ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರ ಕಣ್ಣು, ಹೃದಯ, ಕಿಡ್ನಿ, ಲಿವರ್ ಗಳನ್ನು ಕುಟುಂಬದ ನಿರ್ಧಾರದ ಮೇರೆಗೆ 8ನೇ ಮೈಲಿ ಬಳಿಯ ಪ್ರಕ್ರಿಯ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಹೃದಯ, ಮಿಂಟೋ ಆಸ್ಪತ್ರೆಗೆ ಕಣ್ಣು ಮತ್ತು ಸೆಂಟ್ ಜಾನ್ ಆಸ್ಪತ್ರೆಗೆ ಕಿಡ್ನಿ, ಲಿವರ್ ಗಳನ್ನು ನೂತನ ತಂತ್ರಜ್ಞಾನದೊಂದಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.

ಪೀಣ್ಯ ದಾಸರಹಳ್ಳಿ: ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರ ಕಣ್ಣು, ಹೃದಯ, ಕಿಡ್ನಿ, ಲಿವರ್ ಗಳನ್ನು ಕುಟುಂಬದ ನಿರ್ಧಾರದ ಮೇರೆಗೆ 8ನೇ ಮೈಲಿ ಬಳಿಯ ಪ್ರಕ್ರಿಯ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಹೃದಯ, ಮಿಂಟೋ ಆಸ್ಪತ್ರೆಗೆ ಕಣ್ಣು ಮತ್ತು ಸೆಂಟ್ ಜಾನ್ ಆಸ್ಪತ್ರೆಗೆ ಕಿಡ್ನಿ, ಲಿವರ್ ಗಳನ್ನು ನೂತನ ತಂತ್ರಜ್ಞಾನದೊಂದಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು.ಅಪಘಾತಕ್ಕೊಳಗಾದ ಮೈತ್ರಿ (39) ಅವರನ್ನು ಪ್ರಕ್ರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಗಾಯಾಳು ಮಹಿಳೆಗೆ ಮೆದುಳು ನಿಷ್ಕ್ರಿಯವಾಗಿರುವುದನ್ನು ಕುಟುಂಬದವರಿಗೆ ತಿಳಿಸಿದ ವೈದ್ಯರು ಉಳಿದ ಅಂಗಾಂಗಗಳನ್ನು ದಾನ ಮಾಡಿದರೆ ಹತ್ತಾರು ಜನರ ಜೀವ ಉಳಿಸಬಹುದು ಎಂದು ಮನವರಿಕೆ ಮಾಡಿದರು.ಅದಕ್ಕೆ ಒಪ್ಪಿದ ಕುಟುಂಬಸ್ಥರು ಕಣ್ಣು, ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು. ತಕ್ಷಣ ಪ್ರಕ್ರಿಯ ಆಸ್ಪತ್ರೆ ವೈದ್ಯರು ಅಂಗಾಂಗಗಳನ್ನು ಬೇರ್ಪಡಿಸಿ ಆಸ್ಪತ್ರೆಗಳಿಗೆ ರವಾನಿಸಿದರು. ಘಟನೆ ಹಿನ್ನೆಲೆ: ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ಡಿ.25 ರ ಸಂಜೆ 7.30 ರಲ್ಲಿ ಮನೆಗೆ ತೆರಳುತ್ತಿದ್ದ ಒಂದೇ ಕುಟುಂಬದ 6 ಮಂದಿ ಇದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರು. ಉಳಿದವರು ಗಂಭೀರ ಗಾಯವಾಗಿ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ ಮೈತ್ರಿ ಎಂಬ ಮಹಿಳೆ ಎಂಟನೇ ಮೈಲಿಯ ಪ್ರಕ್ರಿಯ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಂಗಾಂಗ ದಾನದ ಬಗ್ಗೆ ಮಾತನಾಡಿದ ಮೈತ್ರಿ ಅವರ ತಂಗಿ ಮೇಘ ಮತ್ತು ತಮ್ಮ ಹರ್ಷಿತ್, ನಮ್ಮ ಅಕ್ಕ ಅವರಂತೂ ಮೆದುಳು ನಿಷ್ಕ್ರಿಯಗೊಂಡು ಉಳಿಯಲಿಲ್ಲ. ಅಂಗಾಂಗಗಳ ದಾನದಿಂದ ಬೇರೆ ಜೀವಗಳು ಉಳಿಯುತ್ತವೆ ಎಂದರೆ ಎಲ್ಲೋ ಒಂದು ಕಡೆ ನಮ್ಮ ಅಕ್ಕ ಜೀವಂತವಾಗಿರುತ್ತಾರೆ ಎಂಬುದು ಸಾಕ್ಷಿಯಾಗಿದೆ ಎಂದರು.