ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ವಿರೋಧ

| Published : Apr 08 2025, 12:31 AM IST

ಸಾರಾಂಶ

ಲೋಕಾಪುರ ಪಟ್ಟಣದ ಕಾಯಿಪಲ್ಲೆ ಬಜಾರದಲ್ಲಿ ಪಟ್ಟಣ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಈ ಜಾಗದಲ್ಲಿ ಶೌಚಾಲಯ ನಿರ್ಮಿಸಬಾರದು ಎಂದು ಸ್ಥಳೀಯ ಸಾರ್ವಜನಿಕರು ಭಾನುವಾರ ವಿರೋಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಕಾಯಿಪಲ್ಲೆ ಬಜಾರದಲ್ಲಿ ಪಟ್ಟಣ ಪಂಚಾಯತಿಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಈ ಜಾಗದಲ್ಲಿ ಶೌಚಾಲಯ ನಿರ್ಮಿಸಬಾರದು ಎಂದು ಸ್ಥಳೀಯ ಸಾರ್ವಜನಿಕರು ಭಾನುವಾರ ವಿರೋಧ ವ್ಯಕ್ತಪಡಿಸಿದರು.

ರಸ್ತೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿದರೆ ಸುತ್ತಲಿನ ಪರಿಸರ ಮಲೀನಗೊಳ್ಳುತ್ತದೆ, ಬೇರೆ ಜಾಗದಲ್ಲಿ ಶೌಚಾಲಯ ನಿರ್ಮಿಸಿ ನಮ್ಮ ಅಭ್ಯಂತರಿವಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಕೇವಲ ಶೌಚಾಲಯ ನಿರ್ಮಿಸಿದರೆ ಸಾಲದು ಸ್ಛಚ್ಛತೆಗೂ ಆದ್ಯತೆ ನೀಡಬೇಕಾಗುತ್ತದೆ, ಶೌಚಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ಈಶ್ವರ ಹವಳಖೋಡ ತಿಳಿಸಿದರು.

ಅಂಗಡಿ ಮಾಲೀಕ ಮುರುಗೇಶ ಕೊಣ್ಣೂರ ಮಾತನಾಡಿ, ಚರಂಡಿಗಳು ಅವೈಜ್ಞಾನಿಕಗಳಾಗಿದ್ದು,ಮೂತ್ರಿ ಹರಿದುಹೋಗದೆ ನಿಂತಲ್ಲೇ ನಿಂತು ದುರ್ವಾಸನೆ ಬೀರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಕುಬೇರ ಬಾಗಲೆ, ಶ್ರೀಧರ ರಂಗೋಜಿ, ಶ್ರೀಶೈಲ ಪಲ್ಲೇದ, ಸಂಗಮೇಶ ಶಿಲವಂತರ, ಸದಾನಂದ ಬೋಳಿಶೆಟ್ಟಿ, ಅಜ್ಜಪ್ಪ ಹವಳಖೋಡ, ಶಾನೂರ ಭಾಗವಾನ, ಡಾ. ಬಾರಡ್ಡಿ, ಶಂಭು ಕೊಣ್ಣೂರ, ಮಹೇಶ ಕೊಣ್ಣೂರ ಇದ್ದರು.