ಸಂಸ್ಥೆಗಳು ಸದೃಢವಾಗಲು ಸಂಘಟನೆ ಮುಖ್ಯ

| Published : Dec 21 2024, 01:17 AM IST

ಸಾರಾಂಶ

ಸಂಸ್ಥೆಗಳು ಸದೃಢವಾಗಬೇಕಾದರೆ ಕ್ರಿಯಾಶೀಲತೆ, ಪ್ರಾಮಾಣಿಕತೆಯ ಸಂಘಟನೆ ಮುಖ್ಯ ಎಂದು ಶಾಂತಲಾ ಗ್ರೂಪ್ ಇಂಡಸ್ಟ್ರಿ ಚೇರ್ಮನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಸ್ಥೆಗಳು ಸದೃಢವಾಗಬೇಕಾದರೆ ಕ್ರಿಯಾಶೀಲತೆ, ಪ್ರಾಮಾಣಿಕತೆಯ ಸಂಘಟನೆ ಮುಖ್ಯ ಎಂದು ಶಾಂತಲಾ ಗ್ರೂಪ್ ಇಂಡಸ್ಟ್ರಿ ಚೇರ್ಮನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಹೇಳಿದರು.ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ನೂತನ ಅಧ್ಯಕ್ಷ ಡಿ.ಜಿ. ಬೆನಕಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ ಈಗಾಗಲೇ ಕೈಗಾರಿಕೆಗಳಿಗೆ ಪೂರಕವಾದ ಹಾಗೂ ಕಾರ್ಮಿಕರಿಗೆ ಮತ್ತು ಸದಸ್ಯರಿಗೆ ಬೇಕಾದ ಅಗತ್ಯವಾದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.ಅಸೋಸಿಯೇಷನ್ ವತಿಯಿಂದ ಕೈಗಾರಿಕಾ ಸುರಕ್ಷತೆ ಬಗ್ಗೆ ಅಗತ್ಯವಾದ ಮಾಹಿತಿಗಳನ್ನು ನೀಡುವುದರ ಜೊತೆಗೆ ಅವರಿಗೆ ಕೌಶಲ್ಯ ಅಭಿವೃದ್ಧಿಯ ತರಬೇತಿಗಳನ್ನು ಸಹ ನೀಡುತ್ತಿದೆ. ಇದರಿಂದ ಸದಸ್ಯರ ಹಾಗೂ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿ ಆಗುತ್ತಿದೆ. ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ರಸ್ತೆ, ನೀರು ಹಾಗೂ ಲೈಟ್, ಮೂಲಸೌಕರ್ಯ ಉತ್ತಮಗೊಳಿಸುವುದರ ಮುಖಾಂತರ ಕೈಗಾರಿಕಾ ವಸಹಾತು ರಾಜ್ಯದಲ್ಲಿ ಮಾದರಿಯಾಗಿ ಅಭಿವೃದ್ಧಿಯಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಂ. ರಾಜು ಅವರು ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಆ ಸಂಸ್ಥೆಗೆ ದುಡಿದ ಹಲವಾರು ಮಾಜಿ ಅಧ್ಯಕ್ಷರ ಸಾಧನೆ ಮತ್ತು ಶ್ರಮದ ಬಗ್ಗೆ ವಿವರಿಸಿದರು. ಸಂಸ್ಥೆಯಿಂದ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಆಗುವುದು ಬಾಕಿ ಇದೆ. ಅವೆಲ್ಲವೂ ಸಕಾಲದಲ್ಲಿ ನೆರವೇರಬೇಕು ಎಂದರು.ಮಾಜಿ ಅಧ್ಯಕ್ಷ ರಮೇಶ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.ಡಿ.ಜಿ. ಬೆನಕಪ್ಪ ಅವರು ರಮೇಶ್ ಹೆಗಡೆ ಅವರಿಂದ ನೂತನ ತಂಡದೊಂದಿಗೆ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಚಂದ್ರಶೇಖರ್ ಎ.ಎಲ್., ಕಾರ್ಯದರ್ಶಿಯಾಗಿ ರಾಜೇಶ್.ಎಸ್.ಟಿ., ಖಜಾಂಚಿಯಾಗಿ ದಿನೇಶ್. ಎಚ್.ಎಲ್., ನಿರ್ದೇಶಕರಾಗಿ ನಂದನ್ ಮೂರ್ತಿ, ಸಂಜಯ್ ಪಾಟೀಲ್, ಎಂ. ಸಂತೋಷ್‌ , ಸೌರಭ , ಎನ್‌. ಸುರೇಂದ್ರ, ವಿಶೇಷ ಆಹ್ವಾನಿತರಾಗಿ ಮದಕರ ಜೋಯಿಸ್, ಡಿಎಸ್. ಚಂದ್ರಶೇಖರ್, ಎಸ್. ರುದ್ರೇಗೌಡ, ಎಂ. ಹಾಲಪ್ಪ ಅವರು ಅಧಿಕಾರ ವಹಿಸಿಕೊಂಡರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ಎ.ಎಂ. ಸುರೇಶ್, ಉಪಾಧ್ಯಕ್ಷ ಜಿ. ವಿಜಯಕುಮಾರ್, ಖಜಾಂಚಿ ವಿ. ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.