ವಾಹನ ಚಲಾಯಿಸುವಾಗ ನಮ್ಮ ವಾಹನಗಳಿಗೆ ಯಾರಾದರೂ ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಅಥವಾ ನಮ್ಮ ಚಾಲನೆಯಲ್ಲಿ ಏನಾದರೂ ತೊಂದರೆ ಆಗಿ ಎದುರು ವಾಹನಗಳಿಗೆ ಅಥವಾ ಪ್ರಯಾಣಿಕರಿಗೆ ಜೀವ ಹಾನಿ ಅಥವಾ ಏನಾದರೂ ಅಪಘಾತ ಸಂಭವಿಸಿದಲ್ಲಿ ಚಾಲಕರಿಗೆ ₹೧೦ಲಕ್ಷ ರೂ. ದಂಡ ಮತ್ತು ಏಳು ವರ್ಷ ಜೈಲು ಶಿಕ್ಷೆ ಜಾರಿತಂದಿರುವುದು ಸಲ್ಲದು.
ಕಾರಟಗಿ: ಇತ್ತೀಚೆಗೆ ಕೇಂದ್ರ ಸರ್ಕಾರಿ ಜಾರಿಗೆ ತಂದ ಹಿಟ್ ಆ್ಯಂಡ್ ರನ್ ಜಾರಿಗೆ ಸಂಬಂಧಿಸಿದ ಹೊಸ ಕಾನೂನು ರದ್ದುಗೊಳಿಸಿ ಹಳೇ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿ ಇಲ್ಲಿನ ತಹಸೀಲ್ದಾರ್ ಕಚೇರಿ ಮುಂಭಾಗ ತಾಲೂಕು ಲಾರಿ ಮಾಲೀಕರ ಮತ್ತು ಸರಕು ಸಾಗಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.ಕೇಂದ್ರದ ಸರ್ಕಾರ ಕೂಡಲೇ ಹೊಸ ಕಾನೂನು ಜಾರಿ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಎಂ.ಕುಮಾರಸ್ವಾಮಿಗೆ ಸಲ್ಲಿಸಿದರು.ಈ ವೇಳೆ ಸಂಘ ತಾಲೂಕು ಅಧ್ಯಕ್ಷ ಪರಸಪ್ಪ ದಾರಿಮನಿ ಮಾತನಾಡಿ, ಹಿಟ್ ಆ್ಯಂಡ್ ರನ್ ಹೊಸ ಕಾಯ್ದೆ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹೊಸ ಕಾಯಿದೆ ಜಾರಿ ತಂದಿದ್ದಾರೆ. ಈ ಹೊಸ ಕಾಯ್ದೆ ಚಾಲಕರಿಗೆ ಅನ್ವಯವಾಗುವುದಿಲ್ಲ ಎಂದರು. ವಾಹನ ಚಲಾಯಿಸುವಾಗ ನಮ್ಮ ವಾಹನಗಳಿಗೆ ಯಾರಾದರೂ ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಅಥವಾ ನಮ್ಮ ಚಾಲನೆಯಲ್ಲಿ ಏನಾದರೂ ತೊಂದರೆ ಆಗಿ ಎದುರು ವಾಹನಗಳಿಗೆ ಅಥವಾ ಪ್ರಯಾಣಿಕರಿಗೆ ಜೀವ ಹಾನಿ ಅಥವಾ ಏನಾದರೂ ಅಪಘಾತ ಸಂಭವಿಸಿದಲ್ಲಿ ಚಾಲಕರಿಗೆ ₹೧೦ಲಕ್ಷ ರೂ. ದಂಡ ಮತ್ತು ಏಳು ವರ್ಷ ಜೈಲು ಶಿಕ್ಷೆ ಜಾರಿತಂದಿರುವುದು ಸಲ್ಲದು ಎಂದರು.ಈ ಸಂದರ್ಭದಲ್ಲಿ ಸಂಘದ ಸಿ.ಶಿವಕುಮಾರ, ಎನ್.ಬಸವರಾಜ್, ಭಾಸ್ಕರ್ ರೆಡ್ಡಿ, ತಿಮ್ಮಣ್ಣ ನಾಯಕ, ಟಿ.ಬಸವರಾಜ್ ಎಸ್.ವೀರೇಶ್. ಕೆ.ಹೊಳೆಯಪ್ಪ, ಟಿ.ವೀರೇಶ್, ಚಿದಾನಂದ ಉಪ್ಪಾರ, ಎನ್.ಶ್ರೀನಿವಾಸ್ ಇದ್ದರು.