ಮಾವಿನ ಹಣ್ಣು ಸೀಜನ್‌ನಲ್ಲಿ ತಾಲೂಕಿನ ಹಲವು ಗ್ರಾಮಗಳ ಸಣ್ಣ ವ್ಯಾಪಾರಿಗಳು ನಗರದ ಬೀದಿಗಳಲ್ಲಿ ಬುಟ್ಟಿಯಲ್ಲಿ ಹಣ್ಣು ಪೇರಿಸಿಕೊಂಡು ರುಚಿಕರವಾದ ಹಣ್ಣು ಮಾರುವುದು ಹಿಂದಿನಿಂದ ಬಂದ ವಾಡಿಕೆಯಾಗಿದೆ. ಇಂತಹ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆಯ ಸುಂಕದವರು ಕಿರುಕುಳ ನೀಡುತ್ತಿದ್ದಾರೆ
-ವಸೂಲಿ ದಂಧೆ
-ವ್ಯಾಪಾರಿಗಳಿಗೆ ನಗರಸಭೆಯ ಸುಂಕದವರ ಕಿರುಕುಳ । ಹಬ್ಬ ಹರಿದಿನಗಳಲ್ಲಿ ದುಪ್ಪಟ್ಟು ಸುಂಕ ವಸೂಲಿಕನ್ನಡಪ್ರಭ ವಾರ್ತೆ ಗೌರಿಬಿದನೂರು
ಮುಂಜಾನೆ ಐದು ಗಂಟೆಯಿಂದಲೇ ನಗರದಲ್ಲಿ ಅನೇಕ ಜಾಗಗಳಲ್ಲಿ ಹೊಟ್ಟೆಪಾಡಿಗಾಗಿ ಹಳ್ಳಿಗಳಿಂದ ಬಂದು ಹೂವು, ಹಣ್ಣು, ತರಕಾರಿ ವ್ಯಾಪಾರಿಗಳು ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳಿಗೆ ಸುಂಕ ವಸೂಲಿ ಮಾಡುವವರ ಕಾಟ ಹೆಚ್ಚಾಗಿದೆ.ಮಾವಿನ ಹಣ್ಣು ಸೀಜನ್‌ನಲ್ಲಿ ತಾಲೂಕಿನ ಹಲವು ಗ್ರಾಮಗಳ ಸಣ್ಣ ವ್ಯಾಪಾರಿಗಳು ನಗರದ ಬೀದಿಗಳಲ್ಲಿ ಬುಟ್ಟಿಯಲ್ಲಿ ಹಣ್ಣು ಪೇರಿಸಿಕೊಂಡು ರುಚಿಕರವಾದ ಹಣ್ಣು ಮಾರುವುದು ಹಿಂದಿನಿಂದ ಬಂದ ವಾಡಿಕೆಯಾಗಿದೆ. ಇಂತಹ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆಯ ಸುಂಕದವರು ಕಿರುಕುಳ ನೀಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.ಬೀದಿಯಲ್ಲಿ ವ್ಯಾಪಾರ ಮಾಡುವವರಿಗೆ ದಿನವೊಂದಕ್ಕೆ 20 ರು. ಗಳ ಸುಂಕ ವಿಧಿಸಲಾಗುತ್ತದೆ. ಭಾನುವಾರ ಮಾತ್ರ 50 ರು.ಗಳನ್ನು ವಸೂಲಿ ಮಾಡಲಾಗುತ್ತದೆ. ಆದರೆ ಹಳ್ಳಿಗಾಡಿನವರೆಂದು ನಮ್ಮಿಂದ ಹೆಚ್ಚುವರಿ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಚೋಳೂರು ಗ್ರಾಮದ ಅಶ್ವತ್ಥಮ್ಮ ಮತ್ತು ಚಂದ್ರ ದೂರಿದ್ದಾರೆ.ದೌರ್ಜನ್ಯ ಆರೋಪ: ಹಬ್ಬ ಹರಿದಿನಗಳಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡುತ್ತಾರೆ. ಹೆಚ್ಚುವರಿ ಸುಂಕ ನೀಡಲು ನಿರಾಕರಿಸಿದರೆ ಕಾಲಿನಿಂದ ಹಣ್ಣಿನ ಬುಟ್ಟಿಯನ್ನು ಒದೆಯುವುದು, ಅವಾಚ್ಯ ಶಬ್ದಗಳಿಂದ ಬೈಯುವುದು, ವಾದ ಮಾಡಿದರೆ ತಕ್ಕಡಿಯನ್ನು ತೆಗೆದುಕೊಂಡು ಹೋಗುವುದು ಮಾಡುತ್ತಾರೆ ಎಂದು ತಮ್ಮ ಅಳಲನ್ನು ಕನ್ನಡಪ್ರಭ ದೊಂದಿಗೆ ಹಂಚಿಕೊಂಡರು.ಒಂದು ವಾರದ ಹಿಂದೆ ತೆಗೆದುಕೊಂಡು ಹೋದ ತಕ್ಕಡಿಯನ್ನು ಈವರೆಗೂ ನೀಡಿಲ್ಲ. ತಾವು ತೆಗೆದುಕೊಂಡು ಹೋದಂತಹ ತಕ್ಕಡಿ ಮತ್ತು ಕಲ್ಲುಗಳನ್ನು ಹಿಂತಿರುಗಿಸುವಂತೆ ಕೇಳಿದರೆ ಹೋಗಿ ಕಚೇರಿಯಲ್ಲಿ ದೂರು ಸಲ್ಲಿಸುವಂತೆ ತಿಳಿಸಿದರು. ಈ ಸಂಬಂಧ ನಗರಸಭೆಗೆ ದೂರು ನೀಡಿದರೂ ಸ್ಪಂದಿಸುವುದೇ ಇಲ್ಲಾ ಎಂದು ಹೇಳಿದ್ದಾರೆ.ನಾವು ಏಕೆ ಹೆಚ್ಚಿನ ಸುಂಕ ಶುಲ್ಕವನ್ನು ಪಾವತಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಕರಪತ್ರವನ್ನು ತಂದು ತೋರಿಸುವಂತೆ ವ್ಯಾಪಾರಸ್ಥರು ಕೇಳಿದಾಗ ನಿಮಗೆಲ್ಲ ಅದನ್ನು ತೋರಿಸುವ ಅವಶ್ಯಕತೆ ನನಗಿಲ್ಲ. ನೀನು ಹೋಗಿ ನಗರಸಭೆ ಕಾರ್ಯಾಲಯದಲ್ಲಿ ವಿವರಗಳನ್ನು ಪಡೆಯುವಂತೆ ಹೇಳುತಿದ್ದಾನೆ ಎಂದು ಹೇಳಿದರು.ಗ್ರಾಮಗಳಿಂದ ತಾಜಾ ಹಣ್ಣುಗಳನ್ನು ತಂದು ಮಾರುವ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆಯ ಸುಂಕ ವಸೂಲಿಗಾರರು ನೀಡುತ್ತಿರುವ ಕಿರುಕುಳದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ನಗರಸಭೆ ಈ ಸಂಬಂಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.ನಗರಸಭೆಗೆ ಸಂಬಂಧಿಸಿದ ಸ್ಥಳಗಳಲ್ಲಿ ವ್ಯಾಪಾರ ವಹಿವಾಡು ಮಾಡುದಲ್ಲಿ ಮಾತ್ರ ಸುಂಕವನ್ನು ಪಾವತಿಸಬೇಕಿದೆ. ಮನೆ-ಮನೆಗೆ ತಳ್ಳುವ ಗಾಡಿ ಹಾಗೂ ತರಕಾರಿ, ಹಣ್ಣು, ಹೂವುಗಳನ್ನು ಬುಟ್ಟಿಯಲ್ಲಿ ಹೊತ್ತುತಿರುಗಿ ಮಾರುವವರಿಂದಲೂ ಸುಂಕ ವಸೂಲಿ ಮಾಡುವ ಹಾಗಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.ಕೋಟ್.......
ಬೀದಿ ಬದಿ ವ್ಯಾಪಾರಿಗಳಿಂದ ಅಧಿಕೃತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಕಾನೂನುಬಾಹಿರ. ನಗರಸಭೆ ನಿಗದಿಪಡಿಸಿದ ದರವನ್ನು ಮಾತ್ರ ಪಾವತಿಸಬೇಕು. ಹೆಚ್ಚುವರಿ ಸುಂಕ ವಸೂಲಿ ಅಥವಾ ಕಿರುಕುಳ ಕಂಡುಬಂದಲ್ಲಿ ನೇರವಾಗಿ ದೂರು ನೀಡಬಹುದಾಗಿದೆ.-ನರಸಿಂಹಗೌಡ, ಸಾಮಾಜಿಕ ಹೋರಾಟಗಾರ
......ರಸ್ತೆ ಬದಿ ವ್ಯಾಪಾರಿಗಳಿಂದ ಹೆಚ್ಚುವರಿ ಸುಂಕ ವಸೂಲಾತಿ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಒಮ್ಮೆ ಹರಾಜು ಪಡೆದ ಗುತ್ತಿಗೆದಾರನನ್ನು ಕರೆದು ತಿಳಿಹೇಳಲಾಗುವುದು, ಮತ್ತೊಮ್ಮೆ ಇದೇ ರೀತಿಯಲ್ಲಿ ವರ್ತಿಸಿದಲ್ಲಿ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ನೂತನವಾಗಿ ಹರಾಜು ಪ್ರಾರಂಭಿಸಲಾಗುವುದು.
-ವಸಂತಕುಮಾರಿ, ನಗರಸಭೆ ಕಂದಾಯ ಅಧಿಕಾರಿ(ಒಂದು ಫೋಟೋ ಸಾಕು..