ಕಟ್ಟಡ ಅವಶೇಷ ಹಾಕವುದಕ್ಕೆ ವಿರೋಧ

| Published : Mar 20 2024, 01:24 AM IST

ಸಾರಾಂಶ

ಬೆಳಗಾವಿ: ತಾಲೂಕಿನ ಅಲತಗಾ ಗ್ರಾಮದ ವ್ಯಾಪ್ತಿಯಲ್ಲಿ ಬೆಳಗಾವಿ ನಗರದ ಕಟ್ಟಡ ನಿರ್ಮಾಣ ಅವಶೇಷಗಳನ್ನು ಹಾಕುವುದನ್ನು ಕೈ ಬಿಡಬೇಕು ಎಂದು ಒತ್ತಾಯಿ ಕಂಗ್ರಾಳಿ.ಕೆ.ಎಚ್‌. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ತಾಲೂಕಿನ ಅಲತಗಾ ಗ್ರಾಮದ ವ್ಯಾಪ್ತಿಯಲ್ಲಿ ಬೆಳಗಾವಿ ನಗರದ ಕಟ್ಟಡ ನಿರ್ಮಾಣ ಅವಶೇಷಗಳನ್ನು ಹಾಕುವುದನ್ನು ಕೈ ಬಿಡಬೇಕು ಎಂದು ಒತ್ತಾಯಿ ಕಂಗ್ರಾಳಿ.ಕೆ.ಎಚ್‌. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಲತಗಾ ಗ್ರಾಮದಲ್ಲಿ 2.0 ಯೋಜನೆಯಡಿಯಲ್ಲಿ ಬೆಳಗಾವಿ ನಗರದ ಕಟ್ಟಡ ನಿರ್ಮಾಣದ ಅವಶೇಷಗಳನ್ನು ಹಾಕಲು ಅಲತಗಾ ಗ್ರಾಮದ ಸರ್ವೇ ನಂ.55 ರಲ್ಲಿ 5 ಎಕರೆ ಜಮೀನನ್ನು ಉಪಯೋಗಿಸಲು ಆದೇಶ ಮಾಡಲಾಗಿದೆ. ಆದರೆ, ನಿಯೋಜಿತ ಜಮೀನು ಗಾಯರಾಣವಾಗಿರುವುದರಿಂದ ಅಲತಗಾ, ಜಾಫರವಾಡಿ, ಕಡೋಲಿ, ಕಂಗ್ರಾಳಿ.ಕೆ.ಎಚ್‌. ಗ್ರಾಮದ ಸುಮಾರು 3 ಸಾವಿರ ಜಾನುವಾರುಗಳು ಮೆಯುವುದಕ್ಕೆ ಹೋಗುತ್ತವೆ. ವಾಯುವಿವಾಹರಕ್ಕೆ ಹೋಗುವವರಿಗೆ ಆದ್ದರಿಂದ ಕಟ್ಟಡ ನಿರ್ಮಾಣದ ಅವೇಶಷಗಳನ್ನು ಅಲ್ಲಿ ಹಾಕಿದರೆ ಸಮಸ್ಯೆಯಾಗಲಿದೆ. ವಾಯು ಮಾಲಿನ್ಯಯುಂಟಾಗಿ, ಜನ, ಜಾನುವಾರುಗಳಿಗೆ ಅನಾನುಕೂಲವಾಗಲಿದೆ. ಆದ್ದರಿಂದ ಈ ಪ್ರದೇಶದಲ್ಲಿ ಕಟ್ಟಡ ಅವಶೇಷಗಳನ್ನು ಹಾಕುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪರಶುರಾಮ ಚಿಸಲಕರ, ಸೋಮೇಶ ಪವಾರ, ರಾಜು ಕಾಂಬಳೆ ಸೇರಿದಂತೆ ಮೊದಲಾದವರು ಇದ್ದರು.