ಜಿ.ಮಾದೇಗೌಡರ ಶ್ರಮದಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ: ಡಾ.ಎಂ.ಭಾನುಕುಮಾರ್

| Published : Feb 19 2024, 01:31 AM IST

ಜಿ.ಮಾದೇಗೌಡರ ಶ್ರಮದಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ: ಡಾ.ಎಂ.ಭಾನುಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕುಗ್ರಾಮವಾಗಿದ್ದ ಕೆ.ಎಂ.ದೊಡ್ಡಿಯನ್ನು ಭಾರತೀನಗರವನ್ನಾಗಿ ಪರಿವರ್ತಿಸಿ ಭಾರತೀ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ 10 ಸಾವಿರಕ್ಕೂ ಹೆಚ್ಚು ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಉಣಬಡಿಸುತ್ತಿರುವುದರಿಂದ ಎಷ್ಟೋ ಗ್ರಾಮೀಣ ಪ್ರತಿಭೆಗಳು ಉನ್ನತ ಉದ್ಯೋಗಗಳನ್ನು ಅಲಂಕರಿಸಲು ಅವಕಾಶ ಸಿಕ್ಕಿದೆ. ಇದರಲ್ಲಿ ನಾನು ಒಬ್ಬನಾಗಿದ್ದೇನೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಹಿರಿಯ ಮುತ್ಸದಿ ಡಾ.ಜಿ.ಮಾದೇಗೌಡರ ಚಿಂತನೆ ಫಲವಾಗಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಸಂಸ್ಥೆ ತೆರೆದು ಶಿಕ್ಷಣ ವಂಚಿತ ಪ್ರತಿಭೆಗಳಿಗೆ ನೆರವಾಗಿದೆ ಎಂದು ಎಂದು ಮೈಸೂರು ಜೆಎಸ್.ಎಸ್.ಆಸ್ಪತ್ರೆ ವೈದ್ಯ ಡಾ.ಎಂ.ಭಾನುಕುಮಾರ್ ತಿಳಿಸಿದರು.

ಭಾರತೀ ಕುವೆಂಪು ಸಭಾಂಗಣದಲ್ಲಿ ಭಾರತೀ ಪ್ರೌಢಶಾಲೆಯಿಂದ ಆಯೋಜಿಸಿದ್ದ ನಿವೃತ್ತ ಮುಖ್ಯಶಿಕ್ಷಕ ಎಚ್.ಕೆಂಡೇಗೌಡರ ಸ್ಮರಣಾರ್ಥ ಜಿಲ್ಲಾ ಮಟ್ಟದ 46 ನೇ ವರ್ಷದ ಅಂತರ ಪ್ರೌಢಶಾಲಾ ಕನ್ನಡ ಚರ್ಚಾಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕುಗ್ರಾಮವಾಗಿದ್ದ ಕೆ.ಎಂ.ದೊಡ್ಡಿಯನ್ನು ಭಾರತೀನಗರವನ್ನಾಗಿ ಪರಿವರ್ತಿಸಿ ಭಾರತೀ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ 10 ಸಾವಿರಕ್ಕೂ ಹೆಚ್ಚು ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಉಣಬಡಿಸುತ್ತಿರುವುದರಿಂದ ಎಷ್ಟೋ ಗ್ರಾಮೀಣ ಪ್ರತಿಭೆಗಳು ಉನ್ನತ ಉದ್ಯೋಗಗಳನ್ನು ಅಲಂಕರಿಸಲು ಅವಕಾಶ ಸಿಕ್ಕಿದೆ. ಇದರಲ್ಲಿ ನಾನು ಒಬ್ಬನಾಗಿದ್ದೇನೆ ಎಂದರು.

ಮೈಸೂರು ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಎಚ್.ಎಂ.ವಸಂತಮ್ಮ ಮಾತನಾಡಿ, ಭಾರತೀ ವಿದ್ಯಾ ಸಂಸ್ಥೆಯಲ್ಲಿ ಗುಣ ಮಟ್ಟದ ಜೊತೆಗೆ ರಿಯಾಯ್ತಿ ದರದಲ್ಲಿ ಶಿಕ್ಷಣ ದೊರೆಯುತ್ತಿರುವುದರಿಂದ ಗ್ರಾಮೀಣ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಉದ್ಯೋಗಗಳನ್ನು ಅಲಂಕರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಪಾಂಡವಪುರ ದೀಪಕ್ ತಂಡದವರಿಂದ ಸುಗಮ ಸಂಗೀತ ನಡೆಯಿತು. ವೇದಿಕೆಯಲ್ಲಿ ಬಿಇಟಿ ಸಿಇಒ ಆಶಯ್‌ಮಧು , ಮುಖ್ಯಶಿಕ್ಷಕ ಪಿ.ರಾಜೇಂದ್ರ ಅರಸು, ಎಚ್.ಪಿ.ಪ್ರತಿಮಾ, ನಿವೃತ್ತ ಮುಖ್ಯಶಿಕ್ಷಕ ಎಂ.ಮಾಯಪ್ಪ, ಎಂ.ಎಸ್.ಶಿವಣ್ಣ, ಮಂಡ್ಯ ಸಾಹಿತಿ ರೋಷನ್ ಜೋಪ್ರ, ಪ್ರಾಧ್ಯಾಪಕಿ ಬಿ.ಜಿ.ಶಕುಂತಲ, ಚಾಮುಂಡೇಶ್ವರಿ ಕಾರ್ಖಾನೆ ನಿವೃತ್ತ ನೌಕರ ಪ್ರಕಾಶ್, ಮುಖ್ಯಶಿಕ್ಷಕ ಕೆ.ಎಸ್.ಪ್ರಕಶ್, ಬಿಇಟಿ ಟ್ರಸ್ಟಿ ಮುದ್ದೇಗೌಡ ಸೇರಿದಂತೆ ಹಲವರಿದ್ದರು.