ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ ₹ ೬೦ ಸಾವಿರ ಕೋಟಿ ಗಳಷ್ಟು ಅನುದಾನ ಮೀಸಲಿರಿಸಲಾಗಿದ್ದು, ಐದು ವರ್ಷಗಳ ಅವಧಿಯಲ್ಲಿ ₹ ೩ ಲಕ್ಷ ಕೋಟಿ ಗಳಷ್ಟು ಅನುದಾನ ಜನತೆಗೆ ನೇರವಾಗಿ ದೊರಕಲಿದೆ. ಗ್ಯಾರಂಟಿ ಯೋಜನೆಯನ್ನು ಸಹಿಸದೇ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ₹ ೩ ಲಕ್ಷ ಕೋಟಿ ಗಳಷ್ಟು ಅನುದಾನವನ್ನು ನೇರವಾಗಿ ಜನರಿಗೆ ತಲಪಿಸುವ ಮೂಲಕ ನುಡಿದಂತೆ ಮುನ್ನಡೆಯುತ್ತಿದೆ ಎಂದರು.ಸರ್ಕಾರದ ಈ ಗ್ಯಾರಂಟಿ ಯೋಜನೆಗಳ ಮಹತ್ವವನ್ನು ವಿವರಿಸಲು ಯುವ ಪಡೆ ರಚಿಸಿ, ಆಸಕ್ತಿಯುಳ್ಳ ಯುವಕರನ್ನು ಸಂಘಟಿಸಿ ಅವರಿಗೆ ಸೂಕ್ತ ತರಬೇತಿ ನೀಡಿ, ಅವರು ಜನರಿಗೆ ಈ ಯೋಜನೆಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ, ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಕಾರ್ಯಕರ್ತ ಬಂಧುಗಳ ಪಾತ್ರ ಪ್ರಮುಖವಾಗಿದೆ. ಕಾರ್ಯಕರ್ತರು ಸಚಿವರನ್ನು ಭೇಟಿ ಮಾಡಲು ವೇದಿಕೆಯಾಗಲು ಪಕ್ಷದ ಕಾರ್ಯಾಲಯದಲ್ಲಿ ಭೇಟಿ ಹಾಗೂ ಸಭೆಯನ್ನು ಆಯೋಜಿಸುತ್ತಿದೆ. ಇದರಿಂದ ಜಿಲ್ಲೆಗೆ ಭೇಟಿ ನೀಡುವ ಎಲ್ಲ ಸಚಿವರು ಜಿಲ್ಲೆಯ ಕಾರ್ಯಕರ್ತರೊಂದಿಗೆ ಬೆರೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಗ್ಯಾರಂಟಿಯ ಜೊತೆಗೆ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ. ಮತಕ್ಷೇತ್ರಕ್ಕೆ ಅನುದಾನ ಹರಿದು ಬಂದಿದ್ದು, ಉಳಿದ ಕಾಮಗಾರಿಗಳಿಗೂ ಶೀಘ್ರವೇ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು. ಕೆಪಿಸಿಸಿ ಸದಸ್ಯ ಅಬ್ದುಲ್‌ಹಮೀದ ಮುಶ್ರೀಫ, ಡಾ.ಗಂಗಾಧರ ಸಂಬಣ್ಣಿ ವಿಜಯಕುಮಾರ ಘಾಟಗೆ, ಮುಖಂಡರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಸುಭಾಸ ಕಾಲೆಬಾಗ, ಎಂ.ಎಂ. ಮುಲ್ಲಾ, ದೇಸು ಚವ್ಹಾಣ,ಜಮೀರ ಬಕ್ಷಿ, ಶಾಹಜಾನ ಮುಲ್ಲಾ, ಸುರೇಶ ಹಾರವಾಳ, ಕಲ್ಲನಗೌಡ ಬಿರಾದಾರ, ಆರತಿ ಶಾಹಪೂರ, ಶಕೀಲ ಬಾಗಮಾರೆ, ಶ್ರೀದೇವಿ ಉತ್ಲಾಸರ, ಸಲೀಮ ಪೀರಜಾದೆ, ಆನಂದ ಜಾಧವ, ರಮೇಶ ಗುಬ್ಬೇವಾಡ, ಸರಫರಾಜ್ ಮಿರ್ದೆ, ಶ್ರೀಕೃಷ್ಣಾ ಕಾಮಟೆ, ಬೀರಪ್ಪ ಜುಮನಾಳ, ಸುನಂದಾ ಸೊನ್ನಹಳ್ಳಿ, ರೇಖಾ ಮುತ್ತಪ್ಪನವರ, ಸಾಹೇಬಿ ತಾಂಬೋಳಿ, ಸಂಗೀತಾ ನಾಡಗೌಡ, ಸಬಿನಾ ಮಂಟೂರ, ಸಂತೋಷ ಗಣಾಚಾರಿ, ಎಂ.ಎಲ್.ಮಕಾನದಾರ, ಹರೀಶ ಕೌಲಗಿ, ಫಯಾಜ ಕಲಾದಗಿ, ಲಾಲಸಾಬ ಕೋರಬು, ಲಕ್ಷ್ಮಣ ಇಲಕಲ್, ಅರ್ಜುನ ನಾಯ್ಕೋಡಿ, ಪೀರಾ ಜಮಖಂಡಿ, ಭಾರತಿ ನಾವಿ, ಲಕ್ಷ್ಮೀ ಕ್ಷೀರಸಾಗರ, ಭಾರತಿ ಹೊಸಮನಿ, ಶಮೀಮ ಅಕ್ಕಲಕೋಟ, ಇಲಿಯಾಸ್ ಮುಲ್ಲಾ, ದಾದಾಪೀರ ಬಾಗಮಾರೆ, ಸಂತೋಷ ಬಾಲಗಾವಿ, ಅಬುಬಕರ ಕಂಬಾಗಿ, ಹಮೀದ ಮನಗೂಳಿ, ಲಕ್ಷ್ಮಣ ಹಂಚಿನಾಳ, ಶ್ರೀಕಾಂತ ಮಾನೆ, ಸಾಜಿದ ರಿಸಾಲದಾರ, ಐಜಾಜ ಮುಕ್ಬಿಲ, ತಾಜುದ್ದೀನ ಖಲೀಫಾ, ಕೃಷ್ಣಾ ಲಮಾಣಿ, ಆಸ್ಮಾ ಕಾಲೇಬಾಗ, ಲಕ್ಷ್ಮೀಬಾಯಿ ಬಳ್ಳಾರಿ, ಪೀರಪ್ಪ ನಡವಿನಮನಿ, ಕಾಶಿಬಾಯಿ ಹಡಪದ, ಎನ್.ಎಸ್.ಪಟೇಲ, ಬಾಬುಸಾಬ ಯಾಳವಾರ, ಪ್ರದೀಪ ಸೂರ್ಯವಂಶಿ, ಅಶೋಕ ಕಾಂಬಳೆ, ಸಂಜು ಗುನ್ನಾಪೂರ, ಗಂಗವ್ವ ಕಣಮುಚನಾಳ, ಅಶೋಕ ನಾಯ್ಕೋಡಿ ಮುಂತಾದವರು ಭಾಗವಹಿಸಿದ್ದರು.