ಅನಧಿಕೃತ ಸುಂಕ ವಸೂಲಿಗೆ ವಿರೋಧ: ವ್ಯಾಪಾರಿಗಳಿಂದ ಮುಖ್ಯಾಧಿಕಾರಿಗಳಿಗೆ ದೂರು

| Published : Apr 03 2024, 01:35 AM IST

ಅನಧಿಕೃತ ಸುಂಕ ವಸೂಲಿಗೆ ವಿರೋಧ: ವ್ಯಾಪಾರಿಗಳಿಂದ ಮುಖ್ಯಾಧಿಕಾರಿಗಳಿಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲಿ ಸುಂಕ ವಸೂಲಿ ಬೇಕಾ ಬಿಟ್ಟಿ ಮಾಡುತ್ತಿದ್ದಾರೆ ಎಂದು ಮುಖ್ಯಾಧಿಕಾರಿಗೆ ವ್ಯಾಪಾರಿಗಳು ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ ಹಚ್ಚುವ ವ್ಯಾಪಾರಿಗಳಿಂದ ಪುರಸಭೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಅನಧಿಕೃತವಾಗಿ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ವ್ಯಾಪಾರಿಗಳು ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದರು.೨೦೨೪-೨೫ನೇ ಸಾಲಿಗೆ ಪುರಸಭೆ ಬಹಿರಂಗ ಹರಾಜು ಮಾಡಿದ್ದು, ಯಾರಿಂದ ಎಷ್ಟು ಫೀ ಹಣ ಸಂಗ್ರಹ ಮಾಡಬೇಕು ಎಂಬ ಪಟ್ಟಿ ಪ್ರಕಟಿಸಿದ್ದರೂ ಸಹ ಗುತ್ತಿಗೆ ದಾರರು ಹೆಚ್ಚು ಹಣ ಸಂಗ್ರಹ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಸಣ್ಣ ವ್ಯಾಪಾರಿಗಳು ಮುಖ್ಯಾಧಿಕಾರಿಗಳ ಬಳಿ ದೂರಿದರಲ್ಲದೆ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದರು.ಪಟ್ಟಣದಲ್ಲಿ ಪ್ರತಿದಿನ ಅಂಗಡಿ ಹಚ್ಚುವ ಹಣ್ಣಿನ ಅಂಗಡಿ, ಎಲೆ ಅಂಗಡಿ, ಸೊಪ್ಪು ತರಕಾರಿ,ಹೂವಿನ ಅಂಗಡಿ ಮಾಲಿಕರಿಂದ ಪುರಸಭೆ ನಿಗದಿ ಪಡಿಸಿಸಿರುವು ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಹೆಚ್ಚುವರಿ ಹಣ ವಸೂಲಿ ವಿರೋಧ ಮಾಡಿದರೆ ಅಂಗಡಿ ತೆರೆಯಲು ಬಿಡುವುದಿಲ್ಲ, ಹಾಗೆಯೇ ಬೇರೆಯವರಿಗೆ ಆ ಸ್ಥಳವನ್ನು ಕೊಡುವುದಾಗಿ ಗುತ್ತಿಗೆದಾರರು ಹೆದರಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.ಈ ಹಿಂದೆ ರಸ್ತೆಬದಿ ಯಾರೂ ಅಂಗಡಿ ತೆರೆಯಬಾರದು ಎಂದು ಕರಾರು ಮಾಡಲಾಗಿತ್ತು, ಆದರೆ ಇಂದು ಪಟ್ಟಣದಲ್ಲಿ ಫುಟ್‌ಪಾತ್‌ ಸೇರಿದಂತೆ ಸುಮಾರು ೨೫೦ಕ್ಕೂ ಹೆಚ್ಚು ಅಂಗಡಿ ಕದ ತೆರೆದಿದ್ದಾರೆ ಅವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದರು.ಮುಖ್ಯಾಧಿಕಾರಿ ಜಯಪ್ಪ ಮನವಿ ಪಡೆದು ಗುತ್ತಿಗೆದಾರರನ್ನು ಕರೆಸಿ ಮಾತನಾಡಿ, ಗುತ್ತಿಗೆ ದಾರರು ಪುರಸಭೆ ನಿಗದಿಪಡಿಸಿರುವ ದರವನ್ನು ಮಾತ್ರ ವಸೂಲಿ ಮಾಡಬೇಕು, ಹೆಚ್ಚಾಗಿ ವಸೂಲಿ ಮಾಡಬಾರದು ಎಂದು ತಿಳಿಸುವುದಾಗಿ ವ್ಯಾಪಾರಿಗಳಿಗೆ ಭರವಸೆ ನೀಡಿದರು.ಒಂದು ವೇಳೆ ಅವರು ಹೆಚ್ಚುವರಿ ಹಣ ವಸೂಲಿ ಮಾಡುವುದು ಕಂಡುಬಂದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವದಾಗಿ ಹೇಳಿದರು.

ರೆವಿನ್ಯೂ ಇನ್ಸ್‌ಪೆಕ್ಟರ್ ಮಮತ ಮಾತನಾಡಿ, ನಿಗದಿತ ದರದಂತೆ ವಸೂಲಿ ಮಾಡುವುದನ್ನು ಬಿಟ್ಟು ಅವರಿಗೆ ಯಾವುದೇ ಅಧಿಕಾರ ವಿರುವುದಿಲ್ಲ, ಏನಾದರೂ ಇದ್ದಲ್ಲಿ ಕಛೇರಿಗೆ ತಿಳಿಸಿ ಎಂದರು. ಜಬಿಉಲ್ಲಾ, ಎಲೆ ವ್ಯಾಪಾರಿ ವಿರೇಶ್ , ಹಣ್ಣಿನ ವ್ಯಾಪಾರಿ ರಶೀದ್ ,ಅಡಿಕೆ ವ್ಯಾಪಾರಿ ಹಿದಾಯತ್, ಹೂವಿನ ವ್ಯಾಪಾರಿ ಅಬೀದ್, ಸಿದ್ದಲಿಂಗಸ್ವಾಮಿ, ಕ್ಕೀರಯ್ಯ ಸುರೇಶ ಸ್ವಾಮಿ ಸೇರಿದಂತೆ ಹಲವಾರು ಹಾಜರಿದ್ದು ದೂರು ನೀಡಿದರು.