ಸರ್ಕಾರಿ ಶಾಲೆಗಳಲ್ಲಿ ನರ್ಸರಿ ತರಗತಿ ಆರಂಭಕ್ಕೆ ವಿರೋಧ

| Published : Jun 20 2024, 01:01 AM IST

ಸರ್ಕಾರಿ ಶಾಲೆಗಳಲ್ಲಿ ನರ್ಸರಿ ತರಗತಿ ಆರಂಭಕ್ಕೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಸಾವಿರಾರು ನೌಕರರು ತಮ್ಮ ಮಕ್ಕಳ ಸಮೇತರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರ ಕಲಬುರಗಿಯಲ್ಲಿರುವ ನಿವಾಸಗಳ ಮುಂದೆ ಇಡೀ ದಿನ ಧರಣಿ ನಡೆಸಿ ಗಮನ ಸೆಳೆದಿದ್ದಾರೆ.

ಕನ್ನಡಪ್ರಭಿ ವರ್ತೆ ಕಲಬುರಗಿ

ಸರ್ಕಾರಿ ಶಾಲೆಗಳಲ್ಲಿ ನರ್ಸರಿ ತರಗತಿ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಅಂಗನವಾಡಿ ನೌಕರರ ಧರಣಿ ಜಿಲ್ಲೆಯಲ್ಲಿ ಮುಂದುವರಿದಿದೆ.

ಬುಧವಾರ ಅಂಗನವಾಡಿ ಸಾವಿರಾರು ನೌಕರರು ತಮ್ಮ ಮಕ್ಕಳ ಸಮೇತರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರ ಕಲಬುರಗಿಯಲ್ಲಿರುವ ನಿವಾಸಗಳ ಮುಂದೆ ಇಡೀ ದಿನ ಧರಣಿ ನಡೆಸಿ ಗಮನ ಸೆಳೆದಿದ್ದಾರೆ.

ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆ ಮೂಲಕ ಜಾರಿಗೊಳಿಸುವ ಆದೇಶ ವಾಪಸ್ ಪಡೆದು ಐಸಿಡಿಎಸ್ ಯೋಜನೆಯ ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಬೇಕು, ಸರಕಾರಿ ಶಾಲೆಗಳಲ್ಲಿ ನರ್ಸರಿ ತರಗಿ ಆರಂಭಿಸದೆ ಅಂಗನವಾಡಿಗಳಲ್ಲೇ ಶುರುಮಾಡುವಂತೆ ಕೋರಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಭಾರತ ಕಮ್ಯೂನಿಸ್ಟ್ ಪಕ್ಷ (ಎಂ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರದ ಧರಣಿಗಳು ನಡೆದಿದ್ದವು. ಇದಾದ ನಂತರ ನಗರದ ಕನ್ನಡ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.