ಸಿದ್ದು ಕೆಲಸ ಸಹಿಸಲಾಗದೆ ಮುಗಿಬೀಳ್ತಿವೆ ವಿಪಕ್ಷ: ಆರ್.ಎಂ.ಮಂಜುನಾಥ್ ಗೌಡ

| Published : Aug 03 2024, 12:35 AM IST

ಸಿದ್ದು ಕೆಲಸ ಸಹಿಸಲಾಗದೆ ಮುಗಿಬೀಳ್ತಿವೆ ವಿಪಕ್ಷ: ಆರ್.ಎಂ.ಮಂಜುನಾಥ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರ ತಾಲೂಕಿನ ರೈತರ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡರು ಬಾಗಿನ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಉತ್ತಮ ಕೆಲಸವನ್ನು ಸಹಿಸಲಾಗದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಎಂಎಡಿಬಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಟೀಕಿಸಿದರು.

ಅವರು ತಾಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಬಾಗಿನ ಸಮರ್ಪಿಸಿ ಅಂಜನಾಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಅಚ್ಚುಕಟ್ಟುದಾರ ರೈತರನ್ನು ಉದ್ದೇಶಿಸಿ ಮಾತನಾಡಿದರು.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬರಗಾಲ ಎಂದು ಕುಹಕವಾಡುತ್ತಿದ್ದ ಬಿಜೆಪಿಗರು ಈಗ ಏನು ಹೇಳುತ್ತಾರೆ ? ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಶಿಕಾರಿಪುರದ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ನಾಯಕರು ರಾಜ್ಯಪಾಲರ ಮೂಲಕ ಕೇಸಿನಲ್ಲಿ ಸಿಕ್ಕಿ ಹಾಕಿಸಲು ಪ್ರಯತ್ನ ಮಾಡುತ್ತಿದ್ದಾರೆ,ಅವರ ಪ್ರಯತ್ನ ಈಡೇರುವುದಿಲ್ಲ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಶಾಸಕರು ಒಗ್ಗಟ್ಟಾಗಿದ್ದೇವೆ ನಮ್ಮ ನಾಯಕ ಸಿದ್ದರಾಮಯ್ಯನವರನ್ನು ಉಳಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ದೇವರ ಕೃಪೆಯಿಂದ ನಾಡಿನ ಎಲ್ಲ ಕೆರೆಕಟ್ಟೆಗಳು ತುಂಬಿದ್ದು ಸಮೃದ್ಧವಾಗಿದೆ, ಹಿತಮಿತವಾಗಿ ನೀರು ಬಳಸಿ ಬರಗಾಲದ ಪರಿಸ್ಥಿತಿಯಲ್ಲೂ ಶೇಖರಿಸಿ ಸಂಗ್ರಹಿಸಿಕೊಟ್ಟುವ ಮುಂಜಾಗ್ರತೆಯನ್ನು ನಾವೆಲ್ಲರೂ ಹೊಂದಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಮ ವಹಿಸಿದ್ದರು.ಈ ಸಂದರ್ಬದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್,ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಭದ್ರ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ,ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್,ಭಂಡಾರಿ ಮಾಲತೇಶ್, ಮಾರವಳ್ಳಿ ಉಮೇಶ್,ಉಳ್ಳಿ ದರ್ಶನ್,ವೀರೇಶ್,ಪುಷ್ಪ ಶಿವಕುಮಾರ್,ರಾಘವೇಂದ್ರ ನಾಯ್ಕ್,ಜಯಶ್ರೀ,ಬಡಗಿ ಪಾಲಾಕ್ಷಪ್ಪ,ನಗರದ ರವಿಕಿರಣ,ಎಚ್.ಎಸ್ ರವೀಂದ್ರ[ರಾಘು],ಭಂಡಾರಿ ಮಾಲತೇಶ್ ಸಹಿತ ನೂರಾರು ಜನತೆ ಹಾಜರಿದ್ದರು.ಅಂಜನಾಪುರ ಜಲಾಶಯಕ್ಕೆ 200 ರು.ಕೋಟಿ ಅನುದಾನಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ನಾಗರಾಜ್‌ಗೌಡ ಮಾತನಾಡಿ, ಅಂಜನಾಪುರ ಜಲಾಶಯ 1938ರಲ್ಲಿ ಸ್ಥಾಪಿತವಾಗಿದ್ದು, ಇದುವರೆಗೂ ಒಂದು ಬಕೆಟ್‌ ಹೂಳೂ ತೆಗೆದಿಲ್ಲ. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಿರುವ ಅಂಜನಾಪುರ ಜಲಾಶಯದಿಂದಲೇ ಎಂದ ಅವರು, ಕಳೆದ ಬಾರಿ ಬೇಸಿಗೆಯಲ್ಲಿ ಶಿಕಾರಿಪುರಕ್ಕೆ ಕುಡಿಯುವ ನೀರನ್ನು ಒದಗಿಸುವಲ್ಲಿ ಅಂಜನಾಪುರ ಡೆಡ್ ಸ್ಟೋರೇಜ್‌ನಲ್ಲಿ ಸಹ ನೀರಿಲ್ಲದೆ ಪರಿತಪಿಸಬೇಕಾದ ದುಸ್ಥಿತಿ ಉಂಟಾಯಿತು. ಈ ದಿಸೆಯಲ್ಲಿ 198 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಹೇಗೆ ಸಾಧ್ಯ? ಇದರೊಂದಿಗೆ ಅಚ್ಚುಕಟ್ಟುದಾರ ರೈತರು ಸಾವಿರಾರು ಎಕರೆ ಭತ್ತ, ಬಾಳೆ, ಅಡಕೆ ತೋಟ ಮಾಡಿಕೊಂಡಿದ್ದಾರೆ, ಇವರಿಗೆ ಯಾವ ರೀತಿಯಲ್ಲಿ ನ್ಯಾಯ ದೊರಕಿಸಲು ಸಾಧ್ಯ? ಎಂಬುದೇ ಯಕ್ಷ ಪ್ರಶ್ನೆ. ಇನ್ನು, ಈ ಸಮಸ್ಯೆ ಬಗ್ಗೆ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ನಡೆದ ಹಿರಿಯ ತಂತ್ರಜ್ಞರು ಹಾಗೂ ನೀರಾವರಿ ಇಲಾಖೆಯ ಹಿರಿಯ ಇಂಜಿನಿಯರ್‌ಗಳ ಸಭೆಯಲ್ಲೂ ಚರ್ಚಿಸಲಾಗಿದ್ದು, ಸಚಿವರು ಶರಾವತಿಯಿಂದ ನೀರು ತರುವ ಯೋಜನೆಯನ್ನು ರೂಪಿಸಿ 200 ರು. ಕೋಟಿ ಅನುದಾನವನ್ನು ನಾನು ತಂದು ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದವರು ತಿಳಿಸಿದರು.