ಬಗರ್‌ಹುಕುಂ ಮಂಜೂರಾತಿ ಮರುಪರಿಶೀಲನೆಗೆ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಸುಮಾರು 10 ಸಾವಿರ ಜನರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಬಗರ್‌ಹುಕುಂ ರೈತರ ಪರವಾಗಿ ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ನ.16ರಿಂದ ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಘೋಷಿಸಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಬಗರ್‌ಹುಕುಂ ಮಂಜೂರಾತಿ ಮರುಪರಿಶೀಲನೆಗೆ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಸುಮಾರು 10 ಸಾವಿರ ಜನರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಬಗರ್‌ಹುಕುಂ ರೈತರ ಪರವಾಗಿ ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ನ.16ರಿಂದ ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಘೋಷಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ 178 ಪ್ರಕರಣಗಳ ತನಿಖೆಗೆ ಈಗಾಗಲೇ ಆದೇಶಿಸಲಾಗಿದೆ. ಈ ಬಗ್ಗೆ ಪುನಃ ಯಾರಾದರೂ ಪ್ರಶ್ನಿಸಿದರೆ ಎಲ್ಲರ ಭೂಮಿಯೂ ಕೈತಪ್ಪುವ ಆತಂಕವಿದೆ. 1997-98ರಿಂದಲೇ ಮಂಜೂರಾಗಿರುವ ಬಗರ್‌ಹುಕುಂ ಭೂಮಿಯ ಬಗ್ಗೆ ಮರು ತನಿಖೆ ನಡೆಯುವ ಸಾಧ್ಯತೆ ಇದೆ. 1931ರಲ್ಲಿ ಮಂಜೂರಾಗಿರುವ ಪ್ರಕರಣ ಕೂಡಾ ಹೈಕೋರ್ಟಿನಲ್ಲಿದ್ದು, ಬಗರ್‌ಹುಕುಂ ಮಂಜೂರಾತಿಗೆ ಸಂಬಂಧಿಸಿ ಶಾಸಕ ಆರಗ ಜ್ಞಾನೇಂದ್ರ ಸದನದಲ್ಲಿ ಯಾಕೆ ಪ್ರಶ್ನಿಸಬೇಕಿತ್ತು ಎಂಬುದು ನನ್ನ ಪ್ರಶ್ನೆಯಾಗಿದೆ ಎಂದರು.
ಕಡೇಮನೆ ಗ್ರಾಮಕ್ಕೆ ಮಂಜೂರಾದ ಅನುದಾನವನ್ನು ದುರ್ಬಳಕೆ ಮಾಡಿಕೊಂಡು, ಭಿಂತಳ ಗ್ರಾಮದಲ್ಲಿರುವ ಶಾಸಕರ ಜಮೀನಿನ ಗೇಟಿನವರೆಗೆ ರಸ್ತೆ ಮಾಡಲಾಗಿದೆ. ಆ ಜಮೀನಿನಲ್ಲಿ ಇದ್ದ ಬೆಲೆ ಬಾಳುವ ಮರಗಳನ್ನು ಕಡಿತಲೆಯಾಗಿದೆ. ಈ ಬಗ್ಗೆ ಶಾಸಕರು ಜನರಿಗೆ ಸ್ಫಷ್ಟನೆ ನೀಡಬೇಕು. ಭಿಂತಳ ಗ್ರಾಮದ ರಸ್ತೆ ಸೇರಿದಂತೆ ನಾನು ಕೇಳಿರುವ ಯಾವುದೇ ಗಂಭೀರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡದ ಶಾಸಕರು ಸುದ್ದಿಗೋಷ್ಠಿಯಲ್ಲಿ ಸುಳ್ಳಿನ ಸರಮಾಲೆಯನ್ನೇ ಬಿಚ್ಚಿಟ್ಟಿದ್ದಾರೆ. ಭಿಂತಳ ಗ್ರಾಮದಿಂದ ಸೆ.7 ರಂದು ಪಾದಯಾತ್ರೆ ಮಾಡುವುದಾಗಿ ತಿಳಿಸಿದರು.ತೀರ್ಥಹಳ್ಳಿ ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವ ಘಟಕದ ಪೂರ್ಣೆಶ್, ಆದರ್ಶ ಹುಂಚದಕಟ್ಟೆ, ಶ್ರೇಯಸ್ ರಾವ್, ಗೀತಾ ರಮೇಶ್, ವಿಲಿಯಂ ಮಾರ್ಟಿಸ್, ಜಯಕರ ಶೆಟ್ಟಿ ಇತರರು ಹಾಜರಿದ್ದರು.
ಅಕ್ರಮ ಸಾಬೀತುಪಡಿಸಿ: ಕಿಮ್ಮನೆ ಸವಾಲುಪಕ್ಷದ ಪ್ರಾಮಾಣಿಕ ಕಾರ್ಯಕರ್ತರ ಬೆಂಬಲಕ್ಕೆ ನಾನಿದ್ದೇನೆ. ಆರ್.ಎಂ. ಮಂಜುನಾಥಗೌಡರ ವಿಚಾರ ಎತ್ತಿ ನಮ್ಮ ನಡುವೆ ಹುಳಿ ಹಿಂಡುವ ಪ್ರಯತ್ನ ಬೇಡ. ಪಕ್ಷದ ಒಳಗೆ ತೀರ್ಮಾನ ಮಾಡಿಕೊಳ್ಳುತ್ತೇವೆ. ನಾನು ಅಕ್ರಮವಾಗಿ ಅಡಕೆ ತೋಟ ಮಾಡಿದ್ದೇನೆಂದು ಹೇಳಿರುವ ಶಾಸಕರು ಇದನ್ನು ರುಜುವಾತು ಪಡಿಸಿದರೆ ತೋಟವನ್ನು ಶಾಸಕರ ಹೆಸರಿಗೆ ಮಾಡುವುದಕ್ಕೆ ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.