ಸಾರಾಂಶ
ಪಂಜಾಬ್‌ನಲ್ಲಿ ರೈತರ ಹೋರಾಟಗಾರರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಇತರ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.
- ರೈತ ಸಂಘಟನೆಗಳ ಪ್ರತಿಭಟನೆಯಲ್ಲಿ ಮುಖಂಡರ ಆರೋಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪಂಜಾಬ್‌ನಲ್ಲಿ ರೈತರ ಹೋರಾಟಗಾರರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಇತರ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಿಂದ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಉಭಯ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು ನಂತರ ಉಪವಿಭಾಗಾಧಿಕಾರಿ ಕಚೇರಿ ಮುಖೇನ ಪಂಜಾಬ್‌ನ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.
ಸಂಘಟನೆ ಮುಖಂಡರು ಮಾತನಾಡಿ, ರೈತರ ಮೇಲೆ ಪಂಜಾಬ್ ಸರ್ಕಾರ ಕೇಂದ್ರದ ಸಹಕಾರದಲ್ಲಿ ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತಿದೆ. ಚಂಢೀಗಡದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಾ.5ರಿಂದ ಕೈಗೊಂಡಿರುವ ಹೋರಾಟವನ್ನು ಏಳನೇ ದಿನಕ್ಕೆ ಇಡೀ ಪಂಜಾಬನ್ನು ತೆರೆದ ಜೈಲನ್ನಾಗಿ ಪರಿವರ್ತಿಸುವ ಕೆಲಸ ಅಲ್ಲಿ ಆಗುತ್ತಿದೆ. ಮಾ.19ರಂದು ಕೇಂದ್ರ ಸಚಿವರೊಂದಿಗೆ ಚರ್ಚಿಸಿ, ಹಿಂದಿರುಗುತ್ತಿದ್ದ ರೈತ ನಾಯಕರನ್ನು ಬಂಧಿಸಲಾಗಿದೆ. ಶಂಭು ಮತ್ತು ಖಾನೌರಿ ಡೇರೆಗಳು ಮತ್ತು ವಸ್ತುಗಳನ್ನು ಬುಲ್ಡೋಜರ್ ಮೂಲಕ ರೈತರ ಧರಣಿ ಸ್ಥಳದ ಡೇರೆಗಳನ್ನು ತೆರವು ಮಾಡಿಸಲಾಗಿದೆ. ಜನರ ಪ್ರಜಾಪ್ರಭುತ್ವದ ಹಕ್ಕನ್ನು ದಮನ ಮಾಡಲಾಗುತ್ತಿದೆ. ಕರ್ನಲ್ ಪುಷ್ಪಿಂದರ್ ಸಿಂಗ್ ಬಾತ್ ವಿರುದ್ಧ ಪೊಲೀಸ್ ದೌರ್ಜನ್ಯ, ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಸೂಚನೆಗಳ ಹೊರತಾಗಿಯೂ ಬುಲ್ಡೋಜರ್ ಗಳಿಂದ ಜನರ ಮನೆ ಕೆಡವಿರುವುದು ಇದಕ್ಕೆ ನಿದರ್ಶನ ಎಂದು ಟೀಕಿಸಿದರು.ಎಸ್‌ಕೆಎಂ ಜಿಲ್ಲಾ ಮುಖಂಡರಾದ ಹೊನ್ನೂರು ಮುನಿಯಪ್ಪ, ಮಧು ತೊಗಲೇರಿ, ಐರಣಿ ಚಂದ್ರು, ಸತೀಶ ಅರವಿಂದ, ಆವರಗೆರೆ ಎಚ್.ಜಿ.ಉಮೇಶ, ಡಾ. ಟಿ.ಎಸ್. ಸುನಿತಕುಮಾರ, ಅರುಣಕುಮಾರ ಕುರುಡಿ, ಆವರಗೆರೆ ಚಂದ್ರು, ಶ್ರೀನಿವಾಸ, ಮಂಜುನಾಥ ಕೈದಾಳೆ ಇತರರು ಪ್ರತಿಭಟನೆಯಲ್ಲಿದ್ದರು.
- - -(ಬಾಕ್ಸ್)* ಬೇಡಿಕೆಗಳು - ಪಂಜಾಬ್‌ನಲ್ಲಿ ಪೊಲೀಸರ ದೌರ್ಜನ್ಯ ಅಲ್ಲಿ ತಡೆದು, ಜನರ ಪ್ರಜಾಸತಾತ್ಮಕ ಹಕ್ಕನ್ನು ಪುನಾ ಸ್ಥಾಪಿಸಬೇಕು
- ಬಂಧಿಸಲ್ಪಟ್ಟ, ಜೈಲಿನಲ್ಲಿರುವ ಎಲ್ಲ ರೈತ ಹೋರಾಟಗಾರರನ್ನು ಬೇಷರತ್ ಬಿಡುಗಡೆ ಮಾಡಬೇಕು- ರೈತರ ಟ್ರ್ಯಾಕ್ಟರ್, ಟ್ರಾಲಿ ಸೇರಿದಂತೆ ಎಲ್ಲ ಉಪಕರಣಗಳನ್ನು ಹಿಂದಿರುಗಿಸಬೇಕು
- - --28ಕೆಡಿವಿಜಿ1.ಜೆಪಿಜಿ:
ಪಂಜಾಬ್‌ನಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ದಾವಣಗೆರೆಯಲ್ಲಿ ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಇತರ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.