ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ. ತಮ್ಮ ಹಕ್ಕುಗಳ ಸದುಪಯೋಗಪಡಿಸಿ ಸ್ವಾವಲಂಬಿಯಾಗಿ ಬದುಕಬೇಕೆಂದು ಗಾಯತ್ರಿ ಜಿ.ಎಂ.ಸಿದ್ದೇಶ್ವರ್

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ. ತಮ್ಮ ಹಕ್ಕುಗಳ ಸದುಪಯೋಗಪಡಿಸಿ ಸ್ವಾವಲಂಬಿಯಾಗಿ ಬದುಕಬೇಕೆಂದು ಗಾಯತ್ರಿ ಜಿ.ಎಂ.ಸಿದ್ದೇಶ್ವರ್ ಕರೆ ನೀಡಿದರು.

ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಜಿ.ಎಂ.ಹಾಲಮ್ಮ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಸಮಾವೇಶ ಉದ್ಘಾಟಿಸಿ, ಸಾಧಕರ ಮಹಿಳೆಯರಿಗೆ ಸನ್ಮಾನಿಸಿ ಮಾತನಾಡಿದರು.

ಡಾ.ಶುಕ್ಲಾಶೆಟ್ಟಿ ಮಾತನಾಡಿ, ಮಹಿಳೆಯರ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದ ನಡುವೆ ಆರೋಗ್ಯವನ್ನು ಹೇಗೆ ನಿರ್ವಹಿಸುವ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಫ್ ಕಮರ್ಷಿಯಲ್ ಟ್ಯಾಕ್ಸ್ ಆಫ್ ಗವರ್ನಮೆಂಟ್ ಆಫ್ ಕರ್ನಾಟಕದ ಡಾ.ಸ್ಪೂರ್ತಿ, 

ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶುಕ್ಲಾಶೆಟ್ಟಿ, ನಮನ ಅಕಾಡೆಮಿಯ ವಿದುಷಿ ಡಿ.ಕೆ.ಮಾಧವಿ, ಜುಂಬಾ ಅಂಡ್ ಫಿಟ್ನೆಸ್ ಇನ್ಸಟ್ರಕ್ಟರ್ ಫ್ರೋನಿಕಾ ಡಿಸೋಜರನ್ನು ಸನ್ಮಾನಿಸಲಾಯಿತು. ಜಿಎಂ ವಿವಿಯ ಡಾ.ಶ್ವೇತಾ ಮರಿಗೌಡರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ.ಅರುಣಾ ಚರಂತಿಮಠ, ಕಾಲೇಜಿನ ಬೋಧಕ ಮತ್ತುಬೋಧಕೇತರ ಮಹಿಳಾ ಸಿಬ್ಬಂದಿ, ವಿದ್ಯಾರ್ಥಿನಿಯರಿದ್ದರು.