ಸಾರಾಂಶ
Opposition to Andhra, Tamil Nadu Chief Minister's call
ಕನ್ನಡಪ್ರಭ ವಾರ್ತೆ ತರೀಕೆರೆ
ದೇಶದಲ್ಲಿ ಜನಸಂಖ್ಯೆ ಸ್ಫೋಟವಾಗಿ ಈಗಾಗಲೇ 50 ಕೋಟಿಯಷ್ಟು ಗಡಿ ದಾಟುವ ಹಂತದಲ್ಲಿದೆ, ಆದರೆ, ರಾಜಕೀಯವಾಗಿ ಜನಸಂಖ್ಯೆ ಹೆಚ್ಚಳಕ್ಕೆ ತಮ್ಮ ರಾಜ್ಯದ ಜನತೆಗೆ ಆಂದ್ರಪ್ರದೇಶ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಗಳು ಕರೆ ನೀಡಿರುವುದು ದೇಶದ ಹಿತದೃಷ್ಟಿಯಿಂದ ಸಮಂಜಸವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಎಲ್ ಟಿ ಹೇಮಣ್ಣ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಈಗಾಗಲೇ ವಿಶ್ವದ ಬಡತನ ರೇಖೆಗಿಂತ ಕೆಳಗಿರುವ ಸಮೀಕ್ಷೆಯಲ್ಲಿ ಭಾರತ ದೇಶದಲ್ಲಿ ಬಡತನ ಶೇಕಡಾ 24 ರಷ್ಟಿದೆ ಇದರ ಅನುಗುಣವಾಗಿ ಮಧ್ಯಮ ವರ್ಗದವರು ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರಬಹುದು ಎಂದು ಅರ್ಥೈಸಬಹುದು, ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ಕ್ರಮಾಂಕದಲ್ಲಿ ಮುಂಚೂಣಿಯಲ್ಲಿದೆ, ದೇಶದ ಪ್ರತಿಯೊಬ್ಬ ನಾಗರಿಕನಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ, ಜನಸಂಖ್ಯೆ ಅನುಪಾತದಲ್ಲಿ ಉದ್ಯೋಗದ ಸಮಸ್ಯೆ ಬಗೆಹರಿಸಲು ವಿಪರ್ಯಾಸ ಸಂಗತಿಯಾಗಿದೆ.
ಕೆಲವು ಕಡೆ ಆಸ್ಪತ್ರೆ ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಅನಿವಾರ್ಯವಾಗಿ ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದುಂಬಾಲು ಬೀಳುತ್ತಾರೆ, ಶೈಕ್ಷಣಿಕ ವಲಯ ಹೆಚ್ಚಿನ ಆದ್ಯತೆ ನೀಡಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ಜೀವನ ನಿರ್ವಹಣೆಗೆ ಬಡತನ ಕುಟುಂಬದ ಬಾಲ್ಯಾವಸ್ಥೆಯ ಮಕ್ಕಳು ಉದ್ಯೋಗ ಅರಸಿಕೊಂಡು ಗುಳೆ ಹೋಗುತ್ತಿರುವ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.ಜನಸಂಖ್ಯೆ ಹೆಚ್ಚಳಕ್ಕೆ ಕರೆ ನೀಡಿರುವ ರಾಜ್ಯ ಸರ್ಕಾರಗಳು ಹಾಲಿ ಇರುವ ಜನತೆಯ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಟ್ಟು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಹೆಚ್ಚಿನ ಕಾರ್ಯಕ್ರಮ ಜಾರಿ ಮಾಡಲು ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.
-----------------ಫೋಟೋ:
23ಕೆಟಿಆರ್.ಕೆ.2ಃ ಎಲ್.ಟಿ.ಹೇಮಣ್ಣ