ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನೇತ್ರಶಸ್ತ್ರ ಚಿಕಿತ್ಸಾ ವಿಭಾಗದಲ್ಲಿರುವ ಆಧುನಿಕ ರೋಗ ನಿದಾನ ಪದ್ಧತಿ, ಸೂಕ್ಷ್ಮ ತಪಾಸಣೆ ಹಾಗೂ ಚಿಕಿತ್ಸೆಯಿಂದ ಮ್ಯಾಕ್ಯುಲರ್‌ಎಡಿಮಾ ತೊಂದರೆಯನ್ನು ತಡೆಗಟ್ಟಬಹುದು ಎಂದು ಕರ್ನಾಟಕ ಆಫ್ತಾಲ್ಮಿಕ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಕರ್ನಾಟಕ ರೆಟಿನಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಹೇಮಂತ್ ಮೂರ್ತಿ ಹೇಳಿದರು.ಜೆಎಸ್‌ಎಸ್ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ ಮತ್ತು ಮೈಸೂರು ನೇತ್ರಚಿಕಿತ್ಸೆ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮ್ಯಾಕ್ಯುಲರ್ ಎಡಿಮಾ ಮುಂದುರೆದ ವೈದ್ಯಕೀಯ ಶಿಕ್ಷಣ (ಸಿಎಂಇ) ಕುರಿತು ಅವರು ಮಾತನಾಡಿದರು.ನೇತ್ರಶಾಸ್ತ್ರ ಚಿಕಿತ್ಸೆಯಲ್ಲಿ ಉಂಟಾಗಿರುವ ಕ್ಷಿಪ್ರ ಬೆಳವಣಿಗೆಗಳು ಡಯಾಬಿಟಿಕ್ ರೆಡಿನೋಪಥಿಯ ಲಕ್ಷಣಗಳು ಅದರ ನಿರ್ವಹಣೆ ಹಾಗೂ ಚಿಕಿತ್ಸೆಯ ಬಗ್ಗೆ ಸಮಗ್ರವಾಗಿ ತಿಳಿಸಿದರು. ಅವರ ವೃತ್ತಿ ಜೀವನದ ಅನುಭವನದಲ್ಲಿ ಮ್ಯಾಕ್ಯುಲರ್ ಎಡಿಮಾ ತೊಂದರೆಗಳಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಭಾಗವಹಿಸಿದ್ದ ಎಲ್ಲ ನೇತ್ರ ವೈದ್ಯರಿಗೆ ಅವರು ತಿಳಿಸಿದರು.ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣಪ್ಪ ಮಾತನಾಡಿ, ಕಣ್ಣಿನ ದೃಷ್ಟಿಪಟಲದ ಮುಖ್ಯಅಂಗವಾದ ಮ್ಯಾಕ್ಯುಲಾದ ತೊಂದರೆಗಳನ್ನು ನಿವಾರಿಸುವುದು ಅತಿ ಮುಖ್ಯ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಕಣ್ಣಿಗೆ ನೀಡುವ ಇಂಜೆಕ್ಷನ್‌ಗಳು ಈ ತೊಂದರೆಗಳನ್ನು ಬಹುಮಟ್ಟಿಗೆ ನಿವಾರಿಸಿ ಅಂಧತ್ವವನ್ನು ಕಡಿಮೆ ಮಾಡುವಲ್ಲಿ ಜೆಎಸ್‌ಎಸ್‌ಆಸ್ಪತ್ರೆ ನೇತ್ರಶಸ್ತ್ರ ಚಿಕಿತ್ಸಾ ವಿಭಾಗವು ಬಹುಮುಖ್ಯ ಪಾತ್ರವಹಿಸುತ್ತಿದೆ ಎಂದು ಹೇಳಿದರು.ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ. ಮಧು ಮಾತನಾಡಿ, ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ ಎಂಬುದು ಮಧುಮೇಹ ಹೊಂದಿರುವ ವ್ಯಕ್ತಿಗಳ ಕಣ್ಣುಗಳ ಮೇಲೆ ಪರಿಣಾಮ ಬೀರುವ ಒಂದು ಸ್ಥಿತಿಯಾಗಿದೆ. ಜೆಎಸ್‌ಎಸ್‌ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನುರಿತ ವೈದ್ಯರನ್ನೊಳಗೊಂಡ ನೇತ್ರಚಿಕಿತ್ಸಾ ವಿಭಾಗವು ಉತ್ತಮ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿಸಿದರು.ಆಸ್ಪತ್ರೆಯ ಉಪನಿರ್ದೇಶಕ ಡಾ.ಜಿ.ವಿ. ಮಂಜುನಾಥ್, ಸ್ಥಾನೀಯ ವೈದ್ಯಾಧಿಕಾರಿ ಡಾ. ಶಾಂತಮಲ್ಲಪ್ಪ, ಜೆಎಸ್‌ಎಸ್‌ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಎಂ.ಎನ್. ಸುಮ, ಡಾ.ಎಂ. ಮಾತಂಪ್ಪ, ಡಾ. ಪ್ರವೀಣ್ ಕುಲಕರ್ಣಿ, ನೇತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಎಸ್.ಕೆ. ಪ್ರಭಾಕರ್, ಹಿರಿಯ ವೈದ್ಯರಾದ ಡಾ. ಸಿ.ಎನ್. ಮಧುಸೂದನ್, ಡಾ.ಸಿ.ಎನ್. ವೀಣಾ, ಡಾ. ಎಚ್.ವಿ. ಸೌಮ್ಯ, ಡಾ. ವಾಸೀಮ್ ಅಂಜುಮ್ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.