ಣ ಬೆಂಬಲ ನೀಡುತ್ತೇವೆ ನಮ್ಮ ದೇಶದ ಯೋಧರು ನಾವು ಎಲ್ಲಾ ಸೇರಿ ದೇಶ ಕಾಯೋಣ ಎಂದರು.ರೇಣುಕಾಪ್ರಸಾದ್ ಜಿ ಆರ್ ಶಿವಕುಮಾರ್ ರೈತ ಸಂಘದ ಲೋಕೇಶ್ ಮಾಜಿ ಸೈನಿಕರ ಸಂಘದ ಎಲ್ಲಾ ಸದಸ್ಯರು ಹಾಗೂ ಮಕ್ಕಳು ಹಾಜರಿದ್ದರು.