ವಾಟದಹೊಸಹಳ್ಳಿ ಕೆರೆ ನೀರು ಪೂರೈಕೆಗೆ ವಿರೋಧ

| Published : Apr 27 2025, 01:31 AM IST

ಸಾರಾಂಶ

ಎತ್ತಿನಹೊಳೆ ನೀರನ್ನು ತರುತ್ತೇನೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಿರುವುದು ತಪ್ಪು ಎತ್ತಿನಹೊಳೆಯ ನೀರು ಇನ್ನು ಸಕಲೇಶ್ವರಕ್ಕೇ ತಲುಪಿಲ್ಲ. ವಾಟದಹೊಸಹಳ್ಳಿಗೆ ಬರಲು ಸುಮಾರು 20 ವರ್ಷಗಳು ಬೇಕಾಗುತ್ತದೆ. ಅಲ್ಲಿಯವರೆಗೂ ಈ ಕೆರೆಯ ನೀರನ್ನು ಅವಲಂಬಿಸಿಕೊಂಡಿರುವ ರೈತರ ಜೀವನ ಏನಾಗಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ವಾಟದಹೊಸಹಳ್ಳಿ ಗ್ರಾಮದ ಕೆರೆ ನೀರನ್ನು ಗೌರಿಬಿದನೂರು ನಗರಕ್ಕೆ ಪೂರೈಸುವುದನ್ನು ಖಂಡಿಸಿ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಆವರಣದಿಂದ ವಾಟದಹೊಸಳ್ಳಿ ಕೆರೆವರೆಗೂ ಪಂಜಿನ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಧುಸೂರ್ಯನಾರಾಯಣರೆಡ್ಡಿ ಮಾತನಾಡಿ, ಶಾಸಕರು ಈ ಭಾಗದ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ರೈತರ ಮಧ್ಯ ಬಂದು ಅವರವರ ಸಮಸ್ಯೆ ಏನಿದೆ ಎಂದು ತಿಳಿದು ಉತ್ತರ ನೀಡಬೇಕು ಎಂದರು.

ಸುಳ್ಳು ಆಶ್ವಾಸನೆ ನೀಡಬೇಡಿ

ಎತ್ತಿನಹೊಳೆ ನೀರನ್ನು ತರುತ್ತೇನೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಿರುವುದು ತಪ್ಪು ಎತ್ತಿನಹೊಳೆಯ ನೀರು ಇನ್ನು ಸಕಲೇಶ್ವರಕ್ಕೇ ತಲುಪಿಲ್ಲ. ವಾಟದಹೊಸಹಳ್ಳಿಗೆ ಬರಲು ಸುಮಾರು 20 ವರ್ಷಗಳು ಬೇಕಾಗುತ್ತದೆ. ಅಲ್ಲಿಯವರೆಗೂ ಈ ಕೆರೆಯ ನೀರನ್ನು ಅವಲಂಬಿಸಿಕೊಂಡಿರುವ ರೈತರ ಜೀವನ ಏನಾಗಬೇಕು ಎಂದು ಕಿಡಿಕಾರಿದರು ರೈತ ಮುಖಂಡ ಹರ್ಷವರ್ಧನ್ ರೆಡ್ಡಿ ಮಾತನಾಡಿ, ವಾಟದಹೊಸಹಳ್ಳಿ ಕೆರೆ ನಗರಗೆರೆ ಹೋಬಳಿಯ ಎಲ್ಲ ಹಳ್ಳಿಗಳಿಗೂ ಸಂಬಂಧಪಟ್ಟಂತಹ ಕೆರೆ ಇದು. ಇದು ಒಬ್ಬರ ತೀರ್ಮಾನವಲ್ಲ. ಶಾಸಕರು ಬಂದು ರೈತರ ಬಳಿ ಚರ್ಚೆ ನಡೆಸಿ ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನೀರು ತೆಗೆದುಕೊಂಡು ಹೋಗಲಿ . ಆದರೆ ಎತ್ತಿನಹೊಳೆ ನೀರು ನಮ್ಮ ಕೆರೆಗೆ ಬರುವವರೆಗೂ ಯಾವುದೇ ಕಾಮಗಾರಿ ನಡೆಯಬಾರದು ಎಂದು ಅವರು ಒತ್ತಾಯಿಸಿದರು.ಅವೈಜ್ಞಾನಿಕ ಯೋಜನೆ ಕೈಬಿಡಲಿ

ಅವೈಜ್ಞಾನಿಕ ಯೋಜನೆ ಕಾಮಗಾರಿಯನ್ನು ಕೈ ಬೀಡಬೇಕು, ನಗರಕ್ಕೆ ನೀರು ಪೂರೈಕೆ ಮಾಡಬೇಕು ಎಂದರೆ ಹತ್ತಾರು ಯೋಜನೆಗಳು ಇವೇ ಈ ಭಾಗದ ಜಲ ತಜ್ಞರನ್ನು ಸಂಪರ್ಕಿಸಿ ನಗರಕ್ಕೆ ಹತ್ತಿರವಿರುವ ಕಿಂಡಿ ಅಣೆಕಟ್ಟು, ಇನ್ನು ಹತ್ತಿರದ ಕೆರೆಗಳ ಮೂಲಕ ನಗರಕ್ಕೆ ನೀರು ಪೂರೈಸಿ,

ನಮ್ಮ ನಗರಗೆರೆ ಹೋಬಳಿಯ ಪ್ರತಿಯೊಬ್ಬರಲ್ಲಿ ನೀರಿಗಾಗಿ ಹೋರಾಟದ ಕಿಚ್ಚು ಅತ್ತಿ ಉರಿಯುತ್ತಿದೆ ಹೋರಾಟ ಎಂಬ ವಿಷಯ ಬಂದಾಗ ನಾವೆಲ್ಲ ಒಂದು ಹೋರಾಟದ ವೀರತ್ವ ನಮ್ಮದು, ಹೋರಾಟದ ಸಾಮ್ರಾಟರಾ ನಾವೇ, ನಮ್ಮ ಕೆರೆಯ ನೀರನ್ನು ತೆಗೆದುಕೊಂಡು ಹೋಗುವ ಯೋಜನೆಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು. ಶಾಸಕರು ವಿಷ ನೀಡಲಿ

ಗ್ರಾಮ ಪಂಚಾಯಿತಿ ಸದಸ್ಯರಾದ ಬಂಡಪಲ್ಲಿ ನರಸಿಂಹಮೂರ್ತಿ ಅವರು ಮಾತನಾಡಿ ಶಾಸಕರು ವಾಟದಹೊಸಳ್ಳಿ ಕೆರೆ ನೀರನ್ನು ತೆಗೆದುಕೊಂಡು ಹೋಗಲೇಬೇಕು ಎಂದರೆ ಈ ಭಾಗದ ರೈತರಿಗೆ ವಿಷ ಕೊಟ್ಟು ನೀರನ್ನು ತೆಗೆದು ಕೊಂಡು ಹೋಗಿ ಎಂದು ತಿಳಿಸಿದರು ರೈತ ಸಂಘದ ಅಧ್ಯಕ್ಷರಾದ ಮಾಳಪ್ಪ ಅವರು ಮಾತನಾಡಿ ವಾಟರಹೊಸಹಳ್ಳಿಯ ಕೆರೆಗೆ ಪ್ರತಿ ವರ್ಷ ಗುಡಿಬಂಡೆ ಕೆರೆ ಕೋಡಿ ಹೋದಾಗ ನಾವು ಇದೇ ರೀತಿ ಪಕ್ಷಾತೀತವಾಗಿ ಹೋಗಿ ನೀರನ್ನು ತೆಗೆದುಕೊಂಡು ಬಂದು ತುಂಬಿಸಿಕೊಳ್ಳುತ್ತಿದ್ದೇವೆ. ಈಗ ವಾಟದಹೊಸಹಳ್ಳಿ ನೀರನ್ನು ಗೌರಿಬಿದನೂರು ನಗರಕ್ಕೆ ಕೊಟ್ಟರೆ ಗುಡುಬಂಡೆ ಕೆರೆಯ ನೀರನ್ನು ನಮಗೆ ಬಿಡುವುದಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ನೀರನ್ನು ಬಿಡೋದಿಲ್ಲ ಎಂದರು.

ತಾಲೂಕು ಕಚೇರಿಗೆ ಮುತ್ತಿಗೆ

ವಾಟದಹೊಸಳ್ಳಿ ಕೆರೆ ನೀರ ಪೂರೈಕೆ ಯೋಜನೆಯನ್ನು ಇಲ್ಲಿಗೆ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಾಟದಹೊಸಹಳ್ಳಿಯಿಂದ ಗೌರಿಬಿದನೂರಿನ ತಾಲೂಕು ಕಚೇರಿವರೆಗೂ ನಗರಗೆರೆ ಹೋಬಳಿಯ ಎಲ್ಲಾ ರೈತರು ಕಾಲ್ನಡಿಗೆ ಜಾಥಾದಲ್ಲಿ ಬಂದು ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಅಮರನಾರಾಯಣ ರೆಡ್ಡಿ, ಶಂಕರ ರೆಡ್ಡಿ, ಕೆಂಪು ರಂಗಪ್ಪ, ವಿಎಂಸಿ ರಾಜ ನಾಯಕ, ವಿ ಎಂ ಮಂಜುನಾಥ್, ಪರಮೇಶ್, ಕೃಷ್ಣಮೂರ್ತಿ, ನಾಗರಾಜ್ , ನವೀನ್ ಕುಮಾರ್, ವಿ ಎಂ ಸಿ ಶ್ರೀನಿವಾಸ್, ಹನುಮೇನಹಳ್ಳಿ ನಂಜುಂಡ ರೆಡ್ಡಿ, ಸಬ್ಬನ ಹಳ್ಳಿ ಬಾಬು, ಮತ್ತಿತರ ರೈತರು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಭಾಗವಹಿಸಿದ್ದರು.