ಸಂಘ ಸಂಸ್ಥೆಗಳು ಸರ್ಕಾರಿ ಶಾಲೆ ಸಬಲೀಕರಣ ಕೆಲಸ ಮಾಡುತ್ತಿವೆ: ಮಂಗಳಗೌರಮ್ಮ

| Published : Aug 05 2024, 12:34 AM IST

ಸಾರಾಂಶ

ಚಿಕ್ಕಮಗಳೂರು, ಬಹಳಷ್ಟು ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸಿ ಕೆಲಸ ಮಾಡುತ್ತಿವೆ ಎಂದು ಡಯಟ್ ನ ಪ್ರಾಂಶುಪಾಲರಾದ ಮಂಗಳಗೌರಮ್ಮ ಹೇಳಿದರು.

43 ಸರ್ಕಾರಿ ಶಾಲೆಗಳಿಗೆ ನಲಿಕಲಿ ಟೇಬಲ್‌, ಛೇರ್‌ ವಿತರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಹಳಷ್ಟು ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೈಜೋಡಿಸಿ ಕೆಲಸ ಮಾಡುತ್ತಿವೆ ಎಂದು ಡಯಟ್ ನ ಪ್ರಾಂಶುಪಾಲರಾದ ಮಂಗಳಗೌರಮ್ಮ ಹೇಳಿದರು.

ತಾಲೂಕಿನ ಅಲ್ಲಂಪುರದ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೆಂಗಳೂರಿನ ಸಿನೊಪ್ಸಿಸ್ ಕಂಪನಿ ಮತ್ತು ಇಂಡಿಯಾ ಸುಧಾರ್ ಎಜುಕೇಷನ್ ಆ್ಯಂಡ್‌ ಚಾರಿಟಬಲ್ ಟ್ರಸ್ಟ್ ಸುಮಾರು 10 ಲಕ್ಷ ರು. ವೆಚ್ಚದಲ್ಲಿ ನೀಡಿರುವ ನಲಿಕಲಿ ಟೇಬಲ್ ಮತ್ತು ಛೇರ್‌ಗಳನ್ನು ತಾಲೂಕಿನ 6 ಕ್ಲಸ್ಟರ್ ನ 43 ಸರ್ಕಾರಿ ಶಾಲೆಗಳಿಗೆ ವಿತರಣೆ ವೇಳೆ ಮಾತನಾಡಿದರು.

ಇಂತಹ ಹಲವಾರು ಎನ್‌ಜಿಒ ಗಳನ್ನು ಸಂಪರ್ಕಿಸಿ, ಅವರಿಂದ ಸಹಕಾರ ಪಡೆದು ಚಿಕ್ಕಮಗಳೂರಿನ ಸರ್ಕಾರಿ ಶಾಲೆಗಳ ಸುಧಾರಣೆಗೆ ಶ್ರಮಿಸುತ್ತಿರುವ ಯಲಗುಡಿಗೆ ಶಾಲೆ ಶಿಕ್ಷಕಿ ಗೀತಾ ರವರ ಕಾರ್ಯ ಶ್ಲಾಘನೀಯ. ಅವರಿಗೆ ಇಲಾಖೆ ಪರವಾಗಿ ಅಭಿನಂದನೆ ತಿಳಿಸಿದರು.

ಚಿಕ್ಕಮಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಪಂ ಉಪ ಕಾರ್ಯದರ್ಶಿ ( ಅಭಿವೃದ್ಧಿ ) ಅತಿಕ್ ಪಾಷಾ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಯಲಗುಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಗೀತಾ ಅವರು, ಚಿಕ್ಕಮಗಳೂರಿನ 161 ಸರ್ಕಾರಿ ಹಿರಿಯ ಮತ್ತು ಕಿರಿಯ ಶಾಲೆಗಳಿಗೆ ನಲಿಕಲಿ ಟೇಬಲ್ ಮತ್ತು ಛೇರ್‌ಗಳಿಗೆ ಬೇಡಿಕೆ ಇಡಲಾಗಿತ್ತು. ಇಂಡಿಯಾ ಸುಧಾರ್ ಎಜುಕೇಷನ್ ಆ್ಯಂಡ್‌ ಚಾರಿಟಬಲ್ ಟ್ರಸ್ಟ್ ಸಂಪರ್ಕಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಹಕರಿಸುವಂತೆ ಕೇಳಿದಾಗ ಒಪ್ಪಿಕೊಂಡು ಮೊದಲ ಹಂತದಲ್ಲಿ 43 ಶಾಲೆಗಳಿಗೆ ನಲಿಕಲಿ ಟೇಬಲ್ ಮತ್ತು ಚೇರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಜಾನಕಮ್ಮ, ಡಯಟ್ ನ ಉಪನ್ಯಾಸಕಿ ಮಮತಾ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ನೌಕರರ ಸಂಘದ ಉಪಾಧ್ಯಕ್ಷ ಸುಂದರೇಶ್, ಅಲ್ಲಂಪುರ ಶಾಲೆ ಮುಖ್ಯ ಶಿಕ್ಷಕ ಜೋಗಪ್ಪ ಉಪಸ್ಥಿತರಿದ್ದರು. 2 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಶಾಲೆಯಲ್ಲಿ ನಲಿಕಲಿ ಟೇಬಲ್‌ ಮತ್ತು ಛೇರ್‌ಗಳನ್ನು ಶಾಲೆಗಳಿಗೆ ವಿತರಿಸಲಾಯಿತು. ರವೀಶ್‌, ಅತಿಕ್‌ ಪಾಷಾ, ಮಂಗಳಗೌರಮ್ಮ, ಶಿಕ್ಷಕಿ ಗೀತಾ, ಮಮತಾ, ಜಾನಕಮ್ಮ, ಸುಂದರೇಶ್‌ ಇದ್ದರು.

--------------------------