ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಲಿಂಗಾಯತ ಧರ್ಮದ ಒಳಪಂಗಡಗಳನ್ನು ಒಂದುಗೂಡಿಸುವಲ್ಲಿ ಸಂಘಟಾತ್ಮವಾಗಿ ವಿಧಾಯಕ ಕಾರ್ಯಗಳಿಂದ ಜಿಲ್ಲೆಯಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾದ ಸಾಧನೆಗಳು ಸಮಾಜದಲ್ಲಿ ಯಶಸ್ವಿಯಾಗಲಿ ಎಂದು ಬೆಳಗಾವಿ-ನಾಗನೂರಿನ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.ಪಟ್ಟಣದ ಇಂಚಲ ಕ್ರಾಸ್ ಹತ್ತಿರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಘಟಕದ ಅಶ್ರಯದಲ್ಲಿ ಶನಿವಾರ ಜರುಗಿದ 2023-24ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಭೆಗಳನ್ನು ಗೌರವಿಸುವುದರಿಂದ ಮತ್ತೂಬ್ಬರ ಸಾಧನೆಗೆ ಪ್ರೇರಣೆಯಾಗಲಿವೆ. ದೇಶ ಸುಭದ್ರವಾಗಬೇಕಾದರೆ ಯುವ ಸಮೂಹ ಕ್ರಿಯಾಶೀಲರಾಗಿ ಮುನ್ನೆಡೆದಾಗ ಮಾತ್ರ ಸಾಧ್ಯವೆಂದರು.
ಸಮ್ಮುಖ ವಹಿಸಿದ್ದ ಹುಬ್ಬಳ್ಳಿಯ-ಬೈಲಹೊಂಗಲದ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮದಲ್ಲಿ ಹಲವಾರು ಪಂಗಡ, ಸಂಘಟನೆಗಳಿದ್ದು, ಅವರೆಲ್ಲರೂ ಒಗ್ಗೂಡಿದಾಗ ಮಾತ್ರ ಸ್ವತಂತ್ರ ಧರ್ಮದ ಮಾನ್ಯತೆ ಸಾಧ್ಯವಾಗಲಿದೆ. ಈಗಾಗಿ ತಾರತಮ್ಯ ಮಾಡದೇ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅತ್ಯವಶ್ಯವಾಗಿದೆ ಎಂದರು.ಗುರುಗುಂಟಾದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮುಂಚೆ ಧಾರ್ಮಿಕ ದತ್ತಿ ಇಲಾಖೆ ರಾಜ್ಯ ನಿರ್ದೇಶಕ ಡಾ.ಮಹಾಂತೇಶ ಆರಾದ್ರಿಮಠ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಇಷ್ಟ ಲಿಂಗಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಮಸಾಲಿ ಸಮಾಜದ ಮುಖಂಡ ಶ್ರೀಶೈಲ ಬೋಳಣ್ಣವರ ನೇತೃತ್ವ ವಹಿಸಿದ್ದರು. ಶರಣೆ ಪ್ರೇಮಾ ಅಂಗಡಿ ಪೂಜಾ ವಿಧಿ-ವಿಧಾನ ನೆರವೇರಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಚಿತ್ರನಟ ಶಿವರಂಜನ ಬೋಳಣ್ಣವರ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಮಾಜಿ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ, ನಿರ್ದೇಶಕರಾದ ಮಹಾಂತೇಶ ಮತ್ತಿಕೊಪ್ಪ, ರಾಜು ಕುಡಸೋಮಣ್ಣವರ, ಶ್ರೀಶೈಲ ಶರಣಪ್ಪನವರ, ಡಾ.ಶರಣಕುಮಾರ ಅಂಗಡಿ, ಉದ್ಯಮಿ ವಿಜಯ ಮೆಟಗುಡ್ಡ, ಸದಾನಂದ ನಂಜಪ್ಪನವರ, ಪ್ರೇಮಾ ಅಂಗಡಿ, ಶ್ರೀಕಾಂತ ಮಾಳಕ್ಕನವರ, ಉಮೇಶ ಬಾಳಿ, ಕಾಂಗೈ ಮುಖಂಡ ನಾನಾಸಾಹೇಬ ಪಾಟೀಲ, ಕಜಾಪ ಯುವ ಮುಖಂಡ ಸುಭಾಶ ತುರಮರಿ, ಕಾಂಗ್ರೆಸ್ ಮುಖಂಡ ಕಾರ್ತಿಕ ಪಾಟೀಲ, ಡಾ.ಮಹಾಂತೇಶ ಕಳ್ಳಿಬಡ್ಡಿ, ಅಂಬಿಗರ ಸಮಾಜದ ಮುಖಂಡ ಮಲ್ಲಪ್ಪ ಮುರಗೋಡ, ಕುರುಬ ಸಮಾಜದ ಮುಖಂಡ ವಿಜಯಕುಮಾರ ದಳವಾಯಿ, ಸಂತೋಷ ಕೊಳವಿ, ಬಾಳನಗೌಡ ಪಾಟೀಲ ಇತರರು ವೇದಿಕೆ ಮೇಲಿದ್ದರು.ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಸದಸ್ಯರು, ಸಾಧಕ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ತಾಲೂಕು ಸಂಘಟನೆಯ ಅಧ್ಯಕ್ಷ ಉಮೇಶ ಬೋಳೆತ್ತಿನ ಸ್ವಾಗತಿಸಿದರು. ನಿವೃತ ಶಿಕ್ಷಕಿ ಗೌರಮ್ಮ ಕರ್ಕಿ ನಿರೂಪಿಸಿದರು. ನಗರ ಘಟಕ ಅಧ್ಯಕ್ಷ ಮಹೇಶ ಕೋಟಗಿ ವಂದಿಸಿದರು. ಸುಮಾರು 150ಕ್ಕೂ ಅಧಿಕ ಸಾಧಕ ವಿದ್ಯಾರ್ಥಿಗಳು, ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಂಘಟನೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.